ಬೆಂಗಳೂರು:ನೀವೇನಾದ್ರೂ ಇವ್ರನ್ನ ನೋಡಿದ್ರೆ ಮುದ್ದಾಡದೆ ಇರೋದಿಲ್ಲ. ಇವ್ರು ನೋಡೋಕೆ ಸಕತ್ ಕ್ಯೂಟ್. ಮುದ್ದು ಮುದ್ದಾಗಿ ಡ್ರೆಸ್ ಮಾಡ್ಕೋಂಡು ಸಂಡೇ ಎಂಜಾಯ್ ಮಾಡೊನ ಅಂತ ಎಲ್ರೂ ಒಂದು ಕಡೆ ಸೇರಿದ್ರು. ಇವ್ರನ್ನ ನೋಡೋಕೆ ಅಂತಾನೆ ಸಿಟಿ ಜನ ಇಲ್ಲಿ ಸೇರಿದ್ರು.
ಅಬ್ಬಾಬ್ಬ…ಇರೋ ಬರೋ ಪಪ್ಪಿಸೆಲ್ಲ ಇಲ್ಲೇ ಇವೆ…ಒಂದಕ್ಕಿಂದ ಒಂದು ಕ್ಯೂಟ್…ಲುಕ್ ಅಂತೂ ಸಖತ್ ಅಟ್ರಾಕ್ಟ್ರೀವ್. ಇವುಗಳನ್ನು ನೋಡಿದ್ರೆ ಎಂತವರಿಗೂ ಎತ್ಕೊಂಡು ಮುದ್ದಾಡ್ಬೇಕು ಅನ್ಸುತ್ತೆ… ಹೌದು ಪ್ರಾಣಿಗಳು ಎಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತಮ್ಮ ಪ್ರೀತಿಯ ಮುದ್ದು ಪ್ರಾಣಿಗಳಿಗೆ ಜನರು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಬೆಳಿಗ್ಗೆ ವಾಕಿಂಗ್ ಕರ್ಕೊಂಡ್ ಹೋಗೋದು ಅದಕ್ಕೆ ಊಟ ಮಾಡಿಸುವುದು ಹೇಗೆ ಅದರ ಜೊತೆನೆ ಇಡೀ ದಿನ ಕಳೆಯುತ್ತಾರೆ ಅಂತಹ ಪ್ರಾಣಿ ಪ್ರಿಯರೆಲ್ಲ ಇಂದು ಒಂದುಗೂಡಿ ತಮ್ಮ ಪ್ರೀತಿಯ ಪ್ರಾಣಿಗಳನ್ನು ಪೆಟ್ ಶೋಗೆ ಕರ್ಕೊಂಡು ಬಂದು ಖುಷಿಪಟ್ಟರು.
ಹೌದು, ನಮ್ ಸಿಲಿಕಾನ್ ಸಿಟಿಯಲ್ಲಿ ಪ್ರಾಣಿ ಪ್ರಿಯರಿಗೇನು ಕಮ್ಮಿ ಇಲ್ಲ.. ಈ ಪ್ರಾಣಿ ಪ್ರಿಯರ ಮುದ್ದು ಮುದ್ದು ಪೆಟ್ಗಳಿಗಾಗೆ, ವಿಶೇಷವಾದ ಪೆಟ್ ಶೋ ಆಯೋಜನೆ ಮಾಡಲಾಗಿದೆ.. ಶ್ವಾನಗಳು, ಬೆಕ್ಕುಗಳು ಹಾಗೆ ಪಕ್ಷಿಗಳು ಸೇರಿದಂತೆ ಹಲವು ಪ್ರಾಣಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಹೌದು, ನಾವು ಸಾಕುವ ಪೆಟ್ ಗಳಿಗೆ ಹಾಗೂ ಶ್ವಾನ ಪ್ರಿಯರಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಿಲಿಕಾನ್ ಸಿಟಿಯಲ್ಲಿ ಜಯ ಮಹಲ್ ಪ್ಯಾಲೇಸ್ ಗ್ರೌಂಡ್ ಪೆಟ್ ಶೋ ಆಯೋಜನೆ ಮಾಡಲಾಗಿತ್ತು.
ಈ ಪೆಟ್ ಶೋ ನಲ್ಲಿ ಸುಮಾರು 45ಕ್ಕೂ ಹೆಚ್ಚು ತಳಿಯ ಶ್ವಾನಗಳುಗಳು ಭಾಗವಹಿಸಿದ್ವು, ಅಫಘಾನ್ ಹೌಂಡ್ಸ್, ಟಿಬೆಟಿಯನ್ ಟೆರಿಯರ್, ಮಾಲ್ಟೀಸ್ , ಜರ್ಮನ್ ಶಫರ್ಡ್, ಮುಧೋಳ, ಪೆಟ್ರು ಮುನೀಸ್ಟ್, ಚೋಚೋ, ಶಿಡ್ಸು ,ಹಸ್ಕಿ, ಗೋಲ್ಡನ್ ರೇಟ್ ರಿವರ್,ಬಾಕ್ಸರ್ ಸೇರಿದಂತೆ ಹಲವು ತಳಿಯ ಶ್ವಾನಗಳು ಭಾಗಿಯಾದ್ವು, ಎರಡು ದಿನಗಳ ಈ ಪೆಟ್ ಶೋ ಗೆ ಸಾವಿರಕ್ಕೂ ಹೆಚ್ಚು ಶ್ವಾನ ಬೆಕ್ಕುಗಳು ವಿಸಿಟ್ ಕೊಟ್ಟಿವ್. ಇನ್ನು ಒಂದು ಕಡೆ ಮುದ್ದುಮುದ್ದಾಗಿರುವಂತಹ ಶ್ವಾನಗಳು ಬಂದರೆ ಮತ್ತೊಂದು ಕಡೆ ಪಕ್ಷಿಗಳು, ಮೊಲ ಹೀಗೆ ಹಲವು ಪ್ರಾಣಿಗಳನ್ನ ಕಂಡು ಜನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಇನ್ನು ಇದಿಷ್ಟೇ ಅಲ್ಲದೆ ಮುದ್ದು ಮುದ್ದಾದ ಶ್ವಾನಗಳ ಜೊತೆ ಸುಂದರಿಯರು ಫೋಟೋ ಕ್ಲಿಕಿಸಿಕೊಂಡು ಖುಷಿಪಟ್ಟರು.
ಒಟ್ಟಾರೆ ಪೆಟ್ ಲವರ್ಸ್ಗಳಿಗೆ ಈ ಪೆಟ್ ಶೋ ಮಾತ್ರ ಸಿಕ್ಕಾ ಪಟ್ಟೆ ಖುಷಿ ನೀಡಿದೆ. ಎಲ್ಲಾ ತಳಿಯ ವೈರಟಿ ವೈರಟಿ ಶ್ವಾನಗಳನ್ನು ನೋಡಿ ಮುದ್ದಾಡೋಕೆ ಅವಕಾಶ ಕೂಡ ಸಿಕ್ಕಿತು, ಪ್ರತಿನಿತ್ಯ ಮನೆಯಲ್ಲಿ ಇದ್ದಂತಹ ಪ್ರೀತಿಯ ಪ್ರಾಣಿಗಳು ಇಂದು ಒಂದು ಕಡೆ ಸೇರಿದಂತೂ ಪ್ರಾಣಿ ಪ್ರಿಯರಿಗೆ ಸಖತ್ ಮಜಾ ಸಿಕ್ಕಿದಂತು ನಿಜ..
ವರದಿ: ಹರ್ಷಿತಾ ಪಾಟೀಲ