ಸರ್ಕಾರಿ ಶಾಲೆ (Government school) ಯಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ, ಸಚಿವ ಹಾಲಪ್ಪ ಆಚಾರ್ (Halappa achar) ಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ಕೊಪ್ಪಳ (Koppala) ಜಿಲ್ಲೆ ಯಲಬುರ್ಗಾ ತಾಲೂಕು ಚೌಡಾಪೂರ ಗ್ರಾಮದಲ್ಲಿ ನಡೆದಿದೆ. ಕಳೆದ 5 ವರ್ಷದಿಂದ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದೇ, ಕೇವಲ ಅತಿಥಿ ಶಿಕ್ಷಕರು ಶಾಲೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆ ಶಿಕ್ಷಕರ (Teacher) ನೇಮಕಕ್ಕೆ ಆಗ್ರಹಿಸಿ ಅನೇಕ ಬಾರಿ ಯಲಬುರ್ಗಾ ಶಾಸಕರೂ ಆಗಿರುವ ಸಚಿವ ಆಚಾರ್ ಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೆ, ಗ್ರಾಮಸ್ಥರ ಮನವಿಗೆ ಹಾಲಪ್ಪ ಆಚಾರ್ ಕಿವಿಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಹಾಲಪ್ಪ ಆಚಾರ್ ಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಆಗ ಎಚ್ಚೆತ್ತ ಸಚಿವರು ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ಶಿಕ್ಷರನ್ನು ನಿಯೋಜನೆ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಸುಮ್ಮನಾಗದ ಜನರು ಮತ್ತೆ ಸಚಿವ ಹಾಲಪ್ಪ ಆಚಾರ್ ವಿರುದ್ಧ ಗರಂ ಆಗಿದ್ದು. ನಮಗೆ ನಿಯೋಜನೆ ಬೇಡ, ಖಾಯಂ ಶಿಕ್ಷಕರನ್ನು ನೇಮಿಸಿ ಎಂದು ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಆಕ್ರೋಶ ಕಂಡು ಕಕ್ಕಾಬಿಕ್ಕಿಯಾದ ಸಚಿವ ಹಾಲಪ್ಪ ಆಚಾರ್ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ : – ದೇಶದ EV ರಾಜಧಾನಿ ಕರ್ನಾಟಕ- ಬಸವರಾಜ ಬೊಮ್ಮಾಯಿ