ಮುಂದಿನ ದಿನಗಳಲ್ಲಿ ನೀರಿನ ಉಲ್ಬಣವಾಗಲಿದೆ. 6097 ಗ್ರಾಮಗಳಲ್ಲಿ ನೀರಿನ ಕೊರತೆ ಆಗಬಹುದು ಈ ಹಿನ್ನಲೆ ಮುಂಜಾಗ್ರತೆಯಿಂದ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.ವಿಕಾಸೌಧದಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿದ ಅವರು ಡಿಸಿ,ಸರ್ವೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬರಗಾಲದ ವಿಚಾರಗಳ ಚರ್ಚೆಯಾಗಿದೆ. 36 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ. ಟ್ಯಾಂಕರ್ ಮೂಲಕ ನೀರು ಕೊಡ್ತಿದ್ದೇವೆ. 139 ಗ್ರಾಮಗಳಲ್ಲಿ ಬೋರ್ ವೆಲ್ ನೀರು ಪೂರೈಕೆ ಮಾಡಿದ್ದೇವೆ. ಖಾಸಗಿ ಬೋರ್ ವೆಲ್ ಪಡೆದು ನೀರು ಕೊಡ್ತಿದ್ದೇವೆ. 56 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ನೀರಿನ ಉಲ್ಬಣವಾಗಲಿದೆ. ೬೦೯೭ ಗ್ರಾಮಗಳಲ್ಲಿ ನೀರಿನ ಕೊರತೆ ಆಗಬಹುದು. ಮುಂಜಾಗ್ರತೆಯಿಂದ ಕ್ರಮಕ್ಕೆ ಮುಂದಾಗಿದ್ದೇವೆ. 1186 ವಾರ್ಡ್ ಗಳಲ್ಲಿ ನೀರಿನ ಪ್ರಾಬ್ಲಂ ಆಗಬಹುದು. 6052 ಗ್ರಾಮಗಳಲ್ಲಿ ಬೋರ್ ವೆಲ್ ಗುರ್ತಿಸಿದ್ದೇವೆ.
ಖಾಸಗಿಯವರ ಬೋರ್ ವೆಲ್ ಗುರ್ತಿಸಿದ್ದೇವೆ. ಇವುಗಳಿಂದ ನೀರು ಸರಬರಾಜು ಮಾಡ್ತೇವೆ. ೨೪೦೪ ಬೋರ್ ವೆಲ್ ಗೆ ಅಗ್ರಿಮೆಂಟ್ ಮಾಡಿಕೊಂಡಿದ್ದೇವೆ. ೨೫೦ ಸಭೆಗಳನ್ನ ನಾವು ಮಾಡಿದ್ದೇವೆ ಬರಗಾಲಕ್ಕೆ ಸಂಬಂಧಿಸಿದಂತೆ. ೩೪೪ ಟಾಸ್ಕ್ ಪೋರ್ಸ್ ಸಭೆ ನಡೆದಿವೆ. ಮೇವಿನ ಕೊರತೆ ಕೂಡ ಬರಬಹುದು. ೭ ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಕೊಟ್ಟಿದ್ದೇವೆ. ರೈತರಿಗೆ ಉಚಿತವಾಗಿ ನೀಡಿದ್ದೇವೆ. ಫೆಬ್ರವರಿಯಲ್ಲಿ ಮತ್ತೊಮ್ಮೆ ಬೀಜದ ಕಿಟ್ ಕೊಡ್ತೇವೆ. ಚಿತ್ರದುರ್ಗದಲ್ಲಿ ಮೇವಿನ ಕೊರತೆ ಎದುರಾಗಿದೆ. ೧೯ ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ಮುಗಿದಿದೆ. ಕೆಲವು ಕಡೆ ಟೆಂಡರ್ ಗಳು ನಡೆದಿವೆ
ಜಲಾಶಯಗಳಲ್ಲಿನ ನೀರಿನ ಮಟ್ಟದಲ್ಲಿ ನೋಡೊದಾದ್ರೆ ಎಲ್ಲಾ ಜಲಾಶಯಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲಾ..ಆದರೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇದೆ. ಜಲಸಂಪನ್ಮೂಲ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇವೆ. ಬೇರೆ ಜಲಾಶಯಗಳಲ್ಲಿ ಅಗತ್ಯವಾದಷ್ಟು ನೀರಿದೆ ಎಂದು ಹೇಳಿದರು. ಇನ್ನೂ ರೈತರ ಪರಿಹಾರ ಕೊಡುವ ವಿಚಾರವಾಗಿ ಮಾತನಾಡಿ ಕೇಂದ್ರದ ಅಧಿಕಾರಿಗಳು ಬಂದು ಹೋಗಿದ್ದಾರೆ. ನಾವು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಹೈಲೆವೆಲ್ ಕಮಿಟಿಗೆ ಕಳುಹಿಸಿ ಕೊಟ್ಟಿದ್ದಾರೆ. ಸಭೆ ಮಾಡ್ತೇವೆಂದು ಪಿಎಂ,ಅಮಿತ್ ಶಾ ಹೇಳಿದ್ದರು.ಆದರೆ ಇಲ್ಲಿಯವರೆಗೆ ಮೀಟಿಂಗ್ ಆಗಿಲ್ಲ. ಒಂದು ವಾರದೊಳಗೆ ಮೀಟಿಂಗ್ ಆಗಬಹುದು. ಮೀಟಿಂಗ್ ಆದರೆ ಪರಿಹಾರ ಬಿಡುಗಡೆಯಾಗಬಹುದು. ನಾವು ಮೊದಲ ಕಂತು ೨೦೦೦ ಕೊಡಬೇಕು. ರೈತರಿಗೆ ಕಳೆದವಾರದಿಂದ ಹಣೆ ಜಮೆಯಾಗ್ತಿದೆ. ಬರುವ ವಾರದಲ್ಲಿ ೩೦ ಲಕ್ಷ ರೈತರಿಗೆ ಹಣ ತಲುಪಲಿದೆ ಎಂದು ಹೇಳಿದರು.
ವರದಿ : ಬಸವರಾಜ ಹೂಗಾರ