ಕೊಪ್ಪಳ : ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕ, ಹೆಬ್ಬಾಳ ಬೃಹನ್ಮಠದ ಕರ್ತೃಗಳಾದ ಶ್ರೀ ಬೋಳೋಡಿಬಸವೇಶ್ವರ ಶ್ರೀ ಕಂತೆ ಒಡೆಯ ಶಿವಯೋಗಿಗಳು ಹಂಪಿ ವಿಜಯನಗರದ ಆನೆಗುಂದಿ ಅರಸರ ಅರಮನೆಯಲ್ಲಿಯ ಬ್ರಹ್ಮರಾಕ್ಷಸ ಬಾದೆ ನಿವಾರಿಸಿ ಶ್ರೀಮನ್ ಮಹಾರಾಜರಿಗೆ ಆಶೀರ್ವದಿಸಿ ಒಂದೇ ದಿನದಲ್ಲಿ (ಭೂತ) ದೆವ್ವಗಳಿಂದ ಶ್ರೀ ಮಠವನ್ನು ನಿರ್ಮಿಸಿದ ಇತಿಹಾಸ ಬರೆದಿರುವ ಪುಣ್ಯಕ್ಷೇತ್ರವು ಇಂದಿಗೂ ತುಂಗಭದ್ರ ದಡದ ಹೆಬ್ಬಾಳದಲ್ಲಿ ವಿರಾಜಮಾನ ಎಂದು ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿಗಳು ಪ್ರಾಸ್ತವಿಕ ನುಡಿಗಳು ಮಾತನಾಡಿದರು.
ಈ ಶ್ರೀ ಮನೃಪ ಶಾಲಿವಾಹನ ಶಕೆ 1945ನೇ ಶೋಭಕೃತನಾಮ ಸಂ।।ರದ ಮಾರ್ಗಶಿರ ಶುದ್ಧ ತ್ರಯೋದಶಿ ದಿನಾಂಕ : 24-12-2023 ರವಿವಾರ ಹೆಬ್ಬಾಳ ಬೃಹನ್ಮಠದ ಪಟ್ಟಾಧ್ಯಕ್ಷರಾದ ಧರ್ಮರತ್ನಾಕರ, ಶಿವಾಚಾರ್ಯಭೂಷಣ, ಶಿವಾಚಾರ್ಯಭಾಸ್ಕರ, ಪರಮಪೂಜ್ಯ ವಿದ್ವಾನ್ 108 ಶ್ರೀ ಷ.ಬ್ರ.ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿದ ಜಾತ್ರೆಯು ವಿವಿಧ ಕಾರ್ಯಕ್ರಮಗಳು 23 ನೆ ತಾರೀಕಿನಿಂದಲೇ ಪಂಚಾಚಾರ್ಯರ ಧ್ವಜಾರೋಹಣ. ಜೊತೆಗೆ ಕನ್ನಡ ನಾಡಿನ ದ್ವಜಾರೋಹಣ ಮಾಡಿದ್ದೂ ವಿಷೇಶವಾಗಿ ನೆರವೇರಿಸಿದರು.ತುಂಗಭದ್ರಾ ನದಿಯಿಂದ ಗಂಗೆಯನ್ನು ಕಳಸಕನ್ನಡಿ,ಕುಂಭದೊಂದಿಗೆ, ಪುರವಂತರು ಸಕಲ ವಾಧ್ಯ ವೈಭವದಿಂದ ಶ್ರೀ ಮಠಕಳೆ ಹೆಚ್ಚಾಗಿತ್ತು.
ಕೊಪ್ಪಳ ಜಿಲ್ಲೆ ಉಸ್ತುವಾರಿ ಸಚಿವರು ಧರ್ಮ ಸಭೆಯಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದರು ಹೆಬ್ಬಾಳ ಶ್ರೀ ಗಳು ಪ್ರತಿಯೊಂದು ಸಮುದಾಯಕ್ಕೂ ಇಷ್ಟವಾಗುವ ಗುರುಗಳು ಹಾಗೂ ಯಾರು ಕರೆಯುತ್ತಾರೆ ಅವರ ಮನೆಗೆ ತಪ್ಪದೆ ತೆರಳುವ ಮೂಲಕ ಎಲ್ಲರ ಮನಸ್ಸಿಗೆ ನೆಚ್ಚಿನ ಈ ಭಾಗದಲ್ಲಿ ಅಪರೂಪದ ಗುರುಗಳು ಎಂದೇ ಹೇಳಬಹುದು ಎಂದರು. ವೈದಿಕ : ಶ್ರೀ ಶಶಿಧರ ಶಾಸ್ತ್ರೀಗಳು. ಶ್ರೀ ಘನಮಠ ಶಾಸ್ತ್ರಿಗಳು ಹಾಗೂ ವಿದ್ಯಾರ್ಥಿಗಳು ಸಾಂಗತ್ರಯ ಪಾಠಶಾಲೆ ಕಂಪ್ಲಿ. ಹಾಗೂ ಗಂಗಾವತಿ ತಾ।। ವೀರಶೈವ ಜಂಗಮ ಪೂರೋಹಿತರು ಮತ್ತು ಅರ್ಚಕರ ಸಂಗಡಿಗರಿಂದ ನೆರವೇರಿಸಿದರು.
ಬ್ರಾಮ್ಮಿ ಮುಹೂರ್ತದಲ್ಲಿ ಶ್ರೀ ಕರ್ತೃಗದ್ದಿಗೆಗಳಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ “ಜಂಗಮ ವಟುಗಳಿಗೆ ಅಯ್ಯಾಚಾರ” ಭಕ್ತಾಧಿಗಳಿಗೆ ಶಿವದೀಕ್ಷೆ, ಶ್ರೀ ಗಣೇಶ, ಮೃತ್ಯುಂಜಯ, ನವಗ್ರಹ, ಶ್ರೀ ರುದ್ರಹೋಮ, ಶ್ರೀ ಚಂಡಿಹೋಮ ಮತ್ತು ಸುಮಂಗಲಿಯರಿಗೆ ಉಡಿತುಂಬುವುದು, ಭಕ್ತಾದಿಗಳಿಂದ ತೇರಿಗೆ ಪಟಏರಿಸುವುದು,ವೇದ ಘೋಷದೊಂದಿಗೆ ಶ್ರೀ ಮಠದ ರಜತ ನಂದಿ ಮೂರ್ತಿಯನ್ನು ಉತ್ಸವದೊಂದಿಗೆ ತಂದು ಅಲಂಕರಿಸಿ, ಪೂಜಿಸಿ ಮಡಿಯಿಂದ ತೇರು ಎಳೆಯಲಾಯಿತು, ಹಾಗೂ ಮಧ್ಯಾಹ್ನ 12-35 ನಿಕ್ಕೆ ಅನ್ನಸಂತರ್ಪಣೆ ಅಚ್ಚುಕಟ್ಟಾಗಿ ನೆರವೇರಿತು.
ಧಾರ್ಮಿಕ ಸಭೆ : ಮಠದ ಪೂಜ್ಯಶ್ರೀನಾಗಭೂಷಣ ಶ್ರೀಗಳ ಕುರಿತಾದ ಮೂರು ಪುಸ್ತಕಗಳು ಲೋಕಾರ್ಪಣೆಗೊಂಡವು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಶ್ರೀ ಬೋಳೋಡಿಬಸವೇಶ್ವರ ಪ್ರಶಸ್ತಿ ನೀಡಿ ಆಶೀರ್ವಾದ ಮಾಡಿದ ಶ್ರೀ ಗಳು,ನಾಡಿನ ಹರ-ಗುರು ಚರಮೂರ್ತಿಗಳು, ಶಿವಶರಣರು ಹಾಗೂ ರಾಜಕೀಯ ಧುರೀಣರು, ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು, ಸಮಾಜಸೇವೆ ಮಾಡಿದ ಗಣ್ಯರಿಗೆ ದಾನಿಗಳಿಗೆ ಹಾಗೂ ಭಕ್ತರಿಗೆ ಶ್ರೀ ಗಳಿಂದ ಆಶೀರ್ವಾದ ನೀಡಿದರು.