ಆನೇಕಲ್ : ಅವರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆದರೆ ಅವರಲ್ಲಿರುವಂತಹ ಟ್ಯಾಲೆಂಟ್ ನೋಡಿದರೆ ಎಂತಹವರಿಗೂ ಮೈ ಜುಮ್ ಎನಿಸುತ್ತದೆ ಡಿಶುಮ್ ಡಿಶುಮ್ ಎಂದು ಎದುರಾಳಿಗಳ ಜೊತೆ ನಡೆದ ಬಾಕ್ಸಿಂಗ್ ಕಾಳಗ ರೋಚಾಕವಾಗಿ ನಡೆದಿದೆ.
ಹೀಗೆ ಬಾಕ್ಸಿಂಗ್ ಕಣದಲ್ಲಿ ರೋಚಕವಾಗಿ ಫೈಟಿಂಗ್ ಮಾಡುತ್ತಿರುವ 15 ವರ್ಷದ ಮಕ್ಕಳು, ಪ್ರತಿಯೊಂದು ಪಂಚ್ಗು ಕುಗ್ಗದೆ ಪಂಚ್ ಗೆ ಪಂಚ್ ನೀಡುತ್ತಿರುವ ಯುವಕ ಈ ದೃಶ್ಯಾವಳಿ ಕಂಡುಬಂದಿದ್ದು, ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯ ಕ್ರೀಡಾಂಗಣದಲ್ಲಿ.
ಇಂದು ರಾಜ್ಯಮಟ್ಟದ ಬಾಕ್ಸಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯನ್ನು ಕರ್ನಾಟಕ ಅಮೆಚೂರ್ ಅಸೋಸಿಯೇಷನ್ ವತಿಯಿಂದ ಆಯೋಜನೆ ಮಾಡಿದ್ದು ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ 220ಕ್ಕೂ ಹೆಚ್ಚು ೧೫ ವರ್ಷದ ಬಾಲಕರು ಹಾಗು ೬೦ ಕ್ಕು ಹೆಚ್ಚು ಹೆಚ್ಚು ಬಾಲಕಿ ಬಾಕ್ಸರ್ ಗಳು ಭಾಗವಹಿಸಿದ್ದರು. ಎರಡು ದಿನ ನಡೆಯುವ ಈ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯ ಇಂದು ಪ್ರಾರಂಭವಾಗಿದ್ದು ನಾಳೆಯು ಸಹ ನಡೆಯಲಿದೆ ಎಂದು ಆಯೋಜಕರು ತಿಳಿಸುತ್ತಾರೆ.
ಈ ರೋಚಕ ಬಾಕ್ಸಿಂಗ್ ಪಂದ್ಯದಲ್ಲಿ ಪ್ರತಿ ಮಕ್ಕಳು ರಾಜ್ಯದ 15 ಕ್ಕು ಹೆಚ್ಚು ಜಿಲ್ಲೆಗಳಿಂದ ಭಾಗವಹಿಸಿದ್ದು ಎದರಾಳಿ ಬಾಕ್ಸರ್‌ನ ಜೊತೆ ಯಾವುದೇ ಆತಂಕವಿಲ್ಲದೆ ಸೆಟ್ನಲ್ಲಿ ಭಾಗವಹಿಸಿದ್ದು ಇಂತಹ ಬಾಕ್ಸಿಂಗ್ ಕ್ರೀಡೆಯನ್ನು ಮತ್ತೆ ಮತ್ತೆ ಆಯೋಜನೆ ಮಾಡಿದಲ್ಲಿ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರುವ ಮೂಲಕ ಜಿಲ್ಲೆ, ರಾಜ್ಯ ಹಾಗು ನ್ಯಾಷನಲ್ ಮಟ್ಟದಲ್ಲಿ ಆಟವಾಡಲು ಅನುಕೂಲವಾಗುತ್ತದೆ. ಗ್ರಾಮೀಣ ಭಾಗದಲ್ಲು ಈ ಬಾಕ್ಸಿಂಗ್ ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಮಕ್ಕಳು ಕೇವಲ ವಿಧ್ಯಾಭ್ಯಾಸವಲ್ಲದೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗುತ್ತಾರೆ. ಈ ಬಾಕ್ಸಿಂಗ್ ಕ್ರೀಡೆಗೆ ಸರ್ಕಾರವು ಸಹ ಪ್ರೋತ್ಸಾಹ ನೀಡ ಬೇಕೆಂದು ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪರವಾಗಿ ಮಾಧ್ಯಮಗಳ ಮುಖಾಂತರ ಮನವಿಯನ್ನು ಆಯೋಜಕರು ಮಾಡಿದರು.
ಈ ಬಾಕ್ಸಿಂಗ್ ಕ್ರೀಡೆಯಲ್ಲಿ ಅತಿ ಹೆಚ್ಚು ಬಡ ಮಕ್ಕಳೆ ಭಾಗವಹಿಸಿದ್ದ ಇವರಿಗೆ ಸರ್ಕಾರದ ಪ್ರೋತ್ಸಾಹ ಸಿಕ್ಕಿದ್ದೆ ಆದಲ್ಲಿ ಮುಂದೊಂದು ದಿನ ಇವರು ನಮ್ಮ ರಾಜ್ಯಕ್ಕೆ ಗೌರವ ತಂದು ಕೊಡುವಲ್ಲಿ ಯಾವ ಅನುಮಾನಗಳು ಇಲ್ಲ ಸರ್ಕಾರ ಇಂತಹ ಕ್ರೀಡಾಸಕ್ತಿ ಇರುವ ಮಕ್ಕಳನು ಗುರುತಿಸಿ ಅವರಿಗು ಇನ್ನು ಉತ್ತಮ ತರಬೇತಿ ನೀಡಿ ರಾಜ್ಯಕ್ಕೆ ದೇಶಕ್ಕೆ ಗೌರವ ತರಲು ಸಹಕರಿಸಲಿ ಎಂಬುದೆ ನಮ್ಮ ಆಶಯ.