ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಮಂಡ್ಯ ( MANDYA )ದಲ್ಲಿ ಇಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಶುರುವಾಗಿದ್ದು, ನಗರದ ಸಂಜಯ್ ವೃತ್ತದಲ್ಲಿ ಹೆದ್ದಾರಿ ತಡೆಯಲಾಗಿದೆ.
ಬೆಂಗಳೂರು – ಮೈಸೂರು ಹೆದ್ದಾರಿ ತಡೆದು, ಹೆದ್ದಾರಿಯಲ್ಲಿ ಕಬ್ಬು ತುಂಬಿದ ಟ್ರ್ಯಾಕರ್ ನಿಲ್ಲಿಸಿ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಡಿಸಿ ಕಚೇರಿಗೆ ರೈತರು ಮುತ್ತಿಗೆ ಹಾಕಲಿದ್ದಾರೆ. ಡಿಸಿ ಕಚೇರಿಗೆ ರೈತರ ಮುತ್ತಿಗೆ ಹಿನ್ನಲೆ ಡಿಸಿ ಕಚೇರಿಗೆ ಬ್ಯಾರಿಕೇಡ್ ಭದ್ರತೆ ಮಾಡಲಾಗಿದೆ. ರೈತರ ಪ್ರತಿಭಟನಾ ಮೆರವಣಿಗೆ ಹಿನ್ನಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರೈತರ ಪ್ರತಿಭಟನೆಯಿಂದಾಗಿ ಮೈ- ಬೆಂ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿದೆ.
ಇನ್ನು ಮತ್ತೊಂದೆಡೆ ಕಬ್ಬಿಗೆ ಸೂಕ್ತ ಬೆಲೆ ನಿರ್ಣಯಕ್ಕಾಗಿ ಕರೆದ ಸಂಧಾನ ಸಭೆ ವಿಫಲ ಹಿನ್ನೆಲೆ ಬಾಗಲಕೋಟೆ ( BAGALAKOTE ) ಜಿಲ್ಲೆ ಮುಧೋಳ ನಗರ ಕೂಡ ಬಂದ್ ಮಾಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘದಿಂದ ಬಂದ್ ಕರೆ ನೀಡಲಾಗಿದೆ. ಶಾಲಾ ವಾಹನ, ಹಾಲಿನ ವಾಹನ,ಆಂಬುಲೆನ್ಸ್ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ : – ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದ ಅಮಿತಾಭ್ ಬಚ್ಚನ್
ಕಬ್ಬಿಗೆ ಸೂಕ್ತ ಬೆಲೆಗಾಗಿ ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಬಾಗಲಕೋಟೆ ಉಸ್ತುವಾರಿ ಸಚಿವ ಸಿಸಿ ಪಾಟೀಲ್ , ಸಚಿವ ಕಾರಜೋಳ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಟನ್ ಗೆ 2,900 ಬೆಲೆ ಕೇಳಿದ್ದ ರೈತರು. 2,800 ಮಾತ್ರ ಕೊಡೋದಾಗಿ ಕಾರ್ಖಾನೆ ಆಡಳಿತ ಮಂಡಳಿ ಪಟ್ಟು ಹಿಡಿದಿತ್ತು. ವಿಫಲವಾದ ಸಂಧಾನ ಸಭೆ ಹಿನ್ನೆಲೆ ಮುಧೋಳ ಬಂದ್ ಮಾಡಲಾಗಿದೆ. ಮುಧೋಳ ಬಂದ್ ಕರೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ 3 ಡಿ.ವೈ.ಎಸ್ಪಿ, 11 ಸಿಪಿಐ, 30 ಪಿಎಸ್ ಐ, 76 ಎಎಸ್ ಐ, 626 ಕಾನ್ಸ್ಟೇಬಲ್, 10 ಡಿಎಆರ್ ತುಕಡಿ, 4 ಕೆ.ಎಸ್.ಆರ್.ಪಿ ತುಕಡಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ : – ಬೆಂಗಳೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ವಿಶೇಷ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ