ಚಿಕ್ಕಮಗಳೂರು : 30 ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್ ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ ಬಿಟ್ಟಿದೆ. ಹೀಗಾಗಿ ವಸತಿ ಶಾಲೆಯಲ್ಲಿರುವ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು ಆತಂಕಗೊಂಡಿದ್ದರು.
ಇದೀಗ ಶಾಲೆಯ ಆವರಣದಲ್ಲಿ ಬೀಡುಬಿಟ್ಟಿದ್ದ 30 ಕಾಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಓಡಿಸಲಾಗಿದ್ದು, ಶಾಲಾ ಆವರಣದಿಂದ ಕಾಡಾನೆ ಹಿಂಡು ಹೊರಬಂದಿದೆ.
ಆವರಣದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಪಟಾಕಿ ಸಿಡಿಸಿ ಸಿಬ್ಬಂದಿಗಳು ಓಡಿಸುತ್ತಿದ್ದಾರೆ. ಈ ಹಿನ್ನಲೆ ಕಾಡಾನೆ ಸಂಚಾರ ಮಾಡುವ ರಸ್ತೆಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಇದೀಗ ಕಾಡಾನೆ ಹಿಂಡು ಕದ್ರಿಮಿದ್ರಿ ಗ್ರಾಮದ ಕಡೆ ಸಂಚಾರ ಮಾಡುತ್ತಿದ್ದು, 9 ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಹೆಚ್ಚಿದೆ ಹೀಗಾಗಿ ಗ್ರಾಹಕರು ಮತ್ತು ಸವಾರರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.