ರಾಮನಗರ: ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿರುವ ಘಟನೆ ನಡೆದಿದೆ.
ಶಾಲೆಯ ಮುಖ್ಯೋಪಾಧ್ಯಾಯರಿಂದ ಬೇಜವಾಬ್ದಾರಿಗೆ ವಿದ್ಯಾರ್ಥಿನಿ ಆಸ್ಪತ್ರೆಗೆ ಸೇರಿದ್ದಾಳೆ. ಆಕೆಗೆ ಶಾಲೆಯ ಶೌಚಾಲಯ ಸ್ವಚ್ಛ ಮಾಡಿ ಉಸಿರಾಟದ ಸಮಸ್ಯೆಯಿಂದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಗಡಿ ತಾಲೂಕಿನ ತೂಬಿನಕೆರೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಹೇಮಲತಾ (9) ಮೂರನೇ ತರಗತಿ ಓದುತ್ತಿದ್ದಾಳೆ. ಶುಕ್ರವಾರರಂದು ಬ್ಲೀಚಿಂಗ್ ಪೌಡರ್, ಆ್ಯಸಿಡ್ ಕೊಟ್ಟು ಶೌಚಾಲಯ ಕ್ಲೀನ್ ಮಾಡುವಂತೆ ಹೇಮಲತಾಳಿಗೆ ಮುಖ್ಯೋಪಾಧ್ಯಾಯ ಸಿದ್ದಲಿಂಗಯ್ಯ ಗುರು, ಸಹ ಶಿಕ್ಷಕ ಬಸವರಾಜು ಹೇಳಿದ್ದರು.
ಶಿಕ್ಷಕರು ಹೇಳಿದಂತೆ ಹೇಮಲತಾ ಶೌಚಾಲಯ ಕ್ಲೀನ್ ಮಾಡಿದ್ದಾಳೆ. ಕ್ಲೀನ್ ಮಾಡಿ ವಿದ್ಯಾರ್ಥಿನಿ ಹೇಮಲತಾ ಮನೆಗೆ ಬಂದ್ದಿದ್ದು, ಕೆಲ ಸಮಯದ ನಂತರ ಅಸ್ವಸ್ಥಗೊಂಡಿದ್ದಾಳೆ. ತಕ್ಷಣವೇ ಪೋಷಕರು ಮಾಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.