ಆರ್ ವಿ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ ವತಿಯಿಂದ ಬೆಂಗಳೂರಿನ ಜೆಪಿ ನಗರ (J.P NAGARA)ದಲ್ಲಿರುವ ಆರ್ ವಿ ಡೆಂಟಲ್ ಕಾಲೇಜ್ ನಲ್ಲಿ GENESIS-2022 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಎಂ ಬಿ ಎಗೆ ಅಡ್ಮಿಷನ್ ಪಡೆದಿರೋ 180 ಮಂದಿ ಗೆ ಸ್ವಾಗತ ಕೋರಲಾಯಿತು . ಇಲ್ಲಿ 90 ಮಂದಿ ಸರ್ಕಾರಿ ಕೋಟಾ ಮತ್ತು 90 ಮ್ಯಾನೇಜ್ ಮೆಂಟ್ ಕೋಟಾದಿಂದ ಬಂದವರಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ಆರ್ ವಿ ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ ನಿರ್ದೇಶಕರಾದ ಪುರುಷೋತ್ತಮ್ ಭಂಗ್ ಮಾತನಾಡಿ ಇದು ವಿದ್ಯಾರ್ಥಿಗಳ 24ನೇ ಬ್ಯಾಚ್ ಆಗಿದೆ. 2 ನೇ ಅಟೋನಮಸ್ ಬ್ಯಾಚ್ ಆಗಿದೆ. ಇದನ್ನುಓದಿ :- ಸಚಿವ ಸ್ಥಾನ ಸಿಗದಿದ್ದಕ್ಕೆ ರಮೇಶ್ ಜಾರಕಿಹೊಳಿ ಹತಾಶೆಗೊಂಡಿದ್ದಾರೆ – ಡಿ.ಕೆ.ಶಿವಕುಮಾರ್ ವ್ಯಂಗ್ಯ
ಡೈಮಂಡ್ ರೇಟ್ ಕೂಡ ಈ ಸಂಸ್ಥೆಗೆ ಸಿಕ್ಕಿದೆ. ಜೊತೆಗೆ ನ್ಯಾಕ್ ಎ ಪ್ಲಸ್ ಶಿಕ್ಷಣ ಸಂಸ್ಥೆಯಾಗಿದೆ. ತುಂಬಾ ಹುಡುಗ್ರು ಇಲ್ಲಿ ಎಂ ಬಿ ಎ ಮಾಡಲು ಇಚ್ಛಿಸುತ್ತಾರೆ . ನಾವು 180 ಮಂದಿಗೆ ಮಾತ್ರ ಸೀಟ್ ನೀಡ್ತೀವಿ. ನಮ್ಮ ಎಂಬಿಎ ಕೋರ್ಸ್ ಗೆ ತುಂಬಾ ಡಿಮ್ಯಾಂಡ್ ಇದೆ ಎಂದು ಹೇಳಿದ್ರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ ಅನುಪ ರೊಂಗಾಲ, ನಿರ್ದೇಶಕ ಮತ್ತು CEO, ಇನ್ವೆನ್ಸಿಸ್ ಟೆಕ್ನಾಲಜೀಸ್. ಹಾಗೂ ಡಾ.ಮ್ಯಾಥ್ಯೂ ಮಣಿಮಾಲ, ಭಾಗವಹಿಸಿದ್ದರು.
ಇದನ್ನುಓದಿ :- ಸರ್ಕಾರದ ಪ್ರತಿಯೊಂದು ಯೋಜನೆಗಳು ತಲುಪುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ – ಅಶ್ವಥ್ ನಾರಾಯಣ್