ಶಿವಮೊಗ್ಗ: ಜಿಲ್ಲೆಯ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 6ನೇ ದಿನವೂ ನಿಷೇಧಾಜ್ಞೆಮುಂದುವರಿಸಿದ್ದಾರೆ.
ಈಗಾಗಲೇ ರಾಗಿಗುಡ್ಡದಲ್ಲಿ ಕಳೆದ ವಾರದಿಂದ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದಲ್ಲಿ ಶಾಲೆ,ಕಾಲೇಜು, ಉದ್ಯೋಗಕ್ಕೆ ಹೋಗಲು ಮಾತ್ರ ಅವಕಾಶ ನೀಡಲಾಗಿದೆ.
ನಿನ್ನೆ ರಾಗಿಗುಡ್ಡದಲ್ಲಿ ಬಿಜೆಪಿ ಸತ್ಯಶೋಧನಾ ಸಮಿತಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ ಮಾಹಿತಿ ಕಲೆಹಾಕಲು ನಗರಕ್ಕೆ ತೆರಳಿದೆ. ತಂಡದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಡಾ.ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಚನ್ನಬಸಪ್ಪ ಸಾಥ್ ನೀಡಿದ್ದರು.