ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 3,500 ಕೋಟಿ ರೂಪಾಯಿ ಅನುದಾನ ನೀಡಿದ್ದರಿಂದ ವಿರೋಧ ಪಕ್ಷಗಳಿಗೆ ನಿರಾಶೆಯಾಗಿದೆ. ಅದಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (BASAVARAJ BOMMAI)ತಿರುಗೇಟು ನೀಡಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಪತ್ರಿಕಾ ಗೋಷ್ಠಿ. https://t.co/POTwSVGV2i
— Basavaraj S Bommai (@BSBommai) February 2, 2023
ವಿಧಾನಸೌಧ (VIDHANSOUDHA) ದಲ್ಲಿ ಬಜೆಟ್ ವಿಚಾರವಾಗಿ ಮಾತನಾಡಿದ ಅವರು, ಭದ್ರಾ ಮೇಲ್ಡಂಡೆಗೆ 5300 ಕೋಟಿ ಅನುದಾನ ಸಿಕ್ಕಿದ್ದಕ್ಕೆ ವಿರೋಧ ಪಕ್ಷಗಳು ಸ್ವಾಗತ ಮಾಡಬೇಕು. ಅದರಲ್ಲಿ ತಪ್ಪು ನೋಡುವಂತದ್ದು ಸರಿಯಲ್ಲ. ಈ ಅನುದಾನ ಕೊಟ್ಟಿದ್ದಕ್ಕೆ ಅವರಿಗೆ ನಿರಾಶೆ ಆಗಿದೆ. ಅದಕ್ಕಾಗಿ ಈ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನುಓದಿ :- ಕಾಂಗ್ರೆಸ್ ಹಿರಿಯ ಮುಖಂಡ ಕೆ.ಸಿ ಕೊಂಡಯ್ಯಗೆ ಶೋಕಾಸ್ ನೋಟಿಸ್…!
ಭದ್ರಾ ಮೇಲ್ಡಂಡೆ ಯೋಜನೆ ಜಾರಿ ಪ್ರಕ್ರಿಯೆ ಮಾಜಿ ಸಿಎಂ ನಿಜಲಿಂಗಪ್ಪ (NIJA LINGAPPA) ಕಾಲದಲ್ಲೇ ಇತ್ತು. 1960 ರಿಂದ 2008 ರವರಗೆ ನಿರ್ದಿಷ್ಟ ಕ್ರಮ ಆಗಿರಲಿಲ್ಲ. ಸುಮಾರು 40 ವರ್ಷ ಪ್ರಕ್ರಿಯೆಯಲ್ಲಿ ಕಳೆದು ಹೋಯ್ತು. ಯಾವ ಸರ್ಕಾರವೂ ಮಾಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಮಾಡಿತು ಎಂದು ಹೇಳಿದರು. ಬಜೆಟ್ ನಲ್ಲಿ ಘೋಷಣೆ ಆದ 3,500 ಕೋಟಿ ಅನುದಾನ ಜಾರಿಗೆ ಬರಲ್ಲ, ಅಥವಾ ಮುಂದಿನ ವರ್ಷ ಸಿಗಲಿದೆ ಎಂದೆಲ್ಲಾ ಟೀಕೆ ಮಾಡುತ್ತಿದ್ದಾರೆ. ಆದರೆ ಬಜೆಟ್ ಜಾರಿಗೆ ಬರುವುದು ಮುಂದಿನ ವರ್ಷ ಎಂದು ತಿರುಗೇಟು ನೀಡಿದರು.
ಇದನ್ನುಓದಿ :- ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ- ಬ್ಯಾಂಕ್ ಗಳಿಂದ ವಿವರ ಕೇಳಿದ RBI