State News

ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತ: ಐದಾರು ಬಾರಿ ಪಲ್ಟಿ ಹೊಡೆದು ಬೈಕ್‌

ನೆಲಮಂಗಲ: ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಐದಾರು ಬಾರಿ ಪಲ್ಟಿ ಹೊಡೆದು ಹಾರಿ 40 ಅಡಿ ಕೆಳಕ್ಕೆ ಬಿದ್ದ ಪರಿಣಾಮ ಸವಾರನಿಗೆ ಗಾಯವಾಗಿರುವ ಘಟನೆ ನಡೆದಿದೆ.

38 ವರ್ಷದ ವೀರೇಂದ್ರ ಗಾಯಗೊಂಡ ಸವಾರ. ಆತ ರಾಯಚೂರು ಮೂಲದವರು ಎಂದು ಹೇಳಲಾಗಿದೆ. ವೇಗವಾಗಿ ಬಂದ ಬೈಕ್ ಪ್ಲೈಓವರ್‌ ತಡೆಗೋಡೆ ಡಿಕ್ಕಿ ಹೊಡೆದು ನೆಲಕ್ಕೆ ಬೈಕ್‌ ಸಮೇತ ಸವಾರ ಬಿದ್ದಿದ್ದಾನೆ. ಈ ಘಟನೆ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ನಡೆದಿದೆ. ಬೈಕ್ ಸವಾರನನ್ನು ಆಸ್ಪತೆಗೆ ಸ್ಥಳೀಯರು ದಾಖಲು ಮಾಡಿದ್ದಾರೆ.

ಅತೀ ವೇಗವೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ ಐದಾರು ಪೀಸ್ ಪೀಸ್ ಆಗಿದೆ. ತೀವ್ರ ರಕ್ತ ಸ್ರಾವ ದಿಂದ ಸವಾರ ನರಳಾಡಿದ್ದಾನೆ. ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆ ಬರುತ್ತಿದ್ದನು. ಕೂಡಲೇ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ದೇಹದ ಸಂಪೂರ್ಣ ಭಾಗ ಪುಡಿ ಪುಡಿ ಆಗಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!