ಹುಬ್ಬಳ್ಳಿ : ದೇಶ ನಡಿತಿರೋದು ಸಂವಿಧಾನದ ಮೇಲೆ ಹೊರತು ಭಗವದ್ಗೀತೆ ಮೇಲಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು. ಇವಾಗ ಸಂವಿಧಾನದ ಸರ್ಕಾರ ಇದೆ. ದೇಶ ನಡಿತಿರೋದು ಭಗವದ್ಗೀತೆ ಮೇಲೆ ಅಲ್ಲ, ಕುರಾನ್ ಮೇಲೆ ಅಲ್ಲ, ಬೈಬಲ್ ಮೇಲೆ ಅಲ್ಲ. ದೇಶ ನಡಿತಿರೋದು ಸಂವಿಧಾನದ ಮೇಲೆ. ಯಾರು ಏನೆ ಅಂದ್ರು ಕರ್ನಾಟಕದಲ್ಲಿ ನಡಿತಿರೋದು ಸಂವಿಧಾನದ ಸರ್ಕಾರವೇ ಎಂದರು
ಸರ್ಕಾರಗಳು ನಡೆಯೋದು ಸಂವಿಧಾನ ಮೇಲೆ. ಬಸವ ತತ್ವ, ಅಂಬೇಡ್ಕರ್ ತತ್ವ ಮೇಲೆ ಸರ್ಕಾರ ನಡೀತಿದೆ. ಹಿಂದಿನ ಸರ್ಕಾರ ಹಿಂದುತ್ವದ ಮೇಲೆ ನಡೀತಿತ್ತು ಎಂದು ಹೇಳಿದ್ದಾರೆ.
ಪೀಠದ ಮೇಲೆ ಕುಳಿತು ಕಾಗೇರಿ ನಾನು ಆರ್ಎಸ್ಎಸ್ನವರು ಎಂದಿದ್ರು. ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ. ಯತ್ನಾಳ್ ಆರೋಪಕ್ಕೆ ವಿಜಯೇಂದ್ರ ಉತ್ತರ ಕೊಡಬೇಕು. ವಿಜಯೇಂದ್ರ, ಯತೀಂದ್ರ ಮೇಲೆ ಶ್ಯಾಡೋ ಸಿಎಂ ಅಂತಾ ಆರೋಪ ಮಾಡಿದ್ರು. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಯಾರಿದ್ರು? ಅಂತ ಖರ್ಗೆ ಪ್ರಶ್ನಿಸಿದ್ದಾರೆ.
ಯತ್ನಾಳ್ ದಾಖಲೆ ಬಿಡುಗಡೆ ಮಾಡ್ತೀವಿ ಅಂತಾರೆ. ಯತ್ನಾಳ್ ಅವರಲ್ಲಿ ನಾನು ಕರ್ನಾಟಕದ ಜನರ ಪರ ಮನವಿ ಮಾಡ್ತೀನಿ. ನೀವು ದಾಖಲೆ ಕೊಡಿ. ನೀವು ಪ್ರಾಮಾಣಿಕರು ಅಂತ ಗೊತ್ತಿದೆ. ಯವುದೇ ದಾಖಲೆ ಇದ್ರೆ ನಾವು ಜಸ್ಟೀಸ್ ಮೈಕಲ್ ಕುನ್ನಾ ಅವರ ಸಮಿತಿ ಇದೆ. ಅವರಿಗೆ ದಾಖಲೆ ಕೊಡಿ ಅಂತ ತಿಳಿಸಿದ್ದಾರೆ.