ಬೀದರ್ : ಹುಮ್ನಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕಾರ್ಖಾನೆಯಲ್ಲಿ ಅನೀಲ ಸೋರಿಕೆ ಹಿನ್ನೆಲೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ಪ್ರಸನ್ ಪ್ರಿ-ಪ್ರೊಸೆಸಿಂಗ್ ಲಿಮಿಟೆಡನಲ್ಲಿ ಭಾನುವಾರ ರಾತ್ರಿ 10:30ರ ಸುಮಾರಿಗೆ ಸಂಭವಿಸಿದೆ.
ಈ ಘಟನೆಯಲ್ಲಿ ಮೃತಪಟ್ಟವರನ್ನು ಪಟ್ಟಣದ ವಾಂಜ್ರಿ ನಿವಾಸಿ ಎಂ.ಡಿ.ಶಾದಾಬ್(19) ಮಧ್ಯ ಪ್ರದೇಶ ಮೂಲದ ಇಂದ್ರಜೀತ್ ರಾಹುಲ್ (23)ಎಂದು ತಿಳಿದುಬಂದಿದೆ.
ಈ ಘಟನೆ ಹಿನ್ನೆಲೆಯಲ್ಲಿ ಡಿಸಿ ಗೋವಿಂದರೆಡ್ಡಿ, ಎಸ್.ಪಿ ಚನ್ನಬಸವಣ್ಣ ಲಂಗೋಟಿ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ಸಿಪಿಐ ಜಿ.ಎಂ.ಪಾಟೀಲ ಇದ್ದರು.