ಬಳ್ಳಾರಿ ( BALLARI ) ಯಲ್ಲಿರುವ ವಿಮ್ಸ್ ( VIMS ) ಆಸ್ಪತ್ರೆಯಲ್ಲಿದ್ದ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಬಂದ್ ಆಗಿದೆ. ಅಗ್ರಿಮೆಂಟ್ ಅವಧಿ ಮುಗಿದ ಹಿನ್ನಲೆ ಹಾಗೂ ಹೆಚ್ಚಿನ ದರಕ್ಕೆ ಔಷಧಿ ಮಾರಾಟ ಆರೋಪ ದಡಿಯಲ್ಲಿ ಡ್ರಗ್ಸ್ ನಿಯಂತ್ರಣಾಧಿಕಾರಿಗಳು ಲೈಸೆನ್ಸ್ ರದ್ದು ಮಾಡಿದ್ದಾರೆ.
ಲೈಸೆನ್ಸ್ ರದ್ದಾದ ಹಿನ್ನಲೆಯಲ್ಲಿ ವಿಮ್ಸ್ ಒಪ್ಪಂದ ರದ್ದುಗೊಳಿಸಿದೆ. ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರ ಬಂದ್ ಆಗಿದ್ದಕ್ಕೆ ಶಾಸಕ ಸೋಮಶೇಖರ್ ರೆಡ್ಡಿ ( SOMASHEKHAR REDDY )ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಪ್ಪಂದ ನವೀಕರಣ ಮಾಡಿಕೊಂಡು ಜನ ಔಷಧಿ ಕೇಂದ್ರ ಮುಂದುವರಿಸಬೇಕಿತ್ತು. ಆದರೆ ವಿಮ್ಸ್ ನಿರ್ದೇಶಕರ ನಿರ್ಲಕ್ಷ್ಯದಿಂದ ಜನ ಔಷಧಿ ಕೇಂದ್ರ ಬಂದ್ ಆಗಿದೆ. ಕೂಡಲೇ ಅಗ್ರಿಮೆಂಟ್ ನವೀಕರಣ ಮಾಡಿಕೊಂಡು ಜನ ಔಷಧಿ ಕೇಂದ್ರ ಆರಂಭಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ : –ಕುತೂಹಲ ಮೂಡಿಸಿದ ಹೆಚ್. ವಿಶ್ವನಾಥ್ ಸಿದ್ದರಾಮಯ್ಯ ಭೇಟಿ…!
ಜನ ಔಷಧಿ ಕೇಂದ್ರ ಬಂದ್ ಆಗಿದ್ದಕ್ಕೆ ಧರಣಿ
ಜನ ಔಷಧಿ ಕೇಂದ್ರ ಬಂದ್ ಆಗಿದ್ದಕ್ಕೆ ಜನ ಔಷಧಿ ಕೇಂದ್ರದ ಉಸ್ತುವಾರಿ ಪ್ರದೀಪ್ ಧರಣಿ ನಡೆಸಿದ್ದಾರೆ. ಖಾಸಗಿ ಮೆಡಿಕಲ್ ಶಾಪ್ ಗಳ ಒತ್ತಡಕ್ಕೆ ಮಣಿದು ಜನ ಔಷಧಿ ಕೇಂದ್ರ ಬಂದ್ ಮಾಡಿಸಲಾಗಿದೆ. ಖಾಸಗಿ ಮೆಡಿಕಲ್ ಶಾಪ್ ಗಳ ಒತ್ತಡಕ್ಕೆ ವಿಮ್ಸ್ ನಿರ್ದೇಶಕರು ಮಣಿದಿದಿದ್ದಾರೆ ಎಂದು ವಿಮ್ಸ್ ನಿರ್ದೇಶಕರ ವಿರುದ್ದ ಪ್ರದೀಪ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : – ಕ್ರಿಶ್ಚಿಯನ್ ಸಮುದಾಯದ ಮತ ಸೆಳೆಯಲು ಮುಂದಾದ್ರಾ ರೆಡ್ಡಿ..?