ಸಂತೋಷ್ ಸರಳೆಬೆಟ್ಟು, ರಾಜ್‌ನ್ಯೂಸ್ ಉಡುಪಿ
ಉಡುಪಿ: ಆ ವೃದ್ಧೆ ದೇವಸ್ಥಾನಗಳ ಮುಂದೆ ಭಿಕ್ಷೆ ಬೇಡುತ್ತಿದ್ದರು. ದೇವರ ಹೆಸರಲ್ಲಿ ಭಿಕ್ಷೆ ಬೇಡುವ ಅಜ್ಜಿ ಸಂಗ್ರಹಿಸಿದ್ದ ಹಣವನ್ನು ದೇವಸ್ಥಾನಕ್ಕೆ ನೀಡಿದ್ದಾರೆ.
ದೇವಸ್ಥಾನಗಳ ಮುಂದೆ ಭಿಕ್ಷೆ ಬೇಡುತ್ತಿರುವ ವೃದ್ಧೆ ಹೆಸರು ಅಶ್ವತ್ಥಮ್ಮ, ಕರಾವಳಿಯ ಬಹುತೇಕ ದೇವಾಲಯಗಳ ಮುಂದೆ ಭಿಕ್ಷೆ ಬೇಡಿ ಹಣ ಕೂಡಿಡುತ್ತಿದ್ರು.
ಆದರೆ ಯಾವ ಧನಿಕನಿಗೂ ಇಲ್ಲದ ಹೃದಯ ಶ್ರೀಮಂತಿಕೆ, ಈ ವೃದ್ದೆಗೆ ಇದೆ ಎನ್ನುವುದು ಸಾಬಿತಾಗಿದೆ. ಇನ್ನು ಈ ವೃದ್ಧೆ ನೂರಲ್ಲ.. ಸಾವಿರವಲ್ಲ.ಬರೋಬ್ಬರಿ ಒಂದು ಲಕ್ಷ ರೂಪಾಯಿ ಸಾಲಿಗ್ರಾಮದ ದೇವರ ಸನ್ನಿಧಾನಕ್ಕೆ ದಾನ ನೀಡಿದ್ದಾರೆ,ಈ ವರೆಗೆ ವೃದ್ಧೆ ಅಶ್ವತ್ಥಮ್ಮ, 5 ಲಕ್ಷಕ್ಕೂ ಹೆಚ್ಚು ಅಧಿಕ ಹಣವನ್ನು ದಾನವಾಗಿ ನೀಡಿದ್ದಾರೆ.
ಕುಂಚುಗೋಡುವಿನಲ್ಲಿರುವ ದೇವಸ್ಥಾನಕ್ಕೆ 1.50 ಲಕ್ಷ, ಶಬರಿಮಲೆಯ ಪಂಪಾ ಕ್ಷೇತ್ರದಲ್ಲಿ 1 ಲಕ್ಷ ರೂ ವೆಚ್ಚದಲ್ಲಿ ಅನ್ನದಾನ ನಡೆಸಲಗಿದೆ. ಇತ್ತೀಚೆಗೆ ಜೀರ್ಣೋದ್ಧಾರಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೂ 1.50ಲಕ್ಷ ರೂ.ಗಳನ್ನು ಕಾಣಿಕೆ ನೀಡಿದ್ದು, ಗುರುವಾರ ಹ್ಮಾವರ ತಾಲೂಕಿನ ಸಾಲಿಗ್ರಾಮ ದೇವಸ್ಥಾನಕ್ಕೆ 1 ಲಕ್ಷ ರೂಪಾಯಿ ಅನ್ನದಾನದ ನಿಧಿಗೆ ನೀಡಿದ್ದಾರೆ.
ಇನ್ನು ವೃದ್ಧೆ ಅಶ್ವತ್ಥಮ್ಮ ಪತಿ ಹಾಗೂ ಪುತ್ರ ಮೃತಪಟ್ಟ ನಂತರ ಭಿಕ್ಷೆ ಬೇಡಲು ಅರಂಭಿಸಿದ್ದಾರೆ. ಈಕೆಗೆ ಆರು ಮಂದಿ ಮೊಮ್ಮಕ್ಕಳೂ ಇದ್ದಾರೆ. ದೇವರ ಹೆಸರಲ್ಲಿ ದುಡಿದ ಹಣವನ್ನು ದೇವರಿಗೇ ಸಂದಾಯ ಮಾಡುವ ಈ ವೃದ್ದೆಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಲ್ಲಿ ದೇವಸ್ಥಾನದ ಮುಂದೆ ದೇವರ ಹೆಸರಲ್ಲಿ ಭಿಕ್ಷೆ ಬೇಡಿದನ್ನು ಅನ್ನಸಂತರ್ಪಣೆಗೆ ದಾನ ನೀಡಿದ್ದು, ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ