ಬಳ್ಳಾರಿ (BELLARI) ಕ್ಷೇತ್ರದಿಂದ ನನ್ನ ಪತ್ನಿ ಅರುಣಾಲಕ್ಷ್ಮೀಯನ್ನು ಅಭ್ಯರ್ಥಿ ಅಂತ ಘೋಷಣೆ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (JANRDHAN REDDY) ಹೇಳಿದ್ದಾರೆ.
ಈ ಮೂಲಕ ಸಹೋದರ ಬಿಜೆಪಿ ಶಾಸಕ ಜಿ. ಸೋಮಶೇಖರ್ ರೆಡ್ಡಿ (SOMSHEKHAR REDDY) ವಿರುದ್ಧ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ಪತ್ನಿಯನ್ನು ಕಣಕ್ಕೆ ಇಳಿಸಿದ್ದಾರೆ. ತನ್ನ ಸ್ವಂತ ಪಾರ್ಟಿ ಮೂಲಕ ಸಹೋದರನಿಗೆ ರೆಡ್ಡಿ ಸವಾಲ್ ಹಾಕಿದ್ದಾರೆ. ಜನಾರ್ಧನ ರೆಡ್ಡಿ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಕಲ್ಯಾಣರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಹನುಮ ಹುಟ್ಟಿದ ಅಂಜನಾದ್ರಿ ನಾಡಿದು. ಇದನ್ನು ಓದಿ :- ರಾಜ್ಯದಲ್ಲಿ ನೂರಕ್ಕೆ ನೂರರಷ್ಪು ಬಿಜೆಪಿ ಅಧಿಕಾರಕ್ಕೆ ಬರುತ್ತದೆ – ಬಿ.ಎಸ್ ಯಡಿಯೂರಪ್ಪ
ಅಂಜನಾದ್ರಿ ಅಭಿವೃದ್ಧಿಗೆ 5 ಸಾವಿರ ಕೋಟಿ ಯೋಜನೆ ಸಿದ್ದಪಡಿಸಿದ್ದೆನೆ. ಇಡೀ ಜಗತ್ತೆ ನಮ್ಮ ಕಡೆ ನೋಡಬೇಕು ಹಾಗೇ ಮಾಡುತ್ತೇನೆ. ಗಂಗಾವತಿಯಲ್ಲಿ 200 ಬೆಡ್ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ. ಸ್ಲಂ ಇಲ್ಲದ ರೀತಿಯಾಗಿ ಗಂಗಾವತಿಯನ್ನು ನಿರ್ಮಾಣ ಮಾಡುತ್ತೇನೆ. ರಾಜ್ಯದ 10-15 ಜಿಲ್ಲೆಗಳ ಜನರು ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದು ಜನಾರ್ದನ್ ರೆಡ್ಡಿ ಹೇಳಿದರು.
ಇದನ್ನು ಓದಿ :- ಸಂಸತ್ ನಲ್ಲಿ ದ್ರೌಪದಿ ಮುರ್ಮು ಚೊಚ್ಚಲ ಭಾಷಣ- ಕೇಂದ್ರದ ಸಾಧನೆ ಕೊಂಡಾಡಿದ ರಾಷ್ಟ್ರಪತಿ.