ಬೆಂಗಳೂರು: ಕಾವೇರಿ ನೀರು ಬಿಡದಂತೆ ರೈತ ಸಂಘಟನೆಗಳಿಂದ ಹೋರಾಟ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂಘಟನೆಗಳು ತಮಿಳುನಾಡಿಗೆ ನೀರು ಬಿಡದಂತೆ ಹೋರಾಟ ನಡೆಸ್ತಿವೆ, ಧನ್ಯವಾದಗಳು. ಆದರೆ ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ವು?ಆಗ ಯಾಕೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕು ಅಂತ ಕೇಂದ್ರಕ್ಕೆ ಕೇಳಲಿಲ್ಲ?ಬಿಜೆಪಿ, ಜೆಡಿಎಸ್ ಪಕ್ಷದವರೂ ಕೇಂದ್ರಕ್ಕೆ ಮೇಕೆದಾಟು ಯೋಜನೆಗೆ ಅನುಮತಿ ಗೆ ಯಾಕೆ ಕೇಳ್ತಿಲ್ಲ?ಹೋರಾಟಗಾರರು ಕೇಂದ್ರಕ್ಕೆ ಅನುಮತಿ ಕೊಡಿ ಅಂತ ಕೇಳಲಿ. ನಾವು ನಮ್ಮ ರೈತರ ಹಿತ ಕಾಪಾಡಲು ಬದ್ಧವಾಗಿದ್ದೀವಿ ಎಂದರು.
ತಮಿಳುನಾಡು ಸರ್ಕಾರ 20 ಸಾವಿರ ಕ್ಯೂಸೆಕ್ಸ್ ನೀರಿಗೆ ಆಗ್ರಹಿಸಿತ್ತು. ನಾವು ಆಗಲ್ಲ ಅಂದ್ವಿ, ಸುಪ್ರೀಂಕೋರ್ಟ್ ಆದೇಶದ ಮೇರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸ್ತಿದೀವಿ. ಸುಪ್ರೀಂಕೋರ್ಟ್ ನಲ್ಲಿ ನಮ್ಮ ವಕೀಲರು ಉತ್ತಮ ವಾದ ಮಾಡ್ತಿದ್ದಾರೆ. ನಾನೂ ಕೂಡಾ ದೆಹಲಿಗೆ ಹೋಗಿ ವಕೀಲರ ಜತೆ ಮಾತಾಡಿದ್ದೇನೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯಕ್ಕೆ ಬಂದು ವಸ್ತುಸ್ಥಿತಿಯ ಅಧ್ಯಯನ ನಡೆಸುವಂತೆ ಕೇಳಿದ್ದೇವೆ.ಸುಪ್ರೀಂಕೋರ್ಟ್ ನಲ್ಲೂ ಮೇಲ್ಮನವಿ ಸಲ್ಲಿಸಿ, ನೀರು ಬಿಡಲು ಆಗಲ್ಲ ಅಂತ ಮನವಿ ಮಾಡಲಾಗಿದೆ ಎಂದರು.
ಇನ್ನು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದರ ಬಗ್ಗೆ ತಮಿಳು ಸರ್ಕಾರವೇ ಸ್ಪಷ್ಟನೆ ಕೊಡುತ್ತೆ ಎಂದು ಹೇಳಿದ್ದರೆ.
ಕಾಂಗ್ರೆಸ್ನಿಂದ ಬ್ಲಾಕ್ಮೇಲ್ ಎಂಬ ಅಶ್ವಥ್ ನಾರಾಯಣ ಆರೋಪ ವಿಚಾರವಾಗಿ ಮಾತನಾಡಿ, ಅಶ್ವಥ್ ನಾರಾಯಣಗೆ ಡಿಕೆಶಿ ಕಾಲೆಳೆದಿದ್ದಾರೆ. ಓ…ಬ್ಲಾಕ್ಮೇಲ್ ಅಂತ ಅಂದಿದಾರಾ? ಇದು ನವರಂಗಿ ನಾರಾಯಣನ ಮಾತು.ನವರಂಗಿ ನಾರಾಯಣನಿಗೆ ನಮ್ಮ ಎಂ ಬಿ ಪಾಟೀಲ್ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.