ಇಂದು ವಿಧಾನಸಭೆಯಲ್ಲಿ ವಿಧೇಯಕದ ಪ್ರತಿಗಳನ್ನ ಹರಿದು ಹಾಕಿ ಡೆಪ್ಯೂಟಿ ಸ್ಪೀಕರ್‍ರನ್ನ ಅವಮಾನಿಸಿದ ಘಟನೆ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.. ಇಂದು ಬಿಜೆಪಿ ಅವರು ಅವ್ರು ಕಾಂಗ್ರೆಸ್ ಮುಕ್ತ ಅಂತಾರೆ ಆದರೆ ನಾವು ನಾವು ಬಿಜೆಪಿ ಮುಕ್ತ ಅಂತಾ ಹೇಳಲ್ಲ, ಡೆಪ್ಯುಟಿ ಸ್ಪೀಕರ್ ಆಗಿದ್ದಕ್ಕೆ ಅವರು ಇಂದಿನ ಈ ಕಹಿ ಘಟನೆಯನ್ನ ಸಹಿಸಿಕೊಂಡಿದ್ದಾರೆ. ಇದೊಂದು ನೋವು ತರುವಂತದ್ದು. ಪ್ರಜಾಪ್ರಭುತ್ವದ ಮೇಲೆ ಇಂತವರಿಗೆ ನಂಬಿಕೆ ಇಲ್ಲ. ಇವತ್ತು ಬಿಜೆಪಿ ಬಡವರ ವಿರುದ್ದವೇ ಇದೆ ಎಂಬುದು ಸಾಬೀತಾಗಿದೆ. ಅದಕ್ಕಾಗಿ ಅವರಿಗೆ ಹೊಟ್ಟೆ ಉರಿ ಹೆಚ್ಚಿದೆ. ಇದೆಲ್ಲಾ ಕೇಶವಕೃಪಾದಲ್ಲಿ ಕೂತವರು ನೋಡಲಿ ಅಂತಾ ನಾಟಕ ಆಡ್ತಿದ್ದಾರೆ. ಇವರ ಯೋಗ್ಯತೆಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳೋಕೆ ಆಗಿಲ್ಲ..
ಬಜೆಟ್ ಮೇಲೆ ಚರ್ಚೆ ನಡೀತ್ತಿದೆ, ವಿಪಕ್ಷ ನಾಯಕ ಇಲ್ಲ ಅಂದರೆ ಇದು ಪ್ರಜಾಪ್ರಭುತ್ವ , ಸಂವಿಧಾನ ವಿರೋಧಿ ಅಲ್ವಾ..? ಯೋಗ್ಯತೆ ಇಲ್ಲದೇ ಇರೋದು ಪಾಠ ಹೇಳಿಕೊಡೋಕೆ ಬರುತ್ತಿದ್ದಾರೆ. ಇವರ ಯಾವುದೇ ಆಟಕ್ಕೂ ನಾವು ವಿಚಲಿತರಾಗೋದಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದೆ ಇರೋದು ಕರ್ನಾಟಕದ ಜನತೆಗೆ ಮಾಡಿದ ಅಪಮಾನ ಅಲ್ವಾ..? ಅವರ ಪಾರ್ಟಿಯಲ್ಲಿ ಏನಾಗ್ತಿದೆ ಅನ್ನೋದೇ ಅವರಿಗೆ ಗೊತ್ತಿಲ್ಲ. ನಾವು ಕೂಡಾ ಪ್ರತಿಭಟನೆ ಮಾಡ್ತೀವಿ ಅದ್ರೆ ಆದರೆ ಇವರಂತೆ ನಡೆದುಕೊಳ್ಳಲ್ಲ, ದಲಿತ ಸಮಾಜದ ವ್ಯಕ್ತಿ ಆ ಪೀಠದಲ್ಲಿ ಕುಳಿತುಕೊಂಡಿದ್ದನ್ನು ಇವರು ಸಹಿಸಿಲ್ವಾ..? ಹಿಂದೆ ಸ್ಪೀಕರ್ ಆಗಿ ಅಲ್ಲಿ ಕೂತವರು ಆರ್ ಎಸ್ ಎಸ್ ಶಾಖೆಯಿಂದ ಬಂದಿದ್ದೇನೆ, ನನಗೆ ಹೆಮ್ಮೆ ಇದೆ ಅಂದಿದ್ರು ಇವತ್ತು ಅದು ಬದಲಾವಣೆ ಆಗಿದೆ ಎಂದು ಸಚಿವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೀಠಕ್ಕೆ ಅಗೌರವ ತೋರಿರುವ ಸದಸ್ಯರು, ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಭಿಕೆ ಆದರೆ ಕ್ಷಮೆ ಕೇಳಬೇಕು. ಈ ಘಟನೆಯಿಂದ ನಮ್ಮಿಂದ ಏನಾದರೂ ತಪ್ಪಾಗಿದ್ರೆ ಸ್ಪೀಕರ್ ಮತ್ರೆ ಡೆಪ್ಯೂಟಿ ಸ್ಪೀಕರ್ ಗೆ ಕ್ಷಮೆ ಕೇಳುತ್ತೇನೆ.