ಹಾಲು ದರದಲ್ಲಿ ಈಗ ಕಡಿತ..ಇದು ತುಂಬಾ ಖುಷಿ ಕೊಡೋದು ಗೃಹಿಣಿಯರಿಗೆ..ಯಾಕೆ ಅಂದ್ರೆ ಅದ್ರ ಬೆಲೆ ಹೆಚ್ಚು ಕಡಿಮೆ ಗೊತ್ತಾಗೋದೇ ಇವರಿಗೆ..
ಹಾಲಿನ ದರದಲ್ಲಿ ಈಗ ಕಡಿತ ಆಗಿದೆ ಅಂತ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹೇಳಿದೆ.. ಜೂನ್ 1 ರಿಂದ ಪರಿಷ್ಕೃತ ಆದೇಶ ಜಾರಿಗೊಳ್ಳಲಿದೆ. ಒಕ್ಕೂಟವು ಬೇಸಿಗೆಯ ಸಮಯದಲ್ಲಿ ಪ್ರತಿ ಲೀಟರ್ ಹಾಲಿಗೆ 2.85 ರೂಪಾಯಿ ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು.
ಈಗ ಹಾಲಿನ ಪ್ರೋತ್ಸಾಹ ಧನ ಲೀಟರ್ ಗೆ 1.50 ರೂ. ಕಡಿತವಾಗಿದೆ..ಈ ಹಿನ್ನೆಲೆಯಲ್ಲಿ ಪ್ರೋತ್ಸಾಹ ಧನ ಕಡಿಮೆ ಆಗಿದೆ. ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವು ಲಭ್ಯವಾಗಿರುವ ಹಿಂದೆಯೇ ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ.
ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿದಿನ 13.50 ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ, ಈಗ 16 ಲಕ್ಷ ಲೀಟರ್ ಗೆ ತಲುಪಿದೆ. ದಿನದಲ್ಲಿ ಸುಮಾರು 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದರದಲ್ಲಿ 1.50 ರೂಪಾಯಿ ಕಡಿತವಾಗಿದೆ ಎಂದು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆಡಳಿತ ಮಂಡಳಿ ತಿಳಿಸಿದೆ..