ಬೆಂಗಳೂರು: ಒಂದು ಮಗುವನ್ನು ಪಡೆಯಲು ಅದೇಷ್ಟೋ ಮಂದಿ ನೂರಾರು ದೇವರಿಗೆ ಹರಕೆ ಹೊತ್ತು ವ್ರತ ಮಾಡುತ್ತಾರೆ. ಆದ್ರೆ ಇಲ್ಲೊಂದು ಗ್ಯಾಂಗ್ ಹಣದ ಆಸೆಗಾಗಿ ಹಸುಗೂಸುಗಳನ್ನ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಅಸಾಮಿಗಳನ್ನ ಸಿಸಿಬಿ ಪೋಲಿಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಸಿಸಿಬಿ ಅಧಿಕಾರಿಗಳ ಆರೋಪಿಗಳ ನೆಟ್ವರ್ಕ್ ಕಂಡು ಶಾಕ್ ಆಗಿದ್ದಾರೆ ಹಾಗಾದ್ರೆ .ಯಾರು ಆರೋಪಿಗಳು, ಲಾಕ್ ಆಗಿದ್ದು ಎಲ್ಲಿ? ಇಲ್ಲಿದೆ ಮಾಹಿತಿ.
ಹೌದು ಹಸಗೂಸುಗಳನ್ನ ಮಾರಾಟ ಮಾಡುತ್ತಿದ್ದ ಖರ್ತನಾಕ್ ಗ್ಯಾಂಗ್ ನೆರೆಯ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಕ್ರಿಯಾವಾಗಿದ್ದು ಇದರ ಜಾಲವನ್ನು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ಭೇದಿಸಿದೆ. ಪ್ರಕರಣ ಸಂಬಂಧ 8 ಆರೋಪಿಗಳನ್ನು ಸಿಸಿಬಿ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದೆ. ಹಾಲುಗಲ್ಲದ ಕಂದಮ್ಮಗಳನ್ನ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡ್ತಿದ್ದ ಜಾಲ ಇದಾಗಿದ್ದು, ಕಳೆದ ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 20 ದಿನದ ಗಂಡು ಹಸುಗೂಸನ್ನ ಕಾರಿನಲ್ಲಿ ಮಾರಾಟ ಮಾಡಲು ತಂದಿದ್ದ ವೇಳೆ, ಮಗು ಮಾರಾಟ ಮಾಡುವ ವೇಳೆ ಸಿಸಿಬಿಗೆ ರೆಡ್ ಹ್ಯಾಂಡಾಗಿ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.
ಬಂಧಿತ ಆರೋಪಿಗಳ ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ತಮಿಳುನಾಡು ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ, ಶರಣ್ಯ ಗೋಮತಿ, ರಾಧ ಸುಹಾಸಿನಿ ಮಾಹಲಕ್ಷ್ಮೀ ಸೇರಿ ಎಂಟು ಆರೋಪಿಗಳ ಬಂಧನವಾಗಿದೆ. ಆರೋಪಿಗಳು ಕಾರಿನಲ್ಲಿ ಮಗು ಮಾರಾಟಕ್ಕೆ ಬಂದ ವೇಳೆ ಸಿಕ್ಕಿ ಬಿದ್ದಿದ್ರು. ೨೦ದಿನದ ಗಂಡು ಶಿಶುವನ್ನ ರಕ್ಷಣೆ ಮಾಡಲಾಗಿದೆ. ಬಂಧಿತ ಆರೋಪಿಗಳ ಜಾಲ ಬೃಹದಾಕಾರವಾಗಿದ್ದು ಆರೋಪಿಳನ್ನು ಹಲವು ಆಯಾಮಗಳಲ್ಲಿ ವಿಚಾರಣೆಗೊಳಪಡಿಸಿ ತನಿಖೆ ನಡೆಸಲಾಕ್ತಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಈ ಗ್ಯಾಂಗ್ ಸಕ್ರಿಯವಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳನ್ನ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ವಿಚಾರಣೆ ನಡೆಸ್ತಿರುವ ಪೊಲೀಸರು,
ಆರೋಪಿಗಳ ಬಳಿಯಿಂದ 20 ದಿನದ ಗಂಡು ಮಗು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.ಇನ್ನೂ ಆರೋಪಿಗಳು ಯಾರು ಯಾರಿಗೆ ಮಕ್ಕಳ ನ್ನ ಮಾರಾಟ ಮಾಡಿದ್ದಾರೋ ಹಾಗೂ ಎಲ್ಲಿಯಾದರೂ ಕಳ್ಳತನ ಮಾಡಿದ್ದಾರೋ ತನಿಖೆ ವೇಳೆ ತಿಳಿದುಬರಬೇಕಿದೆ.
ವರದಿ: ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್