State News

ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ವಿರುದ್ಧ ಕಾರು ಚಾಲಕನು ಪತ್ನಿ ಜೊತೆ ಎಸ್ಪಿಗೆ ದೂರು

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ವಿರುದ್ದ ಕಿರುಕುಳ ಆರೋಪ ಪ್ರಕರಣದ ಭಾಗವಾಗಿ ಮಂಗಳವಾರದಂದು ಪ್ರಜ್ವಲ್ ರೇವಣ್ಣ ನವರ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ನಿ ಜೊತೆಗೆ ಜಿಲ್ಲಾ ಎಸ್ಪಿ( SP) ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

ತಮಗೆ ಸೇರಿದ 13 ಎಕರೆ ಭೂಮಿಯನ್ನ ತಾವು ಹೇಳಿದವರಿಗೆ ಮಾರಾಟ ಮಾಡಲು ಕೂಡಿಹಾಕಿ ಕಿರುಕುಳ ಮತ್ತು ಹಲ್ಲೆ ಆರೋಪ. ಮಾರ್ಚ್ 15. ರಂದು ಮಾತನಾಡುವ ಸಲುವಾಗಿ ಕರೆಸಿ ಮೂರು ದಿನ ಕೂಡಿ ಹಾಕಿ ಕಿರುಕುಳ ಕೊಡಲಾಗಿದೆ ಎಂಬುದು ದೂರು.

ಕಿರಣ್ ರೆಡ್ಡಿ ಎಂಬುವವರ ಹೆಸರಿಗೆ ಭೂಮಿ ಬರೆದು ಕೊಡುವಂತೆ ಬಲವಂತವಾಗಿ ಕ್ರಯ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಕಾರ್ತಿಕ್ ಆರೋಪ. ಬಲವಂತವಾಗಿ ಸಹಿ ಹಾಕಿಸಿಕೊಂಡು ಕ್ರಯಮಾಡಿಸಿಕೊಂಡು 41ಲಕ್ಷ ಹಣವನ್ನು ತಮ್ಮ ಖಾತೆಯಿಂದ ತೆಗೆಯಲಾಗಿದೆ ಎಂಬುದು ದೂರಾಗಿದೆ.

ಭವಾನಿ ರೇವಣ್ಣ ಹಲ್ಲೆಯಿಂದ ತನ್ನ ಪತ್ನಿಗೆ ಗರ್ಭಪಾತವಾದ ಬಗ್ಗೆಯೂ ಕಾರ್ತಿಕ್ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂದ ಎಸ್ಪಿಗೆ ದೂರು ನೀಡಲು ಆಗಮಿಸಿದ ಕಾರ್ತಿಕ್ ದಂಪತಿ ತಮ್ಮ ವಕೀಲ ದೇವರಾಜೇಗೌಡ ಜೊತೆಯಲ್ಲಿ ಆಗಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರಿಗೆ ಮನವಿ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!