Political NewsState News

ಸೋಲಿನ ಪರಾಮರ್ಶೆ..! ಎಡವಟ್ಟು ಅಲ್ಲಿಂದಲೇನಾ..?

ಪಕ್ಷದ ಸಂಘಟನೆಗೆ ಹೊಸ ಸೂತ್ರ ಹೆಣೆಯಲು ಸಿದ್ಧರಾದ್ರಾ ವರಿಷ್ಠರು..? ಸೋಲಿನ ಗಾಯಕ್ಕೆ ಮುಲಾಮು ಹಚ್ಚೋದಕ್ಕೆ ಹೈಕಮಾಂಡ್ ಚಿಂತನೆ… ಸೋಲಿನ ಪರಾಮರ್ಶೆ… ಅಗತ್ಯವಾಗಿ ಆಗಲೇಬೇಕಾದ ಪ್ರಸಂಗ ರಾಜ್ಯ ಬಿಜೆಪಿಯಲ್ಲಿ ಬಂದೋದಗಿದೆ.. ದೆಲ್ಲಿಯ ಅಂಗಳದಲ್ಲಿ ಆಗಿ ಹೋಗಿರುವ ಮಹಾ ಎಟವಟ್ಟಿಗೆ ರಾಜ್ಯದಲ್ಲಿ ಬಿಜೆಪಿ ಮಕಾಡೆ ಮಲಗಿದೆ. ಆದ್ರಿಗ ಪಕ್ಷದಲ್ಲಿ ಘಟಿಸಿ ಹೋದ ಮಹಾ ಅಪರಾಧಕ್ಕೆ ಯಾರು ಹೊಣೆ ಅಂತ ಯೋಚಿಸಿಕೊಂಡು ಕೂರುವ ಅನಿವಾರ್ಯತೆಗೆ ಬಿಜೆಪಿಯ ರಾಷ್ಟ್ರಿಯ ಅಧ್ಯಕ್ಷರು ಹೋಗದೇ, ಅದಕ್ಕೆ ಬದಲೀ ಮಾರ್ಗೋಪಾಯವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ…..

ಹೌದು…. ಬಿಜೆಪಿ ಆದ ಸೋಲಿನ ಗಾಯಕ್ಕೆ ಮುಲಾಮು ಹಚ್ಚುವ ಕಾರ್ಯತಂತ್ರವನ್ನು ಮಾಡ್ತಿದೆ.. ಸೋಲಿಗೆ ಕಾರಣವಾದ ಅಂಶಗಳನ್ನು ಮುಂದಿಟ್ಟುಕೊಂಡು, ಪಕ್ಷವನ್ನು ಆದಷ್ಟು ಬೇಗ ಮೇಲೆತ್ತುವ ಕೆಲಸಕ್ಕೆ ಇನ್ನಿಲ್ಲದ ಪ್ಲಾನ್‍ಗಳನ್ನು ರೂಪಿಸುತ್ತಿದೆ…. ಇದಕ್ಕಾಗಿ ಸಂಘಟನೆಯ ಎಂಜಿನ್‍ನನ್ನು ತುರ್ತು ಸನ್ನದ್ಧಗೊಳಿಸಲು ಬಿಜೆಪಿಯ ವರಿಷ್ಠರು ಮುಂದಾಗಿದ್ದಾರೆ… ಬಿಜೆಪಿಯ ಡಬಲ್ ಎಂಜಿನ್‍ನಲ್ಲಿ ಒಂದು ಎಂಜಿನ್ ಕೈ ಕೊಟ್ಟಿದೆ. ಎಲ್ಲ ರಣತಂತ್ರಗಳು ಮಕಾಡೆ ಮಲಗಿದ್ದಾಗಿದೆ. ಕೇಂದ್ರದ ನಾಯಕರು ಅಂದುಕೊಂಡಿದ್ದೇ ಒಂದು, ಕೊನೆಗೆ ಆಗಿದ್ದೇ ಇನ್ನೊಂದು…. ಆದ್ರೆ ಈಗ ಟ್ರೆಂಡ್ ಚೇಂಜಾಗುವ ಮುನ್ಸೂಚನೆ ಪಕ್ಷದಲ್ಲಿ ಆಗ್ತಾ ಇದೆ. ಹಾಗಾದ್ರೆ ಬಿಜೆಪಿ ಎಡವಿದ್ದೇಲ್ಲಿ, ಆದ ತಪ್ಪುಗಳನ್ನು ಸರಿಮಾಡಿಕೊಳ್ಳುತ್ತಾ..? ಹೀಗೆ ಹತ್ತು ಹಲವು ಪ್ರಶ್ನೆಗಳು ಬಿಜೆಪಿಯ ಪಾಳಯದಲ್ಲೇ ಸಹಜವಾಗಿಯೇ ಹುಟ್ಟಿಕೊಂಡಿವೆ..

ಬಿಜೆಪಿ ಸೋಲಿಗೆ ಡೆಲ್ಲಿಯ ಅಂಗಳದಲ್ಲೇ ಎಡವಟ್ಟಾಯ್ತಾ..? ರಾಷ್ಟ್ರೀಯ ವರಿಷ್ಠರು ತೆಗೆದುಕೊಂಡ ನಿರ್ಧಾರಗಳೇ ಕಂಟಕವಾಯ್ತಾ..? ಬಿಜೆಪಿಯಲ್ಲಿನ ಅ`ಸಂತೋಷಕ್ಕೆ’ ಕಾರಣವಾಗಿ ಬಿಡ್ತಾ ಆ ನಿರ್ಧಾರ..? ಕರುನಾಡಿನ 224 ಕ್ಷೇತ್ರಗಳ ಟಿಕೆಟ್ ಹಂಚಿಕೆಯನ್ನ ಬಿಜೆಪಿಯ ಕೇಂದ್ರದ ವರಿಷ್ಟರೇ ವಹಿಸಿಕೊಂಡಿದ್ದರು… ಗುಜರಾತ್‍ನಲ್ಲಿ ಮಾಡಿದ ಮೋಡಿಯನ್ನ ಕರ್ನಾಟಕದಲ್ಲೂ ಮಾಡಿ ಬಿಡಬಹುದು ಅಂತ ಅಂದಾಜು ಮಾಡಿಕೊಂಡು, ಹೊಸ ಪ್ರಯತ್ನಕ್ಕೆ ಕೈ ಹಾಕಿದ್ರು…? ಬಟ್ ಅಲ್ಲಿ ದಿಗ್ವಿಜಯ… ಇಲ್ಲಿ ಹೀನಾಯ ಸೋಲು…. ಪೈನಲೀ ಪಕ್ಷದಲ್ಲಿ ಅಸಂತೋಷ….! ರಾಜ್ಯ ರಾಜಕಾರಣದಲ್ಲಿ ಹೊಸ ರಾಜಕೀಯ ಪರ್ವ ಶುರುವಾಗುವ ಕಾಲ ಬಂದಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯೊದಕ್ಕೆ ಕಾಲ ಸನ್ನಿಹಿತವಾಗ್ತಿದೆ. ಇಲ್ಲಿಯ ತನಕ ಕರುನಾಡಿನಲ್ಲಿ ಅಧಿಕಾರದ ಗದ್ದುಗೆಯನ್ನ ಹಿಡಿದಿದ್ದ ಬಿಜೆಪಿಗೆ ಸೋಲಿನ ಮರ್ಮಘಾತವಾಗಿದೆ. ಅತ್ಯಂತ ಹೀನಾಯವಾಗಿ ಸೋತು ಹೋಗಿದೆ ಕಮಲ ಪಡೆ. ಆದರೆ ಈ ಪರಿ ಬಿಜೆಪಿ ಸೋಲಿಗೆ ಕಾರಣವಾಗಿರೋದೆ ಪಕ್ಷದಲ್ಲಿ ಮೊದಲಿನಿಂದ ನಡೆದುಕೊಂಡು ಬಂದ ಅಸಂತೋಷದ ವಾತಾವರಣ… ಅದೇನೆ ಇರಲಿ ರಾಜ್ಯದಲ್ಲಿ ಬಿಜೆಪಿಗೆ ಮಹಾ ಸೋಲು ಕಂಡ ಪರಿಣಾಮ, ಕೇಂದ್ರದ ರಾಷ್ಟ್ರಿಯ ವರಿಷ್ಠರು ರಾಜ್ಯದಲ್ಲಿ ಮುಂದಿನ ಲೋಕಾಸಭಾ ಚುನಾವಣಾ ಹಿತದೃಷ್ಟಿಯಿಂದ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ, ಗಟ್ಟಿಯಾದ ಸಂಘಟನೆಗೆ ಹೆಚ್ಚಿನ ಒತ್ತು ನೀಡೋದಕ್ಕೆ ಚಿಂತನೆಯನ್ನ ನಡೆಸಿದ್ದಾರಂತೆ.

2024ರ ಲೋಕಾ ಸಮರಕ್ಕೆ ಈಗಲೇ ಅಣಿಯಾಯ್ತಾ ಬಿಜೆಪಿ..? ಪಕ್ಷದ ಸಂಘಟನೆಗೆ ರೂಪುರೇಷೆ ಸಿದ್ದಪಡಿಸ್ತಿದ್ಯಾ ಕಮಲ ಪಡೆ..? ಯೆಸ್… 2024ರ ಲೋಕಾಸಭಾ ಚುನಾವಣೆಗೆ ಕೆಲವೇ ತಿಂಗಳುಗಳಷ್ಟೇ ಬಾಕಿ ಉಳಿದಿದೆ. ಹಾಗಾಗಿ ಬಿಜೆಪಿಯ ಕೇಂದ್ರದ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಆದ ಸೋಲನ್ನು ಪುನರಾವರ್ತನೆ ಆಗದಂತೆ ತಡೆಯಲು, ಪ್ರಬಲವಾದ ನಾಯಕತ್ವಕ್ಕೆ ಮತ್ತು ಪಕ್ಷದ ಸಂಘಟನೆಗೆ ದೊಡ್ಡ ಮಟ್ಟದ ಒತ್ತು ನೀಡಿದಂತೆ ಕಾಣ್ತಿದೆ….
ಸದ್ಯ ರಾಜ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಸೂಕ್ತವಾದ ವಾತಾವರಣ ಇಲ್ಲ. ಇದಕ್ಕೆ ನಿದರ್ಶನ ಎಂಬಂತೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಮತದಾರ ಕೊಟ್ಟ ಉತ್ತರವೇ ಕಣ್ಣ ಮುಂದಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರೇ ಸಾಲು ಸಾಲು ರ್ಯಾಲಿ, ರೋಡ್‍ಶೋಗಳನ್ನು ನಡೆಸಿ ಹೋದರೂ, ಬಿಜೆಪಿ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಮಕಾಡೆ ಮಲಗಿದೆ… ಹಾಗಾಗಿ ಎಚ್ಚೆತ್ತುಕೊಂಡೆ ಬಿಜೆಪಿಯ ನಾಯಕರು, ರಾಜ್ಯದಲ್ಲಿ ಪ್ರಬಲವಾದ ನಾಯಕತ್ವಕ್ಕೆ ಮಣೆ ಹಾಕೋದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ವಿಪಕ್ಷ ನಾಯಕತ್ವಕ್ಕೂ ಹೊಸ ಸ್ಪರ್ಶ ನೀಡಲು ಮುಂದಾಯ್ತಾ ಬಿಜೆಪಿ..? ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲು ಹೈಕಮಾಂಡ್ ಚಿಂತನೆ..! ಪಕ್ಷದ ಕಾರ್ಯಕರ್ತರಲ್ಲಿ ಮುಂದಿನ ಲೋಕಾಸಭಾ ಎಲೆಕ್ಷನ್ ದೃಷ್ಟಿ¬ಂದ ಹೊಸ ಹುರುಪು ತುಂಬಲು ಹೈಕಮಾಂಡ್ ಯೋಚನೆ ಮಾಡಿದೆ. ಇದರ ಜೊತೆಗೆ ಈ ಬಾರಿ ಹೀನಾಯವಾಗಿ ಸೋತಿರುವ ಬಿಜೆಪಿಯಲ್ಲಿ ಪ್ರಬಲವಾದ ವಿರೋಧಪಕ್ಷದ ನಾಯಕನೂ ಇಲ್ಲದಂತಾಗಿದೆ…. ಇದ್ದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿಯ ನಾಯಕರು, ವಿಪಕ್ಷ ಸ್ಥಾನಕ್ಕೆ ಮರಿರಾಜಾಹುಲಿ ವಿಜಯೇಂದ್ರನನ್ನು ತಂದು ಕೂರಿಸುವ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಬಿಜೆಪಿಯಲ್ಲಿ ಅಸಂತೋಷಕ್ಕೆ ಫುಲ್ ಸ್ಟಾಪ್ ಯಾವಾಗ..?
ಈಗ ಬಿಜೆಪಿಯ ಮನೆಯಲ್ಲಿ ಯಾವುದು ಸರಿಯಿಲ್ಲ… ಒಡೆದ ಮನೆಯಂತಾಗಿ ಬಿಟ್ಟಿದೆ ಪಕ್ಷದ ಸದ್ಯದ ಸ್ಥಿತಿ… ಘಟಾನುಘಟಿ ನಾಯಕರೇ ಈ ಭಾರಿ ಸೋತು ಮುಖಭಂಗ ಅನುಭವಿಸಿದ್ದಾರೆ… ಹಾಗಾದ್ರೆ ರಾಜ್ಯದಲ್ಲಿ ಬಿಜೆಪಿಗೆ ಇಂತಹದೊಂದು ಸ್ಥಿತಿ ಬರೋದಕ್ಕೆ ಕಾರಣ ಯಾರು ಅಂತ ನೋಡಿದ್ರೆ, ಮೊದಲು ಕಣ್ಣ ಮುಂದೇ ಬರೋದೇ ಬಿ.ಎಲ್ ಸಂತೋಷ್…. ಹಾಗಾದ್ರೆ ಬಿಜೆಪಿಯಲ್ಲಿನ ಅಸಂತೋಷಕ್ಕೆ ಬಿಜೆಪಿ ಹೈಕಮಾಂಡ್ ಪುಲ್ ಸ್ಟಾಪ್ ಇಡೋದು ಯಾವಾಗ…? ನಾಟ್‍ಶ್ಯೂರ್.

ಗೆಲುವಿನ ವಿಶ್ವಾಸದಲ್ಲಿದ್ದ ಬಿಜೆಪಿ ಎಡವಿದ್ದೇಲ್ಲಿ ಗೊತ್ತಾ..? ಗುಜರಾತ್‍ನಲ್ಲಿ ಬಂದ ಫಲಿತಾಂಶ ಕರುನಾಡಿನಲ್ಲಿ ಬರಲೇ ಇಲ್ಲ, ಅಂದುಕೊಂಡಿದ್ದೇಲ್ಲಾ ಉಲ್ಟಾಪಟ್ಟಾ ಆಗಿ ಹೋಗಿದೆ… ಡಿಕೆಶಿ, ಸಿದ್ದಣ್ಣನ ಅಲೆಯ ಮುಂದೇ ಮೋದಿ, ಅಮಿತ್ ಶಾ ತಂತ್ರಗಾರಿಕೆಗಳೆಲ್ಲ ನೀರಿನಲ್ಲಿ ಕೊಚ್ಚಿಕೊಂಡು ಹೋದಂತಾಗಿದೆ. ಇವತ್ತು ರಾಜ್ಯ ಕಾಂಗ್ರೆಸ್ಗೆ ನಿಜಕ್ಕೂ ಆತ್ಮವಿಶ್ವಾಸ ಹೆಚ್ಚಾಗಿದೆ. ಬಿಜೆಪಿಯ ಎಲ್ಲ ರಣತಂತ್ರಗಳು ಅಂಗಾತ ಮಲಗಿದೆ. ಬಿಜೆಪಿಯ ನಾಯಕರು ಅಂದುಕೊಂಡಿದ್ದು ಬಿಲ್‍ಕುಲ್ ನಡೆಯಲಿಲ್ಲ. ಪೈನಲೀ ಕರುನಾಡಿನಲ್ಲಿ ಕಮಲ ಮುದುಡಿ ಹೋದರೆ ಕೈ ಮೇಲಕ್ಕೆ ಬಂದಿದೆ. ಫಸ್ಟ್ ಆಪ್ ಆಲ್ ಕೇಂದ್ರದ ಬಿಜೆಪಿಯ ವರಿಷ್ಠರು ಟಿಕೆಟ್ ಹಂಚಿಕೆಯ ವಿಚಾರದ ‘ಮಾಡಿಕೊಂಡ ಮೊದಲ ಎಡವಟ್ಟೇ ಇವತ್ತು ಬಿಜೆಪಿಯ ಹೀನಾಯ ಸೋಲಿಗೆ ಪ್ರಮುಖ ಕಾರಣ ಅಂತ ಹೇಳಿ ಬಿಡಬಹುದು. ಹೌದು.. ಅದ್ಯಾವಾಗ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾದರಿಯನ್ನು ಅನುಸರಿಸಲಾಯ್ತೋ, ಅದು ಫಲ ಕೊಡದೇ, ಬಿಜೆಪಿಗೆ ಭಾರೀ ಹಿನ್ನಡೆಯನ್ನ ತಂದಿಟ್ಟಿದ್ದಲ್ಲದೇ, ಸೋಲಿನ ಪ್ರಪಾತಕ್ಕೆ ತಳ್ಳಿವಂತೆ ಮಾಡಿದೆ

ನಿಜ ಹೇಳಬೇಕಂದರೇ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಮೂಲ ಕಾರಣನೇ ಬಿಜೆಪಿ ಮಾಡಿಕೊಂಡ ಮಹಾ ಎಡವಟ್ಟು… ಅದೇ ಟಿಕೆಟ್ ಹಂಚಿಕೆಯಲ್ಲಿ ಮಾಡಿಕೊಂಡ ಗೊಂದಲ, ಕೊನೆಗೆ ಅವರೇ ಮಾಡಿಕೊಂಡ ಸ್ವಯಂಕೃತ ಅಪರಾಧಕ್ಕೆ ಇವತ್ತು ರಾಜ್ಯದ ಮತದಾರರ ಉತ್ತರವನ್ನು ಕೊಟ್ಟಿದ್ದಾನೆ,,,, ಕಾಂಗ್ರೆಸ್‍ಗೇ ಸರಳ ಬಹಮತವನ್ನು ನೀಡಿ, ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೇ ತಂದು ಕೂರಿಸಿದ್ದಾನೆ…. ರಾಜ್ಯದ ಚುನಾವಣಾ ಅಖಾಡದ ಪ್ರತಿ ಹಂತದಲ್ಲೂ ರಾಜ್ಯದ ನಾಯಕರಿಗಿಂತ ಕೇಂದ್ರದ ವರಿಷ್ಠರೇ ಎಂಟ್ರಿ ಆಗುತ್ತಾ ಎಲ್ಲಾ ಕಾರ್ಯತಂತ್ರಗಳನ್ನ ಮಾಡುತ್ತಾ ಬಂದಿದ್ದರು… ಇದರ ಆರಂಭಿಕ ಭಾಗವೆಂಬುವಂತೇ ಈ ಭಾರಿ 70ಕ್ಕೂ ಹೆಚ್ಚು ಹೊಸ ಮುಖಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗಿತ್ತು.. ಹಾಗಾಗಿ ಇದರಿಂದಲೇ ಪಕ್ಷದಲ್ಲಿನ ಕೆಲವು ಹಿರಿಯ ನಾಯಕರು ಪಕ್ಷವನ್ನು ಬಿಟ್ಟು ಹೊರಬೇಕಾಗಿ ಬಂತು.. ಇದರ ಜೊತೆಗೆ ಕೆಲವು ನಾಯಕರು ಬಂಡಾಯವನ್ನ ಎದ್ದು, ಪಕ್ಷದಲ್ಲಿ ಇನ್ನಷ್ಟು ಗೊಂದಲಗಳಿಗೆ ಕಾರಣವಾಗಿದ್ದರು…

ಇದರ ಜೊತೆಗೆ ಪಕ್ಷದಲ್ಲಿ ಟಿಕೆಟ್ ಸಿಕ್ಕಿಲ್ಲ ಅಂತ ಬೇಸತ್ತು, ಪಕ್ಷವನ್ನ ಬಿಟ್ಟ ಶೆಟ್ಟರ್, ಹಾಗೂ ಸವದಿಯಿಂದ ಬಿಜೆಪಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹಿನ್ನಡೆ ಆಗಿರೋದು ಸ್ಪಷ್ಟವಾಗಿ ಗೊತ್ತಾಗಿದೆ.. ಹಾಗಿದ್ದರೂ ಇತ್ತಾ ಬೆಳಗಾವಿಯ ಅಥಣಿಯಲ್ಲಿ ಬಿಜೆಪಿಗೆ ವಿರುದ್ಧವಾಗಿ ನಿಂತು, ಕಾಂಗ್ರೆಸ್‍ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸವದಿ, ಸಾಹುಕಾರ್ ಆಪ್ತ ಕುಮಟಹಳ್ಳಿಯನ್ನ ಸೋಲಿಸಿದ್ದಾರೆ… ಅಲ್ಲಿಗೆ ಸವದಿಯಂತ ಸೀನಿಯರ್ ಲೀಡರ್‍ನನ್ನು ಕಡೆಗಣಿಸಿದ್ದರ ಒಳ ಏಟು ಬಿಜೆಪಿಗೆ ಬಿದ್ದಾಂತಾಗಿದೆ. ಆದರೆ ಶೆಟ್ಟರ್ ಮಾತ್ರ ಕಾಂಗ್ರೆಸ್‍ಗೇ ಹೋದರೂ, ಗೆಲ್ಲುವ ಆಸೆ ಕೈಗೂಡಲಿಲ್ಲ…. ಆದ್ರೂ ಸವದಿ ಗೆದ್ದಾಗಿದೆ… ಪಟ್ಟು ಮಾಡಿ ಮಹೇಶ್ ಕುಮಟಹಳ್ಳಿಗೆ ಟಿಕೆಟ್ ಕೊಡಿಸಿದ್ದ ಬೆಳಗಾವಿ ಸಾಹುಕಾರ್‍ನ ರಾಜಕೀಯ ತಂತ್ರಗಾರಿಕೆ ಕೈ ಕೊಟ್ಟಿದೆ….ಅಲ್ಲಿಗೆ ದೆಲ್ಲಿಯ ನಾಯಕರು, ರಮೇಶ್ ಜಾರಕಿಹೊಳಿ ಮಾತು ಕೇಳಿ ಅರ್ಧ ಕೆಟ್ಟರು ಅಂದ್ರೇ ತಪ್ಪಾಗೋದಿಲ್ಲ ಬಿಡಿ…. ಬಿಜೆಪಿ ಮಾಡಿಕೊಂಡ ಪ್ರಮಾದಗಳೇ ಸೋಲಿಗೆ ಕಾರಣವಾಯ್ತಾ..?
ಕಾಂಗ್ರೆಸ್ ನಡೆಸಿದ ಪೇ ಸಿಎಂ ಅಭಿಯಾನ ಗೆದ್ದಾಯ್ತು..! ನಮೋವಿನ `ಚಾಣಕ್ಯ’ ತಂತ್ರಗಾರಿಕೆ ಅಟ್ಟರ್ ಫ್ಲಾಪ್ ಆಗಿ ಹೋಯ್ತು..! ಮೋದಿ… ಮೋದಿ ಮೋದಿ…. ಇದು ಏನಿದ್ರೂ ಗುಜರಾತ್ ಅಂಗಳಕ್ಕೆ ಸೀಮೀತ ಅನ್ನೋದು ಕನ್ಫರ್ಮ್ ಆಗಿದೆ… ಯಾಕಂದ್ರೇ ಇದು ಕರ್ನಾಟಕ, ಮೋದಿಯ ಅಲೆ ಇಲ್ಲಿ ಅಷ್ಟಾಗಿ ನಡೆಯಲ್ಲ ಅನ್ನೋದಕ್ಕೆ ರಾಜ್ಯದ ಮತದಾರ ಸ್ಪಷ್ಟವಾಗಿ ಕಾಂಗ್ರೆಸ್‍ಗೆ ಭರ್ಜರಿಯಾದ ಲೀಡ್‍ನ್ನು ಕೊಡುವ ಮುಖೇನಾ ಉತ್ತರವನ್ನು ಕೊಟ್ಟಿದ್ದಾನೆ…!ಕಾಂಗ್ರೆಸ್ ಇವತ್ತು ರಾಜ್ಯದಲ್ಲಿ ಗೆದ್ದಾಗಿದೆ. ಬಿಜೆಪಿಗೆ ಅತ್ಯಂತ ಹೀನಾಯ ಸೋಲಾಗಿದೆ. ಅದು ಮೋದಿ, ಮತ್ತು ಅಮಿತ್ ಶಾ, ರಾಷ್ಟ್ರಿಯ ಅಧ್ಯಕ್ಷ ಜೆಪಿ ನಡ್ಡಾ, ಸೇರಿದಂತೇ ಇನ್ನೂ ಹಲವು ಬಿಜೆಪಿಯ ನಾಯಕರು ಮೇಲಿಂದ ಮೇಲೆ ಕರುನಾಡಿನ ಚುನಾವಣಾ ಅಖಾಡಕ್ಕೆ ದಾಂಗುಡಿಯನ್ನ ಇಟ್ಟರೂ, ಕೂಡ ಬಿಜೆಪಿಗೆ ಗೆಲುವು ದಕ್ಕಿಸಿಕೊಳ್ಳೋದಕ್ಕೆ ಸಾಧ್ಯವಾಗಿಲ್ಲ. ಇದಲ್ಲದೇ ಪ್ರಧಾನಿ ಮೋದಿಯೆ ಬಂದು ಭರ್ಜರಿ ರೋಡ್ ಶೋಗಳನ್ನೇ ನಡೆಸಿ ಹೋಗಿದ್ದರೂ, ಮೋದಿಯ ಅಲೆ ವರ್ಕೌಟ್ ಆಗಿಲ್ಲ…

ಇದರ ಜೊತೆಗೆ ಬಿಜೆಪಿ ನಾಯಕರು ಮಾಡಿಕೊಂಡ ಊರೇಗೌಡ, ನಂಜೇಗೌಡ, 40ಪಸೇರ್ಂಂಟ್ ಕಮಿಷನ್ ದಂಧೆ, ಕಾಂಗ್ರೆಸ್ ನಾಯಕರು ನಡೆಸಿದ ಪೇ ಸಿಎಂ ಅಭಿಯಾನ, ಪಿಎಸ್‍ಐ ಹಗರಣ ಹೀಗೆ ಹಲವು ಪ್ರಮಾದಗಳು ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದಂತೂ ಸುಳ್ಳಲ್ಲ..! ಬೊಮ್ಮಾಯಿ ಮೇಲೆ ಇಟ್ಟಕೊಂಡಿದ್ದ ನಿರೀಕ್ಷೆ ಹುಸಿಯಾಯ್ತಾಲ್ಲ..!
ಲಿಂಗಾಯತ, ಅಹಿಂದ, ಒಕ್ಕಲಿಗ ಮತಗಳ ಕೈ ಚಳಕ, ಬಿಜೆಪಿಗೆ ಹಿನ್ನಡೆ, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾಂಗ್ರೆಸ್ ಆರೋಪ ಮಾಡಿದಾಗೇ, ಮತ್ತು ಬಿಜೆಪಿಯನ್ನ ತೊರೆದು ಹೋದ ಶೆಟ್ಟರ್ ಮತ್ತು ಸವದಿ ಹೇಳಿದಾಗೇ ಲಿಂಗಾಯತರನ್ನ ಬಿಜೆಪಿ ಕಡೆಗಣಿಸಿತ್ತಾ ಅನ್ನೋದಕ್ಕೆ ಉತ್ತರ ಸಿಕ್ಕಿದಂತಿದೆ…. ಒಟ್ಟಾರೆಯಾಗಿ ಹೇಳೋದಾದರೇ, ಕಾಂಗ್ರೆಸ್‍ಗೆ ಲಿಂಗಾಯತ ಪ್ಯಾಟ್ರನ್ ಬಲ ನೀಡಿದೆ…. ಈ ಭಾರೀ ಲಿಂಗಾಯತ ಸಮುದಾಯ ಬಿಜೆಪಿಗೆ ವಿರುದ್ಧವಾಗಿ ನಿಂತಿರೋದು, ಇದರ ಜೊತೆಗೆ ಅಹಿಂದ, ಒಕ್ಕಲಿಗ, ಒಬಿಸಿ ಮತಗಳು ಬಿಜೆಪಿಗೆ ಗುನ್ನವಿಟ್ಟಿರೋದು, ಫಲಿತಾಂಶದಲ್ಲಿ ನಿಚ್ಚಳವಾಗಿ ಗೊತ್ತಾಗಿದೆ……

ಯಡಿಯೂರಪ್ಪನವರು ಇಳಿದ ನಂತರ ಬಸವರಾಜ ಬೊಮ್ಮಾಯಿಯವರ ಮೇಲೆ ನಿರೀಕ್ಷೆ ಇಟ್ಟುಕೊಂಡೇ ಬಿಜೆಪಿ ಹೈಕಮಾಂಡ್ ಅವರಿಗೆ ಮಣೆ ಹಾಕಿತ್ತು. ಅನೇಕರ ಹೆಸರು ಸಿಎಂ ಸ್ಥಾನಕ್ಕೆ ಕೇಳಿ ಬಂದರೂ ಅಂತಿಮವಾಗಿ ಬೊಮ್ಮಾಯಿಯವರ ಹೆಸರನ್ನೇ ಹೈಕಮಾಂಡ್ ಪರಿಗಣಿಸಿತ್ತು. ಆಗಲೇ ಶುರುವಾಗಿತ್ತು ಬೊಮ್ಮಾಯಿಯವರ ಪ್ರಭಾವದ ಕುರಿತಾಗಿನ ಚರ್ಚೆ. ಯಡಿಯೂರಪ್ಪನವರಂತಹ ನಾಯಕರು ಮುನ್ನಡಿಸಿದ ರಾಜ್ಯ ಬಿಜೆಪಿಗೆ ಬೊಮ್ಮಾಯಿ ಸಾಟಿಯಾಗ್ತಾರಾ ಅಂತ ಅನೇಕರು ಒಳಗೊಳಗೆ ಚರ್ಚಿಸುತ್ತಿದ್ದರು. ಆದರೂ ಬೊಮ್ಮಾಯಿಯವರ ಮೇಲೆ ಹೈಕಮಾಂಡ್ ಕೂಡ ಬಹಳ ವಿಶ್ವಾಸ ಇಟ್ಟುಕೊಂಡಿತ್ತು. ಯಾರು ಏನೇ ಹೇಳಿದರೂ ಬೊಮ್ಮಾಯಿ ಪಿಕ್ ಅಪ್ ಆಗ್ತಾರೆ, ಅವರಿಗೆ ನಾಯಕತ್ವದ ಪ್ರಭಾವಳಿ ಬರುತ್ತೆ ಅಂತ ನಿರೀಕ್ಷಿಸಿತ್ತು. ಆದರೆ ಈಗ ಬೊಮ್ಮಾಯಿಯವರ ಮೇಲೆ ಬಿಜೆಪಿ ಹೈಕಮಾಂಡ್ ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಯ್ತಾ ಅನ್ನೋದು ಸೋಲಿನ ಮೂಲಕ ಸ್ಪಷ್ಟವಾಗಿ ಗೋಚರಿಸಿದೆ..

ಬಸವರಾಜ ಬೊಮ್ಮಾಯಿ ತಮಗೆ ಸಿಎಂ ಸ್ಥಾನ ಸಿಗುತ್ತೆ ಅಂತ ಅಂದುಕೊಂಡಿದ್ದರೊ ಇಲ್ಲವೊ ಗೊತ್ತಿಲ್ಲ. ಆದ್ರೆ ,ಯಡಿಯೂರಪ್ಪನವರು ಕೆಳಗಿಳಿದ ಬಳಿಕ ಬೊಮ್ಮಾಯಿಯವರಿಗೆ ಅದೃಷ್ಟ ಒಲಿದು ಬಂದಿತ್ತು. ಬಿ.ಎಲ್.ಸಂತೋμï ,ಮುರುಗೇಶ್ ನಿರಾಣಿ,ಅಶ್ವತ್ಥ ನಾರಾಯಣ್, ಆರ್.ಅಶೋಕ್, ಅರವಿಂದ್ ಬೆಲ್ಲದ ಸೇರಿದಂತೆ ಹಲವರ ಹೆಸರು ಅವತ್ತು ಮುಂಚೂಣಿಯಲ್ಲಿತ್ತು. ಆದ್ರೆ ಬೊಮ್ಮಾಯಿಯವರು ಸಿಎಂ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಅರವಿಂದ್ ಬೆಲ್ಲದ ಅವರಂತೂ ಇನ್ನೇನು ಸಿಎಂ ಆಗಿಯೇ ಬಿಟ್ಟರು ಅನ್ನೋ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ ಬೊಮ್ಮಾಯಿಯವರು ತೆರೆ ಮರೆಯಲ್ಲಿ ನಡೆಸಿದ್ದ ಕಸರತ್ತು ಕೆಲಸ ಮಾಡಿತ್ತು. ಬೇರೆಯವರು ದೆಹಲಿ ಸುತ್ತಿದ್ದರೆ ಬೊಮ್ಮಾಯಿಯವರು ಮಾತ್ರ ಯಡಿಯೂರಪ್ಪನವರನ್ನು ಸುತ್ತುತ್ತಾ ಇದ್ರು. ಅವತ್ತಿಗೆ ಬೊಮ್ಮಾಯಿಯವರ ಪ್ಲಾನ್ ವರ್ಕೌಟ್ ಆಗಿತ್ತು..ಬೊಮ್ಮಾಯಿ ಮುಖ್ಯಮಂತ್ರಿ ಆಗಿಯೇ ಬಿಟ್ಟರು.. ಆದರೇ ಏನು ಪ್ರಯೋಜನಾ ರಾಜ್ಯದಲ್ಲಿ ಬೊಮ್ಮಾಯಿ ನಾಯಕತ್ವಕ್ಕೆ ಮತದಾರ ಜೈ ಅಂದಿಲ್ಲ… ಅಲ್ಲಿಗೆ ಬಿಜೆಪಿಯ ಯಾವ ಕಾರ್ಯತಂತ್ರವೂ ಸಫಲತೆ ಆಗಿಲ್ಲ ಅನ್ನೋದು ನಿಚ್ಚಳವಾಗಿದೆ..

ಬಿಎಸ್‍ವೈ ಸೈಡ್‍ಲೈನ್ ಆದಾಗಲೇ ಬಿಜೆಪಿ ಶಕ್ತಿ ಕುಂದಿತ್ತಾ..? ಆದರೆ ಈ ಬಾರಿ ಆದ ತಪ್ಪನ್ನಾ ಸರಿ ಮಾಡುತ್ತಾ ಬಿಜೆಪಿ..? ನೋಡಿ ರಾಜಾಹುಲಿ ಯಡಿಯೂರಪ್ಪನವರು ಯಾವುದೇ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟರು ಅಲ್ಲಿ ಭರ್ಜರಿ ಹವಾ ಸೃಷ್ಟಿಯಾಗ್ತಾ ಇತ್ತು. ಯಡಿಯೂರಪ್ಪನವರ ನಾಯಕತ್ವಕ್ಕೆ ಇರುವ ಹೊಳಪೇ ಅಂತಾದ್ದು. ಯಡಿಯೂರಪ್ಪನವರನ್ನು ಬಿಟ್ಟು ಬಿಜೆಪಿಗೆ ಪರ್ಯಾಯ ನಾಯಕತ್ವ ಸದ್ಯಕ್ಕಂತೂ ಕಾಣುತ್ತಿರಲಿಲ್ಲ. ಆದರೆ ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸದ ಬಳಿಕ ಒಂದಷ್ಟು ದಿನ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನ ಸರಿಯಾಗಿ ಬಳಸಿಕೊಳ್ಳದೇ ಅಸಡ್ಡೆ ಮಾಡಿತ್ತು…. ಆ ನಂತರ ಬಿಎಸ್‍ವೈ ಇಲ್ಲದೇ ಚುನಾವಣೆ ಗೆಲ್ಲೋದು ಕಷ್ಟ ಅಂತ ಗೊತ್ತಾಗಿದ್ದೇ ಮತ್ತೆ ರಾಜಾಹುಲಿಯನ್ನ ಮುನ್ನೆಲೆಗೆ ತಂದು, ಚುನಾವಣಾ ಅಖಾಡಕ್ಕೆ ಇಳಿಸಲಾಗಿತ್ತು… ಆದರೂ ಇದು ಅಷ್ಟಾಗಿ ವರ್ಕೌಟ್ ಆಗಲೇ ಇಲ್ಲ….. ಕೊನೆಗೇ ಬಿಜೆಪಿ ಸೋತು ಸುಣ್ಣವಾಗಿದೆ…

ಅದೇನೇ ಇರಲೀ ರಾಜ್ಯದಲ್ಲಿ ಬಿಜೆಪಿ ಚುನಾವಣೆ ಸಿದ್ಧತೆಗಳು ಪ್ರಾರಂಭವಾಗುವ ಹೊತ್ತಿನಲ್ಲಿ ಬದಿಗೆ ಸರಿಸಿದ್ದ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುನ್ನೆಲೆಗೆ ತಂದು ನಿಲ್ಲಿಸಿದರೂ ಆ ಬಗ್ಗೆ ಜನರಿಗೆ ವಿಶ್ವಾಸ ಬಂದಂತಿಲ್ಲ. ಯಡಿಯೂರಪ್ಪ ಅವರ ಶಕ್ತಿಯನ್ನು ಕೇವಲ ಮತಗಳಿಕೆ ರಾಜಕಾರಣಕ್ಕೆ ಬಳಸಿಕೊಂಡು ಮತ್ತೆ ತೆರೆ ಮರೆಗೆ ಸರಿಸುತ್ತಾರೆ ಎನ್ನುವುದು ವೀರಶೈವ ಲಿಂಗಾಯಿತ ಸಮುದಾಯದಲ್ಲಿ ದಟ್ಟವಾಗಿ ಮೂಡಿದ್ದು ಕೂಡ ಆ ಸಮುದಾಯ ನಿಧಾನವಾಗಿ ಕಾಂಗ್ರೆಸ್ ಕಡೆಗೆ ಮುಖ ಮಾಡಲು ಕಾರಣ. ಇದರ ಜೊತೆಗೆ ಅಹಿಂದ, ಒಕ್ಕಲಿಗ, ಲಿಂಗಾಯತ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ ಹಿಡಿದಿರೋದು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಿದೆ… ಹಾಗಾಗಿ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆದ ತಪ್ಪುಗಳನ್ನು ಮಾಡದಿರಲು ಬಿಗ್‍ಪ್ಲಾನ್ ಮಾಡಿಕೊಳ್ಳ ತೊಡಗಿದೆ.

ಮಲ್ಲಿಕಾರ್ಜುನ…. ರಾಮಸಂದ್ರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!