ರಾಯಚೂರು : ದಟ್ಟ ಕಾಡಿನ ನಡುವಿರುವ ಹೈಸ್ಕೂಲ್‌ಗೆ ಇಲ್ಲ ಬಸ್ ಸೌಲಭ್ಯ ರಾತ್ರಿ ಹೊತ್ತಿನಲ್ಲಿ ಕಾಲ್ನಡಿ ಮೂಲಕ ಮನೆಗೆ ಹೋಗ್ತೀರೋ ವಿದ್ಯಾರ್ಥಿನಿಯರು ವಿದ್ಯೆಗಾಗಿ ಮರಕಮದಿನ್ನಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಪರದಾಟ.
ಮಸ್ಕಿ ತಾಲೂಕಿನ ಮರಕಮದಿನ್ನಿ ಸರಕಾರಿ ಪ್ರೌಢ ಶಾಲೆ RMSA. ನಿತ್ಯ ರಾತ್ರಿ ಹೊತ್ತಿನಲ್ಲೇ ಮನೆ ತಲುಪುತ್ತಿರೋ ವಿದ್ಯಾರ್ಥಿಗಳು ಭಯದಿಂದ ವಿದ್ಯಾರ್ಥಿನಿಯರು ಗುಂಪು ಗುಂಪಾಗಿ ಕಾಲ್ನಡಿಗೆ. ಮರಕಮದಿನ್ನಿ ಗ್ರಾಮಕ್ಕಿಲ್ಲ ಮಧ್ಯಾಹ್ನ ಬಳಿಕ ಸರಕಾರಿ ಬಸ್ ಇಲ್ಲ.
4-5 ಕಿಮೀ ನಡೆದು ಮನೆಗೆ ಹೋಗಬೇಕಾದದ್ದು ಅನಿವಾರ್ಯವಾಗಿದ್ದೆ ಬೆಳಗ್ಗೆ 7:30 ಕ್ಕೆ ಮನೆಯಿಂದ ಶಾಲೆಗೆ ಹೊರಡ್ತಾರೆ ವಿದ್ಯಾರ್ಥಿಗಳು. ಬೆಳಗ್ಗೆ 9:30 ಕ್ಕೆ ಶಾಲೆ ಬಂದು ಸೇರ್ತಾರೆ ವಿದ್ಯಾರ್ಥಿಗಳು. ಸಂಜೆ 5:30 ಕ್ಕೆ ಶಾಲೆ ಬಿಟ್ಟರೆ ರಾತ್ರಿ 8 ಗಂಟೆಗೆ ಮನೆ ಸೇರ್ತಾರೆ.
ಈಗ ಕತ್ತಲಾಗೈತಿ, ನಮಗೆ ಏನಾದರೂ ಆದರೆ ಯಾರು ಹೊಣೆ ನಾವೆಲ್ಲ ಹೆಣ್ಮಕ್ಳೀದ್ದೀವಿ. ನಾವು 5 ಕಿ.ಮೀ ನಡೆದೇ ಬರಬೇಕು. ಅದರಲ್ಲೂ ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಬೇರೆ ಹಾಕ್ತಿದ್ದಾರೆ. ನಾವು ಎಸ್‌ಎಸ್‌ಎಲ್‌ಸಿ(SSLC) ವಿದ್ಯಾರ್ಥಿಗಳು ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಹೋಗಬೇಕಾದರೆ ರಾತ್ರಿ 8 ಆಗುತ್ತೆ.
ನಾವು ನೋಡಿದ್ರೆ ಹೆಣ್ಮಕ್ಳೀದ್ದೀವಿ ಹೆಚ್ಚು ಕಡಿಮೆ ಆದರೆ ನಮಗೆ ಏನಾದರೂ ಆದರೆ ಸರ್ಕಾರವೇ ಹೊಣೆ ವಿದ್ಯಾರ್ಥಿಗಳಿಗೆ ಸೌಲಭ್ಯ ಕೊಡ್ತೀವಿ ಅಂತಾರೆ ಏನ್ ಕೊಡ್ತಾರೆ.? ಇಂತಹ ಕತ್ತಲಲ್ಲಿ ಗ್ರೂಪ್ ಮಾಡಿಕೊಂಡು ಮನೆಗೆ ಹೋಗ್ತೀವಿ.