ರಾಮನಗರ: ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳಿಗೆ , ಜನಸಾಮಾನ್ಯರಿಗೆ ರಕ್ಷಣೆಯೇ ಇಲ್ಲದಂತೆ ಆಗಿದೆ. ರಾಜ್ಯದ ಹಿರಿಯ ಅಧಿಕಾರಿನ್ನು ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾರೆ ಅಂದರೆ ಇವರ ಉದ್ಧಟತನ ಎಷ್ಟಿದೆ ಅಂತ ತಿಳಿಯುತ್ತಿದೆ. ಇಂತಹ ಘಟನೆಗೆ ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ಇಂತಹ ವಾತಾವರಣ ನಿರ್ಮಾಣ ಆದರೆ ಯಾವ ಅಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ? ಸಮಾಜಘಾತುಕ ಶಕ್ತಿಗಳಿಗೆ ಯಾವುದೇ ಲಂಗುಲಗಾಮು ಇಲ್ಲದಂತಾಗಿದೆ. ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.
ಸರ್ಕಾರವೇ ವರ್ಗಾವಣೆ ಮಾಡಿ ಹಣ ವಸೂಲಿ ಮಾಡುತ್ತಾ ನಿಂತಿದ್ದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರಾ? ಸರ್ಕಾರದ ನಡೆಯಿಂದಲೇ ಇಂತಹ ಘಟನೆ ಜರುಗುತ್ತಿದೆ.