ಬೆಂಗಳೂರು : ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಳ ಮಾಡುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಒಂದು ತಿಂಗಳಿನಿಂದ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿದ್ದು, ಕರ್ನಾಟಕದಲ್ಲೂ ಕೋವಿಡ್ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದರು.
ಕೋವಿಡ್ ಸೇರಿ ಯಾವುದೇ ವೈರಾಣು ಜ್ವರದ ಲಕ್ಷಣಗಳಿದ್ದರೂ ತಪಾಸಣೆಗೆ ಒಳಪಡಿಸುವಂತೆ ಸೂಚಿ ಸಿದ್ದು, ಹೆಚ್ಚುವರಿ ಆರ್‌ಟಿಪಿಸಿಆರ್(RTPCR) ಕಿಟ್‌ಗಳ ಖರೀದಿಗೂ ಆದೇಶಿಸಲಾಗಿದೆ ಎಂದರು.
ಕೇರಳದಲ್ಲಿ ಕೋವಿಡ್ ಉಪತಳಿ ಪ್ರಕರಣ ದಿನೇದಿನೆ ಹೆಚ್ಚುತ್ತಿದೆ. ರಾಜ್ಯ ದಲ್ಲೂ 58 ಸಕ್ರಿಯ ಪ್ರಕರಣಗಳಿವೆ. 47 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. 11 ಮಂದಿ ಆಸ್ಪತ್ರೆಯಲ್ಲಿದ್ದು, ಈ ಪೈಕಿ 5 ಮಂದಿ ಜನರಲ್ ವಾರ್ಡ್‌ನಲ್ಲಿ ಹಾಗೂ 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ 64 ವರ್ಷದ ಒಬ್ಬರು ಕೋವಿಡ್ ಮತ್ತು ಬಹುಸಹವರ್ತಿ ಕಾಯಿಲೆಗಳಿಂದ ಬೆಂಗಳೂರಿನಲ್ಲಿ ಮೃತ ಪಟ್ಟಿರುವ ವರದಿಯಾಗಿದೆ. 2 ತಿಂಗಳಿಂದೀಚೆಗೆ ಸಾವು ಸಂಭವಿಸಿಲ್ಲ. ಆದರೆ ಸಾಂಕ್ರಾಮಿಕ ಕಾಯಿಲೆಗಳು ಅದರಲ್ಲೂ ಐಎಲ್‌ಐ, ಸಾರಿಯಂತಹ ವೈರಾಣು ಜ್ವರ ಕಾಣಿಸಿಕೊಳ್ಳುತ್ತಿದ್ದು, ಅಂಥವರಿಗೂ ಕೋವಿಡ್ ಪರೀಕ್ಷೆ ಮಾಡುತ್ತೇವೆ. ಪ್ರಮುಖ ವಾಗಿ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿ ಎಲ್ಲ ಎಸ್‌ಎಆರ್‌ಐ (ಸಾರಿ) ಪ್ರಕರಣ ಹಾಗೂ 20ರಲ್ಲಿ 1 ಐಎಲ್‌ಐ ಪ್ರಕರಣ ಗಳನ್ನು ಪರೀಕ್ಷೆಗೆ ಒಳಪಡಿಸಲು ಸೂಚಿಸಿದೆ.
ಪರೀಕ್ಷೆ, ಚಿಕಿತ್ಸಾ ಪರಿಕರಗಳಲಭ್ಯತೆ ಖಚಿತಪಡಿಸಿಕೊಳ್ಳಿ ನಮ್ಮಲ್ಲಿ 30 ಸಾವಿರ ಆರ್‌ಟಿಪಿಸಿಆರ್(RTPCR) ಕಿಟ್‌ಗಳಿದ್ದು, 1 ತಿಂಗಳಿಗೆ ಕನಿಷ್ಠ 3 ಲಕ್ಷ ಕಿಟ್ ಅಗತ್ಯವಿದೆ. ಇದಕ್ಕಾಗಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಡಿ.14 ರಿಂದ 18ರ ವರೆಗೆ ಮಾಕ್‌ಡ್ರಿಲ್ ನಡೆಸಲು ಸೂಚಿಸಲಾಗಿದೆ. ಡಿ.19ರಂದು ಎಲ್ಲದರ ವಿವರ ಸಲ್ಲಿಸಲು ನಿರ್ದೇಶನ ನೀಡಿದರು.