ಕೋಲಾರ: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಕೋಳಾರ ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ. ಧರ್ಮ ಇಲ್ಲ ಎಂದು ಗಲ್ಲಿಗೇರಿಸಬೇಕು. ಜೊತೆಗೆ ಆ ಧರ್ಮ , ಈ ಧರ್ಮ ಅಂತಾ ಹೇಳುವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ಗಾಂಧಿ ಜಯಂತಿ ಪ್ರಯುಕ್ತ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು. ಉದಯನಿಧಿ ಅವರಿಗೆ ದುಡ್ಡು ಜಾಸ್ತಿಯಾಗಿ ಮೆಂಟಲ್ ಆಗಿದ್ದಾರೆ. ಅವನಿಗೆ ಎರಡೂ ಮೂರು ಹುಚ್ಚು ನಾಯಿ ಕಚ್ಚಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ನಾವು ಇರೋದು ಭಾರತ ದೇಶದಲ್ಲಿ ಯಾರು ಯಾವ ಧರ್ಮವನ್ನ ಯಾರು ಬೇಕಾದ್ರು ಪಾಲನೆ ಮಾಡಲಿ, ನಿನ್ನ ಧರ್ಮವನ್ನ ನೀನು ಪಾಲನೆ ಮಾಡು. ನನ್ನ ಧರ್ಮವನ್ನ ಪಾಲನೆ ಮಾಡಬೇಡ ಎನ್ನುವುದಕ್ಕೆ ಯಾರಿಗೂ ಹಕ್ಕಿಲ್ಲ ನನ್ನ ಧರ್ಮವನ್ನ ಇಲ್ಲ ಎಂದು ಹೇಳುವುದಕ್ಕೆ ನೀನ್ಯಾರು? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.