ಬೆಂಗಳೂರು : ಈಗಾಗಲೇ ವರದಿಯಾಗಿರುವ ಹಾಗೆ ಮಹಾರಾಷ್ಟ್ರದ ಸೋಲಾಪರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೇನೆಯ ಚಾಪರ್‌ನಲ್ಲಿ ಕಲಬುರಗಿಗೆ ವಾಪಸ್ಸಾಗಿ; ಬೆಳಗ್ಗೆ ಅವರು ದೆಹಲಿಯಿಂದ ಆಗಮಿಸಿದ್ದ ಭಾರತೀಯ ವಾಯು ಸೇನೆಯ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು.
ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಬಂದ ನಂತರ ಅವರಿಗಾಗಿ ಕಾಯುತ್ತಿದ್ದ ಮತ್ತು ದೆಹಲಿಯಲ್ಲಿ ನೋಂದಣಿಯಾಗಿರುವ ಕಾರು ಹತ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಭಟ್ಟರ ಮಾರೇನಹಳ್ಳಿಗೆ ತೆರಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ವಿಮಾನ ನಿಲ್ದಾಣದ ಹೊರಭಾಗದಲ್ಲಿ ತಮ್ಮನ್ನು ನೋಡಲು ಕಾಯುತ್ತಿದ್ದ ಜನರೆಡೆ ಮುಗುಳ್ನಗುತ್ತಾ ಕೈ ಬೀಸುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಪ್ರಧಾನಿ ಮೋದಿ ಭಟ್ಟರ ಮಾರೇನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟಿಸಿಲಿದ್ದಾರೆ. ಅದರ ಜೊತೆಗೆ ವಿಶ್ವದಲ್ಲೇ ಅತಿದೊಡ್ಡದು ಎನ್ನಲಾಗಿರುವ ಹೈ-ಟೆಕ್ ಏರೋಸ್ಪೇಸ್ ಪಾರ್ಕನ್ನು ಸಹ ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ.