ಬಳ್ಳಾರಿಯ ಕಂಪ್ಲಿಯಲ್ಲಿ ಅಕ್ರಮ ಅಕ್ಕಿ ಸಂಗ್ರಹದ ಮೇಲೆ ಶಾಸಕ ಜೆ.ಎನ್ ಗಣೇಶ್ ದಾಳಿ ನಡೆಸಿದ್ದಾರೆ. ಕೋಳಿ ಫಾರಂ ಒಳಗೆ ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕೋ ಕೆಲಸ ನಡೆಯುತ್ತಿದ್ದು, ದಿನಕ್ಕೆ ಎರಡು ಲಾರಿ ಲೋಡ್ ಅಕ್ಕಿಯನ್ನು ಕಂಪ್ಲಿಯಿಂದ ತಮಿಳುನಾಡು ಗುಜರಾತ್ ಕಡೆ ಸಾಗಣೆ ಮಾಡಲಾಗುತ್ತಿದೆ.
ದಾಳಿ ಮಾಡ್ತಿದ್ದಂತೆ ಸ್ಥಳದಿಂದ ಕಿಂಗ್ ಪಿನ್ ಗಳು ಓಡಿ ಹೋಗಿದ್ದಾರೆ. ಅಕ್ಕಿ ಅನ್ ಲೋಡ್ ಮಾಡುವ ಅನ್ಯ ರಾಜ್ಯಗಳ ನಾಲ್ಕು ಯುವಕರು ಸೆರೆಯಾಗಿದ್ದಾರೆ. ಕನ್ನಡ ಭಾಷೆ ಬಾರದ ಹೊರ ರಾಜ್ಯದ ಯುವಕರನ್ನಿಟ್ಟು ಅಕ್ಕಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು. ಇದರ ಹಿಂದೆ ಪ್ರಭಾವಿ ನಾಯಕರು ಇರೋ ಶಂಕೆ ವ್ಯಕ್ತವಾಗಿದೆ.
ಆದರೆ ಇಲ್ಲಿ ಕೆಲಸ ಮಾಡೋರಿಗೆ ಮಾಲೀಕರು ಯಾರು ಅನ್ನೋದೇ ಗೊತ್ತಿಲ್ಲ. ದಾಳಿ ಮಾಡಿದ ಬಳಿಕ ಬಂದ ಪೊಲೀಸರು ಸಾವಿರಾರು ಚೀಲ ಅಕ್ಕಿ, ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಎಲ್ಲವನ್ನೂ ವಶಕ್ಕೆ ಪಡೆದಿದ್ದಾರೆ.