ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ವಿದ್ಯಮಾನಗಳು ಆಗ್ತಾನೆ ಇರ್ತಾವೆ. ಸದ್ಯ ವಿಧಾನಸಭೆಯ ಚುನಾವಣೆಯನ್ನ ಗೆದ್ದ ಕಾಂಗ್ರೆಸ್ ಅಧಿಕಾರದ ಗದ್ದುಗೆಯನ್ನ ಹಿಡಿದಿದೆ. ಇತ್ತಾ ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಬಾಗಿನಲ್ಲಿ ದೊಡ್ಡ ಹಿನ್ನಡೆ ಆಗಿದಂತೂ ಸತ್ಯ… ವಿಧಾನಸಭೆಯ ಚುನಾವಣೆಯ ನಂತರ ರಾಜ್ಯದಲ್ಲಿ ಹಲವು ರೀತಿಯ ಬದಲಾವಣೆಯ ಗಾಳಿ ಬೀಸ ತೊಡಗಿದೆ…. ನಿರೀಕ್ಷೆಯಂತೆ, ಸ್ವತಃ ಕಾಂಗ್ರೆಸ್ ನಾಯಕರೇ ಅಂದುಕೊಂಡಂತೆ ಪ್ರಚಂಡ ಬಹುಮತ ಗಳಿಸುವ ಮೂಲಕ ತನ್ನ ಗತ್ತನ್ನ ಪ್ರದರ್ಶಿಸುತ್ತಿದೆ. ಆದರೆ ಈ ಎಲ್ಲ ಬೆಳವಣಿಗೆಯ ಮಧ್ಯೆ ಆಡಳಿತರೂಢ ಕಾಂಗ್ರೆಸ್‍ಗೆ ಮತ್ತೊಂದು ಬಿಗ್‍ಚಾಲೆಂಜ್ ಎದುರಾಗ್ತಿದೆ. ಯೆಸ್…. ರಾಜ್ಯ ಕಾಂಗ್ರೆಸ್‍ನ ಮುಂದೇ ಸವಾಲಿನ ರಾಶಿಯೇ ಎದ್ದು ಕಾಣ್ತಿದೆ. ಇವುಗಳನ್ನ ತಾನೆ ಅಂದುಕೊಂಡ ರೀತಿಯಲ್ಲಿ ಮಾಡಿ ಮುಗಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರದ ಮುಂದಿದೆ. ಅದರಲ್ಲಿ ಮುಖ್ಯವಾಗಿ ಪರಿಷತ್ ಎಲೆಕ್ಷನ್‍ನನ್ನು ಅತ್ಯಂತ ಜಾಣತನದಿಂದ ಒಂದಿಷ್ಟು ಗೊಂದಲಕ್ಕೆ ಎಡೆ ಮಾಡಿಕೊಡದೇ, ನಿಭಾಯಿಸಿಕೊಂಡು ಹೋಗುವ ಹಾದಿಯಲ್ಲಿದೆ ಕಾಂಗ್ರೆಸ್. ಸದ್ಯ ಪರಿಷತ್ ಚುನಾವಣೆಯ ಕಾವು ಜೋರಾಗ್ತಿದೆ… ಆದರೆ ಸಿದ್ದರಾಮಯ್ಯ ಸರ್ಕಾರ ಬಾಕಿ ಉಳಿದುಕೊಂಡಿರುವ ಸ್ಥಾನಗಳನ್ನ ಭರ್ತಿ ಮಾಡೋದಕ್ಕೆ ಹಲವು ರೀತಿಯ ಚಿಂತನೆಗಳನ್ನು ಮಾಡ್ತಿದೆ…ಆದರೆ ಮೂಲ ಸಮಸ್ಯೆ ಎದುರಾಗ್ತಿರೋದು ಏನಂದ್ರೆ, ಖಾಲಿ ಉಳಿದುಕೊಂಡಿರುವ ಕೆಲವೆ ಕೆಲವು ಸ್ಥಾನಗಳಿಗೆ ಡಜನ್‍ಗಟ್ಟಲೆ ಆಕಾಂಕ್ಷಿಗಳು ದುಂಬಾಲು ಬಿದ್ದಿರೋದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇನ್ನಿಲ್ಲದ ತಲೆ ಬಿಸಿ ಶುರುವಾದಂತಿದೆ.
ಚುನಾವಣೆ ಯಾವುದೇ ಇರಲೀ, ಅಲ್ಲಿ ಸವಾಲುಗಳು ಬೆಟ್ಟದಷ್ಟು ಮನೆ ಮಾಡಿಕೊಳ್ತಾವೆ…. ನಿಜ ಹೇಳಬೇಕೆಂದರೆ ಆ ಕ್ಷಣದ ಒತ್ತಡ, ತಂತ್ರಗಾರಿಕೆ, ಇತ್ಯಾದಿ, ಇತ್ಯಾದಿ ಅಂಶಗಳು ಚುನಾವಣಾ ನಡೆಸುವ ಕೇಂದ್ರಿಕೃತವಾದ ವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮ ಬೀರುವಂತೆ ಮಾಡುತ್ತವೆ…. ಸದ್ಯ ಹಾಗೆ ನೋಡಿದರೆ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಪರಿಷತ್ ಚುನಾವಣೆಯನ್ನ ಅಚ್ಚುಕಟ್ಟಾಗಿ, ಯಾವುದೇ ಗೊಂದಲ, ಆಕ್ಷೇಪಗಳು ಬಂದೋದಗದಂತೆ ನಿಭಾಯಿಸೋದು ಸವಾಲಿನ ಕೆಲಸ.. ವಿಧಾನಪರಿಷತ್ ಚುನಾವಣೆಯ ಘಮ ಬೀರ್ತಿದೆ… ಆದ್ರೆ ಸದ್ಯಕ್ಕೆ ರಾಜ್ಯ ವಿಧಾನಪರಿಷತ್‍ನಲ್ಲಿ ಖಾಲಿ ಉಳಿದಿರೋದು ಬರೀ 7 ಪರಿಷತ್ ಸ್ಥಾನಗಳಷ್ಟೇ. ಹೌದು ರಾಜ್ಯ ವಿಧಾನಪರಿಷತ್‍ನ ಬಲಾಬಲ ಒಟ್ಟು 75 ಸ್ಥಾನಗಳು. ಆದ್ರೆ ಸದ್ಯಕ್ಕೆ ಈಗ ಚುನಾವಣೆ ನಡೆಯಬೇಕಿರೋದು ಕೇವಲ ಏಳು ಸ್ಥಾನಗಳಿಗೆ ಮಾತ್ರ… ಹಾಗಾಗಿ ಸಹಜವಾಗಿ ಬೇಕಿರುವ ಹಾಲಿ ಸಂಖ್ಯೆಗಿಂತ ಆಕಾಂಕ್ಷಿಗಳ ಸಂಖ್ಯೆ ಡಜನ್‍ಗಟ್ಟಲೇ ಹೆಚ್ಚಾಗ್ತಿದೆ.. ಇದರಿಂದ ನೂತನವಾಗಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಗ್ಯಾರಂಟಿ ಘೋಷಣೆ ಜಾರಿ, ಇತ್ತಾ ಸಚಿವ ಸಂಪುಟದ ಆಕಾಂಕ್ಷಿಗಳಾಗಿದ್ದ ಮಂದಿಗೆ ಮಿನಿಸ್ಟರ್ ಗಿರಿ ಕೈ ತಪ್ಪಿರುವ ಅಸಮಾಧಾನಿತ ಶಾಸಕರನ್ನ ಮನವೊಲಿಸುವ ತಾಪತ್ರೆಯ ಮಧ್ಯೆಯೂ ಪರಿಷತ್ ಎಲೆಕ್ಷನ್ ಬಿಸಿ ತಟ್ಟಿರೋದು, ಸದ್ಯಕ್ಕೆ ಬಿಡಿಸಲಾಗದಾ ಕಗ್ಗಂಟಾಗಿದೆ…
ಆದರೆ ಪರಿಷತ್ ಚುನಾವಣೆಯನ್ನ ಎದುರಿಸೋದಕ್ಕೆ ಕಾಂಗ್ರೆಸ್ ಕೂಡ ಸಕಲ ರೀತಿಯಲ್ಲೂ ಸರ್ವಸನ್ನದ್ಧವಾಗಬೇಕಿದೆ.. ಯಾಕಂದ್ರೆ ಎಲ್ಲಾದಕ್ಕೂ ಒಂದು ಕಾಲಮಿತಿಯಂತ ಇರುತ್ತೆ. ಹಾಗಾಗಿ ಆ ವ್ಯಾಪ್ತಿಯ ಒಳಗೆ ಆಗಬೇಕಾದ ಪ್ರಕ್ರಿಯೆಗಳು ಆಗಿ ಹೋದರೆ ಆಡಳಿತ ರೂಢ ಸರ್ಕಾರಕ್ಕೆ ಅದರದ್ದೇ ಆದ ಗತ್ತು ಉಳಿಸಿಕೊಂಡಂತೆ ಆಗುತ್ತೆ. ಸದ್ಯದ ಮಟ್ಟಿಗೆ ಖಾಲಿ ಉಳಿದಿರುವ ಸ್ಥಾನಗಳನ್ನು ತುಂಬುವಂತ ಕೆಲಸ ಅಗತ್ಯವಾಗಿ ಆಗಬೇಕಿದೆ… ಆ ನಿಟ್ಟಿನಲ್ಲಿ ಚುನಾವಣಾ ಕಾರ್ಯಚಟುವಟಿಕೆಗಳು ಆರಂಭವಾಗುವ ಕಾಲ ಅದಷ್ಟು ಸನ್ನಿಹಿತವಾಗ್ತಿದೆ… ಈ ಎಲ್ಲದರ ನಡುವೆ ಖಾಲಿ ಸ್ಥಾನಗಳನ್ನು ಭರ್ತಿ ಮಾಡಬೇಕಾದರೆ, ಸರ್ಕಾರದಿಂದ ಆಗಬೇಕಾದ ನೀತಿ ನಿಯಮಗಳೇನು…? ಯಾವ ಹಿನ್ನಲೆಯಲ್ಲಿ ಉಳಿದಿರುವ ಪರಿಷತ್ ಸದಸ್ಯ ಸ್ಥಾನಗಳನ್ನು ಆಯ್ಕೆ ಮಾಡಬಹುದು..? ಸರ್ಕಾರದಿಂದ ನಾಮನಿರ್ದೇಶನ ಆಗಬೇಕಿರುವ ಸದಸ್ಯ ಸಂಖ್ಯೆಗಳೆಷ್ಟು, ಇನ್ನೂಳಿದ ಚುನಾವಣಾ ಪ್ರಕ್ರಿಯೆ ಹೇಗೆ,,? ಹೀಗೆ ಒಂದಷ್ಟು ಆಯಾಮಗಳು ಮುನ್ನಲೆಗೆ ಬಂದಿವೆ..?
ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನಿಂದ ಸೇರಿದರೆ, ಒಟ್ಟು 66 ಸ್ಥಾನಗಳು ಪ್ರಸ್ತುತವಾಗಿ ಹಾಲಿ ಇರುವ ವಿಧಾನಪರಿಷತ್ ಸ್ಥಾನಗಳಾದರೆ, ಇತ್ತಾ ಪಕ್ಷೇತರ ಒಬ್ಬರು, ಸಭಾಪತಿ ಸೇರಿಸಿಕೊಂಡರೆ ಅವರ ಲೆಕ್ಕವೂ ಸೇರಿ ಮತ್ತೊಂದು. ಅಲ್ಲಿಗೆ ಪರಿಷತ್‍ನ ಬಲಾಬಲವನ್ನ ಅವಲೋಕಿಸಿ ನೋಡಿದಾಗ ಈ 75 ಬಲಾಬಲಾದಲ್ಲಿ ಇನ್ನ ಬಾಕಿ ಅಂತ ಉಳಿದಿರೋದು ಬರೋಬ್ಬರಿ ಕೇವಲ ಏಳು ಸ್ಥಾನಗಳು ಮಾತ್ರ.. ಆದ್ದರಿಂದ ಸದ್ಯ ಈ ಖಾಲಿ ಉಳಿದಿರುವ ಜಾಗಕ್ಕೆ ನೂತನ ಏಳು ಮಂದಿಯನ್ನ ತಂದೂ ಕೂರಿಸಬೇಕಿದೆ…
ಟಫ್ ಕಾಂಫಿಟೇಷನ್ ಶುರುವಾಗ್ತಿದೆ.. ಯಾರನ್ನ ಹೇಗೆ, ಯಾವ ಮಾನದಂಡದ ಆಧಾರದಲ್ಲಿ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಬೇಕು. ಬಾಕಿ ಉಳಿದಿರುವ ಈ ಏಳು ಸ್ಥಾನಗಳನ್ನ ಭರ್ತಿ ಮಾಡೋದು ಹೇಗೆ, ಇದರ ಒಟ್ಟಾರೆ ಪ್ರಕ್ರಿಯೆ ಹೇಗೆ ಸಾಗುತ್ತೆ ಹೀಗೆ ಒಂದಿಷ್ಟು ಸವಾಲುಗಳು ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬನೆ ಆಗುತ್ತೆ… ಹಾಗಾಂತ ಇಲ್ಲಿ ಸರ್ಕಾರದ ಅಣತಿಯಂತೆ ಪರಿಷತ್ ಎಲೆಕ್ಷನ್ ನಡೆದು ಬಿಡಲ್ಲ, ಜಸ್ಟ್ ಚುನಾವಣಾಗೆ ಬೇಕಾದ ಸಕಲ ತಯಾರಿ, ಅದರ ನೀತಿ ನಿಯಮಗಳನಷ್ಟೆ ಜಾರಿ ಮಾಡಬಹುದು…. ಇನ್ನೇನು ಸದ್ಯದಲ್ಲೆ ಇರೋ ಮಾನದಂಡಗಳ ಆಧಾರದಲ್ಲೇ ವಿಧಾನಪರಿಷತ್ ಚುನಾವಣೆ ನಡೆದು ಹೋಗಬಹುದು.. ಆದರೆ ಆಯ್ಕೆಯ ಪ್ರಕ್ರಿಯೆ ಸ್ವಲ್ಪ ಭಿನ್ನವಾಗಿದೆ… ಯಾಕಂದ್ರೆ ವಿಧಾನಸಭಾ ಚುನಾವಣೆಯಂತೆ ಜನರು ಪರಿಷತ್ ಸದಸ್ಯರನ್ನ ಆಯ್ಕೆ ಮಾಡಲಾಗ್ತಿಲ್ಲ….. ಒಟ್ಟಾರೆ ಪರಿಷತ್ ಚುನಾವಣೆಯ ಪ್ರಕ್ರಿಯೆ ಬೇರೆನೆ ಇರುತ್ತೆ…
ವಿಧಾನಸಭೆ… ನಾಮನಿರ್ದೇಶನ…. ಪದವೀಧರ… ಶಿಕ್ಷಕರ ಕ್ಷೇತ್ರ.. ಈ ಮೂರು ವಿಭಾಗಗಳಲ್ಲೇ ವಿಧಾನಪರಿಷತ್‍ಗೆ ಸದಸ್ಯರನ್ನ ಆಯ್ಕೆ ಮಾಡಿ ಕಳಿಸಲಾಗುತ್ತೆ. ಇವುಗಳಲ್ಲಿ ಮುಖ್ಯವಾಗಿ ಸದ್ಯಕ್ಕೆ ಇರುವ ಪರಿಸ್ಥಿತಿಯಲ್ಲಿ ಖಾಲಿ ಉಳಿದುಕೊಂಡಿರುವ ಏಳು ಸ್ಥಾನಗಳಿಗೆ ನೂತನವಾಗಿ ಸದಸ್ಯರನ್ನ ಆರಿಸಬೇಕಿದೆ… ಇದರಲ್ಲಿ ವಿಧಾನಸಭಾ ಸಂಖ್ಯಾಬಲದಿಂದ ಮೂರು ಸ್ಥಾನಗಳನ್ನು ಆಯ್ಕೆ ಮಾಡುವ ಅವಕಾಶ ಇದೆ. ಇದರ ಜೊತೆಗೆ ಇನ್ನೂ ಮೂರು ಸ್ಥಾನಗಳನ್ನು ರಾಜ್ಯ ಸರ್ಕಾರವೇ ನೇರವಾಗಿ ನಾಮನಿರ್ದೇಶನವನ್ನ ಮಾಡಲಿದೆ….
ಇನ್ನೂ ಬಾಕಿ ಉಳಿದುಕೊಂಡ 2 ಸ್ಥಾನಗಳ ಪೈಕಿ ಒಂದು ಪದವಿಧರ ಕ್ಷೇತ್ರದಿಂದ ಆಯ್ಕೆ ಮಾಡಿದರೆ, ಇನ್ನೊಂದು ಶಿಕ್ಷಕರ ಕ್ಷೇತ್ರದಿಂದ ಚುನಾವಣೆಯ ಮೂಲಕ ಪರಿಷತ್ ಸದಸ್ಯರ ಆಯ್ಕೆ ನಡೆದು ಹೋಗಲಿದೆ. ಅಲ್ಲಿಗೆ ಖಾಲಿ ಉಳಿದ ಸ್ಥಾನಗಳು ಪರಿಷತ್‍ನ ಚುನಾವಾಣಾ ವ್ಯಾಪ್ತಿಯಲ್ಲೆ ಭರ್ತಿಯಾಗಿ ಬಿಡಲಿವೆ. ನಾಮನಿರ್ದೇಶನ ಹಾಗೂ ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಬಿಗ್‍ಫೈಟ್ ಎದುರಾಗ್ತಿದೆ…. ಯಾವ ಬಣದಿಂದ ಯಾರನ್ನ ಆಯ್ಕೆ ಮಾಡಿ ಕಳಿಸಬೇಕು ಅಂತ ಬಣಬಡಿದಾಟ ಆರಂಭವಾಗಿದೆ. ಹೌದು…. ಈಗಾಗಲೆ ಇಂತಹದೊಂದು ಭಾರಿ ಪೈಪೋಟಿ ಪಕ್ಷದಲ್ಲೆ ಆರಂಭವಾಗಿ ಬಿಟ್ಟಿದೆ… ಅದರಲ್ಲೂ ತಮ್ಮ ತಮ್ಮ ಬಣದ ಆಪ್ತರನ್ನು ಆಯ್ಕೆ ಮಾಡಲು, ಮೂರು ಬಣ ಭಾರೀ ಪೈಪೋಟಿ ನಡೆಸುವ ಎಲ್ಲಾ ಲೆಕ್ಕಾಚಾರಗಳು ಗೋಚರವಾಗಿವೆ..! ಸಹಜವಾಗಿಯೇ ಸಿಎಂ ಸಿದ್ದರಾಮಯ್ಯ, ಡಿಕೆಶಿ, ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೇ ಕೂಡ ತಮ್ಮ ಆಪ್ತರಿಗೆ ಮಣೆ ಹಾಕಲು ಪ್ರಯತ್ನವನ್ನ ನಡೆಸಿದ್ದಾರೆ ಅಂತ ಹೇಳಲಾಗ್ತಿದೆ. ಒಟ್ಟಾರೆಯಾಗಿ ಹೇಳೋದಾದ್ರೆ, ಆದಷ್ಟು ಬೇಗ ಪರಿಷತ್ ಚುನಾವಣೆಯನ್ನ ನಡೆಸಿ, ಬಾಕಿ ಉಳಿದಿರುವ ಆ 7 ಸ್ಥಾನಗಳನ್ನು ತುಂಬಿಸುವ ಅವಸರ ಕಾಂಗ್ರೆಸ್‍ಗೆ ಇದ್ದೇ ಇದೆ…. ಆದರೂ ಅವರಿಗಾ, ಇಲ್ಲ ಇವರಿಗಾ..? ಅನ್ನೋ ಕನ್‍ಪ್ಯೂಸ್ ಸ್ವತಃ ಕಾಂಗ್ರೆಸ್‍ಗೇ ಕಾಡ್ತಿದೆ.