ಸಂಚಾರ ನಿಯಮ (Traffic rules) ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯ ಪೊಲೀಸ್ ಇಲಾಖೆಯ ಸಂಚಾರ ಪೊಲೀಸರು (Police) ವಿಧಿಸಿರುವ ದಂಡ ಪಾವತಿಗೆ ಶೇ. 50 ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಹೀಗೆ ರಿಯಾಯಿತಿ ನೀಡಿದ್ದೆ ತಡ ದಂಡ ಪಾವತಿ ಮಾಡಲು ಸಿಟಿ ಮಂದಿ ಮುಂದಾಗಿದ್ದಾರೆ. ಬೆಂಗಳೂರಿ (Bangalore) ನ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಸವಾರರು ಆಗಮಿಸಿ ದಂಡ ಪಾವತಿಸುತ್ತಿದ್ದಾರೆ. ಇದುವರೆಗೂ ಪೇಟಿಎಂ ಮೂಲಕ 5 ಲಕ್ಷ ರೂ. ದಂಡ ಪಾವತಿ ಮಾಡಲಾಗಿದೆ.
ವಾಹನ ಸವಾರರಿಂದ ನೀರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬರುತ್ತಿದ್ದು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಕೇವಲ 3 ಗಂಟೆಗಳಲ್ಲಿ 17 ಸಾವಿರ ಕೇಸ್ಗಳ ದಂಡ ಪಾವತಿಯಾಗಿದೆ. ಕೇವಲ ಪೇಟಿಎಂ ಮೂಲಕವಷ್ಟೇ 53 ಲಕ್ಷ ದಂಡ ಪಾವತಿ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಫೆಬ್ರವರಿ 11 ರವರೆಗೆ ರಿಯಾಯಿತಿಗೊಳಿಸಿರುವ ಸರ್ಕಾರ, 44 ಬಗೆಯ ಎಲ್ಲಾ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವ ಪೈನ್ಗಳಿಗೂ ರಿಯಾಯಿತಿ ನೀಡಿದೆ. ಬಾಕಿ ಇರುವ ದಂಡದ ವಿವರಗಳನ್ನ ವೀಕ್ಷಿಸುವ ಮತ್ತು ಪಾವತಿ ವಿಧಾನವನ್ನು ಕರ್ನಾಟಕ (Karnataka) ಒನ್ ವೆಬ್ ಸೈಟ್ನಲ್ಲಿ ವಿವರಗಳನ್ನ ಪಡೆದು ಪಾವತಿಸಬಹುದು. ಪೇಟಿಎಂ ಆ್ಯಪ್ (Pay tm) ಮುಖಾಂತರ ಉಲ್ಲಂಘನೆಗಳ ವಿವರ ಪಡೆದು ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಬಹುದು. ಸಾರ್ವಜನಿಕರು ರಿಯಾಯಿತಿ ಅವಕಾಶ ಸದುಪಯೋಗಪಡಿಸಿಕೊಳ್ಳುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : – ನಾನು ಮರಳಿ ಮಾತೃ ಪಕ್ಷ ಜೆಡಿಎಸ್ ಗೆ ಸೇರ್ಪಡೆಯಾಗುತ್ತಿದ್ದೇನೆ – ಕೆ.ಟಿ ಶಾಂತಕುಮಾರ್