ಭಾರತೀಯ ಜನತಾ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಉಮಾಭಾರತಿ (Uma bharti) ಮಧ್ಯಪ್ರದೇಶದ (Madhya Pradesh) ಓರ್ಚಾ ಬಳಿ ಇರುವ ಮದ್ಯದ ಅಂಗಡಿಯ (Wine Shop) ಮುಂಭಾಗದಲ್ಲಿ ಬಿಡಾಡಿ ದನಗಳನ್ನು ಕಟ್ಟಿ ಹಾಕಿ ಮದ್ಯವನ್ನು ತ್ಯಜಿಸಿ ಹಸುವಿನ ಹಾಲು ಕುಡಿಯುವಂತೆ ಕರೆ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಮದ್ಯಪಾನ ವಿರುದ್ಧ ಹೋರಾಟ ನಡೆಸುತ್ತಿರುವ ಉಮಾಭಾರತಿ ದನಗಳಿಗೆ ಹುಲ್ಲು ತಿನ್ನಿಸಿ, ಮದ್ಯಪಾನದ ಬದಲು ಹಾಲು ಕುಡಿಯಿರಿ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ.
ಓರ್ಚಾ ಬಳಿ ಇರುವ ಭಾರತ ನಿರ್ಮಿತ ವಿದೇಶಿ ಮದ್ಯ ಮಾರಾಟ ಮಾಡುವ ಬಾರ್ನ ಮುಂದೆ ಬಿಡಾಡಿ ದನಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದ ಉಮಾ ಭಾರತಿ ಮತ್ತು ಬೆಂಬಲಿಗರು ಹಾಲು ಕುಡಿಯಿರಿ, ಶರಾಬನ್ನಲ್ಲ ಎಂದು ಘೋಷಣೆ ಕೂಗಿದರು. ಈ ವೇಳೆ ಪರಿಸ್ಥಿತಿ ಹದಗೆಡುವ ಮುನ್ನ ಬಾರ್ನ ಮಾಲೀಕರು ತಕ್ಷಣವೇ ಮದ್ಯದಂಗಡಿ ಬಾಗಿಲು ಬಂದ್ ಮಾಡಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಇದೇ ಮದ್ಯದಂಗಡಿಗೆ ಬಿಜೆಪಿ ಮುಖಂಡನೊಬ್ಬ ಹಸುವಿನ ಸೆಗಣಿ ಎಸೆದು ಪ್ರತಿಭಟನೆ ಮಾಡಿದ್ದರು. ಇದನ್ನೂ ಓದಿ : – ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಯಾರಿಗೂ ಕನಸು ಬಿದ್ದಿರಲಿಲ್ಲ – ಈಶ್ವರಪ್ಪ
ಬಿಜೆಪಿ (BJP) ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮದ್ಯ ಸೇವನೆ ವಿರುದ್ಧದ ಅಭಿಯಾನವನ್ನು ಮಾಜಿ ಮುಖ್ಯಮಂತ್ರಿ ಉಮಾಭಾರತಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರವು ಪ್ರತಿ ವರ್ಷ ಬಿಡುಗಡೆ ಮಾಡುವ ಮದ್ಯದ ನೀತಿಗೆ ಸೂಕ್ತವಾದ ತಿದ್ದುಪಡಿಗಳನ್ನು ಮತ್ತು ವ್ಯಸನವನ್ನು ನಿಯಂತ್ರಿಸಲು ಕ್ರಮಗಳನ್ನು ಅಳವಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : – ನಟ ಸುದೀಪ್ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್