ಬೆಂಗಳೂರು: ವಿದ್ಯಾರ್ಥಿಗಳು ಅರಣ್ಯ ಭವನದ ಮುಂದೆ ತಟ್ಟೆ ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ. ಬಿಕ್ಷೆ ಬೇಡುವ ಮೂಲಕ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಪ್ರತಿಭಟನೆ ನಡೆಸುತ್ತಿದ್ದಾರೆ.
310 ಅರಣ್ಯ ವೀಕ್ಷಕರ ನೇಮಕಾತಿ ಅಧಿಸೂಚನೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಿನ ನೋಟಿಫಿಕೇಷನ್ ಕೂಡಲೇ ರದ್ದು ಮಾಡಬೇಕು.ಕೋವಿಡ್ ಸಂದರ್ಭದಲ್ಲಿ ಲಿಖಿತ ಪರೀಕ್ಷೆ ನಿಲ್ಲಿಸಲಾಗಿತ್ತು.ಈಗ ಪರ್ಸೆಂಟೇಜ್ ಆದಾರದಲ್ಲಿ ಆಯ್ಕೆ ಮಾಡ್ತಿದ್ದಾರೆ.ಇದನ್ನ ಕೂಡಲೇ ಹಿಂಪಡೆದು ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಎಸ್ ಎಸ್ ಎಲ್ ಸಿ ಅಂಕಗಳ ಮೇಲಿನ ಆಯ್ಕೆಗಳನ್ನ ರದ್ದುಪಡಿಸಿ.ಎಲ್ಲಾ ಅರ್ಹರಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿ.ಸರ್ಕಾರಿ ಕೆಲಸದ ಆಸೆಯಲ್ಲಿದ್ದ ವಿದ್ಯಾರ್ಥಿಗಳ ಆಸೆಗೆ ಅರಣ್ಯ ಇಲಾಖೆ ಮಣ್ಣು ಹಾಕಿದೆ.ಕೂಡಲೇ ಹೊಸ ಅಧಿಸೂಚನೆ ಹೊರಡಿಸಿ ಪರೀಕ್ಷೆ ನಡೆಸಬೇಕು. ಬೇಕೇ ಬೇಕು ಪರೀಕ್ಷೆ ಎಂದು ಅಭ್ಯರ್ಥಿಗಳ ವಿಭಿನ್ನ ಪ್ರತಿಭಟನೆ ನಡೆಸುತ್ತಿದ್ದಾರೆ. ತಟ್ಟೆ ಹಿಡಿದು ದಯವಿಟ್ಟು ನಮ್ಮ ಆಸೆಗಳಿಗೆ ಮಣ್ಣಾಕಬೇಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.