ಈ ಬಾರಿ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ನೀರಿನ ಅಭಾವ ಎದುರಾಗಿದೆ. ತಮಿಳುನಾಡಿಗೆ ಕಾವೇರಿ ಹರಿ ಬಿಟ್ಟ ಪರಿಣಾಮ ಕೆಲ ಏರಿಯಾಗಳಲ್ಲಿ ಬೇಡಿಕೆಯಂತೆ ಕಾವೇರಿ ನೀರು ಕೂಡ ಸಲ್ಲೈ ಆಗುತ್ತಿಲ್ಲ. ಕೆಲವೆಡೆ ಈಗಾಗಲೇ ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಬಿಬಿಎಂಪಿ ಯಿಂದ ಕೊರೆಸಿದ ಬೋರ್ ವೆಲ್ ಗಳಲ್ಲಿನೀರು ಇದ್ದರು ಕೆಟ್ಟು ನಿಂತು ಹೋಗಿವೆ ಅವುಗಳನ್ನಾದರು ಪುನರ್ ಆರಂಭವಿಸುವಂತೆ ಆಗ್ರಹ ಕೇಳಿ ಬಂದಿದೆ.
ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆ ಹಿನ್ನಲೆ ಜಲ ಅಂತರಮಟ್ಟ ಕುಸಿತ ಕಂಡಿದೆ ಇದರಿಂದಾಗಿ ಬೋರ್‌ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಈಗಾಗಲೇ ಬಿಬಿಎಂಪಿ ಯಿಂದ ಕೊರೆಸಿದಂತಹ ಅದೆಷ್ಟೋ ಬೊರ್‌ವೆಲ್ ಗಳಲ್ಲಿ ನೀರು ಕಡಿಮೆಯಾದರೆ ಕೆಲ ಬೊರ್‌ವೆಲ್‌ಗಳಲ್ಲಿ ನೀರು ಕೂಡ ಬರದೇ ಬತ್ತಿ ಹೋಗಿವೆ. ಇತ್ತ ಸ್ವಂತ ಮನೆಗಳಲ್ಲೂ ಕೊರೆಸಿದ್ದ ಬೊರ್‌ವೆಲ್ ಗಳಲ್ಲೂ ನೀರಿನ ಪ್ರಮಾಣದಲ್ಲೂ ಇಳಿಮುಖವಾಗಿದೆ. ಈ ಹಿಂದೆ ಬೊರ್ ವೆಲ್ ಗಳಲ್ಲಿ ಸಾಕಷ್ಟು ನೀರು ಬರುತ್ತಿತ್ತು ಇದೀಗ ಮೊದಲಿನ ಹಾಗೆ ನೀರು ಬರುತ್ತಿಲ್ಲ ಈಗ ಮಳೆಗಾಲ ಕೂಡ ಮುಗಿಯುತ್ತ ಬಂದಿದ್ದು ಬೇಸಿಗೆ ಆರಂಭ ಕಾಲಕ್ಕೂ ಮುನ್ನವೇ ನೀರಿನ ಕೊರತೆ ಉಂಟಾಗುತ್ತಿದೆ. ಹೀಗಾಗಿ ಕಾವೇರಿ ನೀರು ಬೇಕು ಅಂತ ಬೆಂಗಳೂರು ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಇನ್ನೊಂದೆಡೆ ಬಿಬಿಎಂಪಿಯಿಂದ ಕೊರೆಸಲಾದ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಜನರು ಒಂದು ಟ್ಯಾಂಕರ್ ನೀರಿಗೆ 400 ರಿಂದ 500 ಹಾಗೂ 600 ರೂಪಾಯಿ ವರೆಗೆ ಅನಿವಾರ್ಯವಾಗಿ ಹಣ ಕೊಟ್ಟು ನೀರು ಪಡೆಯಬೇಕಾದ ಪರಸ್ಥಿತಿ ಎದುರಾಗಿದ್ದು, ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಹರಿಸಿಲ್ಲ ಅಂತ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ವಾಡಿಕೆಗಿಂತ ಮಳೆಯ ಪ್ರಮಾಣದಲ್ಲಿ ಕಡಿಮೆಯಾದ್ದರಿಂದ ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಅಭಾವ ಎದುರಾಗಿದೆ. ಇನ್ನಷ್ಟು ನೀರಿಗಾಗಿ ಹಾಹಾಕಾರ ಉಂಟಾಗುವ ಮೊದಲು ಸಾರ್ವಜನಿಕರ ಆಗ್ರಹದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ವರದಿ: ವರ್ಷಿತ ತಾಕೇರಿ