ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆಗಿದೆ.ಅದನ್ನ ಇಡೀ ರಾಜ್ಯದ ಜನ ನೋಡ್ತಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಅವರು. ಹಿಂದೆ ವಿಪಕ್ಷ ನಾಯಕರಾಗಿದ್ದಾಗ ಎಲ್ಲಾ ಸಿಎಂ ಕುಟುಂಬದ ಮೇಲೆ ಆರೋಪ ಮಾಡಿದ್ರು ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಬೊಮ್ಮಾಯಿ, ಹಿಂದೆ ಕುಮಾರಸ್ವಾಮಿ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ.ಅವರ ಮಕ್ಕಳೆಲ್ಲಾ ಸೇರಿ ಅಧಿಕಾರ ದುರುಪಯೋಗ ಮಾಡ್ತಿದ್ದಾರೆ ಅಂತ ಹೇಳಿದ್ರು.ಈಗ ಯತೀಂದ್ರ ಸಿದ್ದರಾಮಯ್ಯ ವೀಡಿಯೋ ಬಿಡುಗಡೆ ಆದ ಮೇಲೆ ಏನು ಹೇಳ್ತಿದ್ದಾರೆ.ಇದು ಅಪ್ಪಟ ಸುಳ್ಳು.ಸಿದ್ದರಾಮಯ್ಯ ಹಿಂದೆ ಈ ಪರೀ ಸುಳ್ಳುಗಾರ ಆಗಿರಲಿಲ್ಲ.ಕಾಂಗ್ರೆಸ್‌ಗೆ ಸೇರಿದ ಮೇಲೆ ಬಹಳ ಬದಲಾವಣೆ ಆಗಿದೆ.ಟ್ರಾನ್ಸ್‌ಫರ್ ದಂಧೆ ಮಾಡಿಲ್ಲ.ಅದನ್ನ ಪ್ರೂವ್ ಮಾಡಿದ್ರೆ ರಾಜಕೀಯದಿಂದ ನಿವೃತ್ತಿ ಆಗ್ತೀನಿ ಅಂತ.ಯತೀಂದ್ರ ಸಿದ್ದರಾಮಯ್ಯ ಟ್ರಾನ್ಸ್‌ಫರ್ ಅಲ್ಲ, ಶಾಲೆ ವಿಚಾರವಾಗಿ ಚರ್ಚೆ ಮಾಡಿದ್ರು ಅಂತ.ನಾನು ಕೇಳ್ತೀನಿ ವಿವೇಕಾನಂದ ಅಂದ್ರೆ ಯಾರು.? ಎಂದು ಪ್ರಶ್ನೆ ಮಾಡಿದ್ದಾರೆ.
ಮಹದೇವಗೆ ಫೋನ್ ಮಾಡಿ ನಾನು ಹೇಳಿದ್ದು ಯಾಕೆ ಮಾಡಲಿಲ್ಲ ಅಂತ ಕೇಳಿದ್ದಾರೆ.ಇದನ್ನ ಪ್ರೂವ್ ಮಾಡೋದಾದ್ರೆ ಅಂದ್ರೆ, ಇದಕ್ಕಿಂತ ಸಾಕ್ಷಿ ಬೇಕಾ.?ಶಾಲೆಗಳನ್ನ ಜೀರ್ಣೋದ್ಧಾರ ಮಾಡೋದ್ರೆ ಹೀಗೆ ಯಾಕೆ ಹೇಳಬೇಕಿತ್ತು.ಯತೀಂದ್ರ ಅವರು ನಿಮ್ಮನ್ನ, ಸೆಕ್ರೆಟರಿ ಮಹದೇವ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.ನಿಮ್ಮಆಡಳಿತ ಅವಧಿಯಲ್ಲಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.ಅವರು ಜನರಲ್ ಅಟಾರ್ನಿ ಆಗಿದ್ದು, ನಿಮ್ಮ ಎಲ್ಲಾ ನಿರ್ಧಾರ ಅವರು ತೆಗೆದುಕೊಳ್ತಿದ್ದಾರೆ.ನೀವು ಪ್ರಮಾಣ ಮಾಡಿರೋ ವ್ಯತಿರಿಕ್ತವಾಗಿ ನಡೆದುಕೊಳ್ತಿದ್ದಾರೆ.ಇಪ್ಪತ್ತು ವರ್ಷದ ಹಳೆಯ ಸಿದ್ದರಾಮಯ್ಯ ಆದ್ರೆ ಕೂಡಲೇ ರಾಜೀನಾಮೆ ಕೊಡ್ತಾರೆ.ಹೊಸ ಸಿದ್ದರಾಮಯ್ಯ ಆದ್ರೆ ಇದೇ ಹಠಮಾರಿತನ ತೋರ್ತಾರೆ.ಕೂಡಲೇ ರಾಜೀನಾಮೆ ಕೊಡುವಂತೆ ಆಗ್ರಹಿಸಿದ್ದಾರೆ.