ಕೆರೆಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಂತಹ ಇಬ್ಬರು ಸಹೋದರಿಯರನ್ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕ ರಕ್ಷಣೆ ಮಾಡಿ ಮಾನವೀಯತೆ ಮೆರೆದ ಘಟನೆ ತುಮಕೂರು (Tumakuru) ಜಿಲ್ಲೆ ಸಿರಾ ತಾಲ್ಲೂಕಿನ ಹಂದಿಗುಂಟೆ ಕೆರೆಯಲ್ಲಿ ನಡೆದಿದೆ. ಸಿರಾ ಘಟಕದ ಕೆಎಸ್ ಆರ್ ಟಿಸಿ (KSRTC) ಬಸ್ ಚಾಲಕ ಮಂಜುನಾಥ್ ಸಹೋದರಿಯರನ್ನ ರಕ್ಷಣೆ ಮಾಡಿ ಮಾನವೀಯತೆ ಮೆರೆದ ಚಾಲಕನಾಗಿದ್ದಾನೆ.
ಸಾರಿಗೆ ಬಸ್ ನಾಗೇನಹಳ್ಳಿ ಕಡೆಯಿಂದ ಸಿರಾ ಕಡೆಗೆ ಬರುತ್ತಿದ್ದಾಗ ಬಟ್ಟೆ ತೊಳೆಯಲು ಹೋದ ಇಬ್ಬರು ಸಹೋದರಿಯರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಬಂದ ಸಾರಿಗೆ ಬಸ್ ಚಾಲಕ ಮಂಜುನಾಥ್ ಘಟನೆ ನೋಡಿ ಪ್ರಾಣದ ಹಂಗನ್ನೇ ತೊರೆದು ನೀರಿಗೆ ಹಾರಿ ಇಬ್ಬರು ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಕೂಡಲೇ ಇಬ್ಬರು ಬಾಲಕಿಯರನ್ನ ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸುವ ಮೂಲಕ ಎರಡು ಜೀವಗಳನ್ನ ಉಳಿಸಲಾಗಿದೆ. ಸಾರಿಗೆ ಬಸ್ ಚಾಲಕ ಮಂಜುನಾಥ್ (Manjunath) ಕರ್ತವ್ಯ ಪ್ರಜ್ಞೆಗೆ ಇಡೀ ನಾಡಿಗೆ ನಾಡೇ ಕೊಂಡಾಡ್ತಿದೆ. ಇದನ್ನು ಓದಿ :- ಹವಾಮಾನ ವೈಪರೀತ್ಯ – ಸಿದ್ದರಾಮಯ್ಯ ಶ್ರೀನಗರ ಪ್ರವಾಸ ರದ್ದು
ಮಂಜುನಾಥ್ ನ ಈ ಸಾಹಸಕ್ಕೆ ಇಲಾಖೆಯ ಹಿರಿಯ ಅಧಿಕಾರಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಶಹಬಾಶ್ ಗಿರಿ ಜೊತೆಗೆ ಇಲಾಖೆಗೆ ಸಾರ್ಥಕತೆ ಸಿಕ್ಕಿದೆ ಅಂತಾ ಸಾಮಾಜಿಕ ಜಾಲತಾಣ (Social media) ಗಳಲ್ಲಿ ಕೊಂಡಾಡಿದ್ದಾರೆ. ಚಾಲಕ ಮಂಜುನಾಥ್ ಮಾತನಾಡಿ, ಮನುಷ್ಯತ್ವದಿಂದ ನನ್ನ ಕೆಲಸ ಮಾಡಿದ್ದೇನೆ. ಸ್ಥಳೀಯರು ಅಲ್ಲೇ ಇದ್ರೂ ಯಾರೂ ಕಾಪಾಡಿರಲಿಲ್ಲ. ಮಹಿಳೆ ಕಣ್ಣೀರು ಹಾಕ್ತಾ ಕೇಳಿಕೊಂಡ್ರು. ಕರ್ತವ್ಯದಲ್ಲಿದ್ರೂ ಕೂಡ ನೀರಿನಲ್ಲಿ ಮುಳುಗಿದ ಇಬ್ಬರು ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಿದೆ. ನನ್ನ ಈ ಒಂದು ಸಮಯ ಪ್ರಜ್ಞೆಗೆ ಜಿಲ್ಲಾಡಳಿತ, ಸಾರಿಗೆ ನಿಗಮದಿಂದ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ :- ಕೋಲಾರದಲ್ಲಿ ಯತೀಂದ್ರ ಮುಂದೆ ವರ್ತೂರು ಪ್ರಕಾಶ್ ಗೆ ಗ್ರಾಮಸ್ಥನಿಂದ ಜೈಕಾರ