ಬೆಂಗಳೂರು: ಇಡೀ ದೇಶಕ್ಕೆ ಕರ್ನಾಟಕ ರಾಜ್ಯ ಆರೋಗ್ಯ ಸೇವೆಯಲ್ಲಿ ಪ್ರಥಮ. ದೇಶದಲ್ಲಿ ನಮ್ಮ ರಾಜ್ಯದ ಆರೋಗ್ಯ ಕಾಲೇಜುಗಳನ್ನ ಸ್ಥಾಪನೆ ಮಾಡಲಾಗಿದೆ. ಹೆಚ್ಚು ಡಾಕ್ಟರ್ ಗಳನ್ನ ತಯಾರು ಮಾಡುತ್ತಿದ್ದೇವೆ. 70 ಮೆಡಿಕಲ್ ಕಾಲೇಜುಗಳಿವೆ. ಪ್ರತಿಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇದನ್ನ ನಮ್ಮ ದೇಶದ ಇತರೆ ರಾಜ್ಯಗಳು ನಮ್ಮನ್ನ ಫಾಲೊ ಮಾಡ್ತಿವೆ. ಇವತ್ತು 108 ಆ್ಯಂಬ್ಯುಲೆನ್ಸ್ ಗೆ ಆಧುನಿಕತೆ ಅಳವಡಿಸಿಕೊಳ್ಳಬೇಕು.ಇದನ್ನ ಸಂಪುಟಕ್ಕೆ ತಂದು ಲೋಕಾಪರ್ಣೆಗೆ ಅವಕಾಶ ತಂದಿದ್ದಾರೆ.108 ಆ್ಯಂಬ್ಯುಲೆನ್ಸ್ ನವ್ರ ಬಗ್ಗೆ ಡಿಕೆಶಿ ಅಸಮಧಾನ ವ್ಯಕ್ತಪಡಿಸಿದ್ದಾರೆ. 108 ಆ್ಯಂಬ್ಯುಲೆನ್ಸ್ ನವ್ರಿಗೂ ಖಾಸಗಿ ಆಸ್ಪತ್ರೆಯವ್ರಿಗೂ ಒಂದು ಒಪ್ಪಂದ ಇರುತ್ತೆ.108 ನವ್ರಿಗೆ ಈ ಚೇಷ್ಟೆ ಇದೆ, ಪೇಷೆಂಟ್ ಗಳನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಿ ಬಿಡ್ತಾರೆ.ಅಲ್ಲಿಗೆ ಹೋದ ಮೇಲೆ ಬಿಲ್ ಜಾಸ್ತಿ ಆಗುತ್ತೆ.ಅವರು ಬಿಲ್ ಭರ್ತಿ ಮಾಡಕ್ಕಾಗದೆ ಶಾಸಕರ ಬಳಿ ಬರ್ತಾರೆ.ನಾನು ತಿಂಗಳಿಗೆ ಇದೇ ರೀತಿ 20 ಲಕ್ಷ ಕೊಡ್ತೀನಿ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಚೆನ್ನಾಗಿದೆ.ಆ್ಯಂಬ್ಯುಲೆನ್ಸ್ ನವ್ರು ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಿ.ನಾನು ಮೊನ್ನೆ ವಿಕ್ಟೋರಿಯಾದಲ್ಲಿ ಹಲ್ಲಿನ ನೋವಿಗೆ ಚಿಕಿತ್ಸೆ ಪಡೆದೆ, ಚೆನ್ನಾಗಿದೆ ವ್ಯವಸ್ಥೆ ಅಲ್ಲಿ ಎಂದರು.