ಬಳ್ಳಾರಿ : ನಗರದ ದುರ್ಗಮ್ಮ ದೇವಸ್ಥಾನ ಮತ್ತು ಕಪ್ಪಗಲ್ ರಸ್ತೆಯಲ್ಲಿ ಮಹಾನಗರ ಪಾಲಿಕೆಯ ವತಿಯಿಂದ 3 ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಅಕ್ರಮ ತೆರವು ಕಾರ್ಯಾಚರಣೆ ಬಗ್ಗೆ ನಿನ್ನೆಯೇ ಮೈಕ್ ಮೂಲಕ ಹಾಗೂ ನೋಟಿಸ್ ಮೂಲಕ ಮುನ್ನೆಚ್ಚರಿಕೆ ನೀಡಿದ ಬೆನ್ನಲ್ಲೆ ಕೆಲವು ಅಂಗಡಿಗಳ ಮಾಲೀಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ಇವತ್ತು ಪೊಲೀಸ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಅಗ್ನಿ ಶಾಮಕ ದಳದ ಸಿಬ್ಬಂದಿ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಅನಧಿಕೃತವಾಗಿ ನಿರ್ಮಿಸಲಾಗಿದ್ದ ಬೇಕರಿ, ಹೋಟೆಲ್, ಜ್ಯೂಸ್ ಸೆಂಟರ್, ಕಿರಾಣಿ ಅಂಗಡಿ, ಬಟ್ಟೆ ಅಂಗಡಿಗಳೂ ಸೇರಿದಂತೆ ನಾನಾ ಕಟ್ಟಡಗಳನ್ನು ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ನೆಲಸಮ ಮಾಡಲಾಗಿದೆ.
ಈ ವೇಳೆಯೂ ಹಲವು ಅಂಗಡಿ ಮಾಲೀಕರು ತೆರವು ಕಾರ್ಯವನ್ನು ಮಾಡಬೇಡಿ ಎಂದು ಆ ಕ್ರೋಶ ವ್ಯಕ್ತಪಡಿಸಿದ್ದಾರೆ.