ಬೆಂಗಳೂರು : ಶ್ರೀರಾಮಚಂದ್ರನ ರಾಜಕೀಯ ವಿಷಯವಾನ್ನಾಗಿ ಮಾಡಿಕೊಂಡಿದ್ದಾರೆ ಅದನ್ನ ನಾವು ವಿರೋಧ ಮಾಡ್ತಿದ್ದೇವೆ ಅಷ್ಟೇ ನಾವೆಲ್ಲ ಶ್ರೀರಾಮಚಂದ್ರನ ಭಕ್ತರೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮಂದಿರ ಉದ್ಘಾಟನೆಗೆ ಎಐಸಿಸಿ ತಿರಸ್ಕಾರ ಅದಕ್ಕೆ ಬೆಂಬಲ ನಿಡಿದ ಸಿಎಂ ಸಿದ್ದರಾಮಯ್ಯ ಮಾತನಾಡಿ ನಾವು ಶ್ರೀರಾಮ ಚಂದ್ರನ ವಿರುದ್ಧವಾಗಿಲ್ಲ. ಬಿಜೆಪಿಯವರು ರಾಜಕೀಯ ಮಾಡೋಕೆ ಹೊರಟಿದ್ದಾರೆ.
ಅದನ್ನ ಒಂದು ದೊಡ್ಡ ರಾಜಕೀಯ ವಿಷಯವನ್ನಾಗಿ ಮಾಡಿಕೊಂಡು. ಕೇಂದ್ರ ಸಚಿವರುಗಳು ರಾಜಕೀಯ ಮಾತನಾಡ್ತಿದ್ದಾರೆ ಅಷ್ಟೇ. ರಾಜಕೀಯ ಮಾತನಾಡೋರಿಗೆ ಔಷಧವಿಲ್ಲ. ನಾವು ಶ್ರೀರಾಮಚಂದ್ರನ ವಿರುದ್ಧ ವಿಲ್ಲ.
ಶ್ರೀರಾಮಚಂದ್ರನನ್ನ ನಾವು ಗೌರವಿಸುತ್ತೇವೆ, ಪೂಜೆ ಮಾಡ್ತೀವಿ, ಭಜನೆ ಮಾಡ್ತೀವಿ, ರಾಮಮಂದಿರ ಕಟ್ಟಿದ್ದೇವೆ ನಾವು. ರಾಮಮಂದಿರಕ್ಕೆ ನಮ್ಮದು ವಿರೋಧವಿಲ್ಲ. ರಾಜಕೀಯ ಮಾಡ್ತಿದ್ದಾರೆ ಅದಕ್ಕೆ ನಮ್ಮ ವಿರೋಧ ಎಂದರು.
ಇನ್ನೂ ರಾಜ್ಯ ಸರ್ಕಾರದಿಂದ 22 ರಂದು ಎಲ್ಲಾ ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿರುವ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿ ಮುಜರಾಯಿ ಇಲಾಖೆಯ ಆದೇಶವೇ ಗೊತ್ತಿಲ್ಲ ಎಂದ ಸಿಎಂ. ಆ ಹೇಳಿಕೆ ನಾನು ಹೇಳಿಲ್ಲ ಎಂದರು.
ಬಿಎಸ್‌ವೈ ಆರೋಪ ವಿಚಾರವಾಗಿ ಮಾತನಾಡಿ ಈಗ ಯಾಕೆ ಇವರು ಅಯೋಧ್ಯೆಗೆ ಹೊಗ್ತಿದ್ದಾರೆ ಶ್ರೀರಾಮಚಂದ್ರ ಇಲ್ಲಿ ಇಲ್ವಾ..? ಇಲ್ಲೂ ಪೂಜೆ ಮಾಡ್ತಿದ್ದಾರೆ ಅಷ್ಟೇ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ