ಇದು ನಿಜವಾದ ಅಹಿಂದ ಕಾರ್ಯಕ್ರಮ – ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ

ನಾಯಕ ಸಮುದಾಯ ಸ್ನೇಹಕ್ಕೂ ಸೈ ಹೋರಾಟಕ್ಕೂ ಸೈ. ವಾಲ್ಮೀಕಿ ಗುರುಗಳ ಸ್ಪೂರ್ತಿಯಿಂದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಶ್ರೀರಾಮಚಂದ್ರ ಯಾವ ರೀತಿ ಆದರ್ಶ ಆಗಿದ್ದಾರೋ ಅದೇ ರೀತಿ ವಾಲ್ಮೀಕಿ ಸಮಾಜ ಇರಬೇಕಾಗಿದೆ ಎಂದು ಸಿಎಂ ಬೊಮ್ಮಾಯಿ ( BASAVARAJ BOMMAI ) ಹೇಳಿದ್ದಾರೆ.

ನಾಯಕ ಸಮುದಾಯ ಸ್ನೇಹಕ್ಕೂ ಸೈ ಹೋರಾಟಕ್ಕೂ ಸೈ. ವಾಲ್ಮೀಕಿ ಗುರುಗಳ ಸ್ಪೂರ್ತಿಯಿಂದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಶ್ರೀರಾಮಚಂದ್ರ ಯಾವ ರೀತಿ ಆದರ್ಶ ಆಗಿದ್ದಾರೋ ಅದೇ ರೀತಿ ವಾಲ್ಮೀಕಿ ಸಮಾಜ ಇರಬೇಕಾಗಿದೆ ಎಂದು ಸಿಎಂ ಬೊಮ್ಮಾಯಿ ( BASAVARAJ BOMMAI ) ಹೇಳಿದ್ದಾರೆ.

Sc-st ಸಮುದಾಯಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆ ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮಾತನಾಡಿದ ಅವರು, 60 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಏನೂ ಮಾಡಿದೆ. SC-ST ಸಮುದಾಯವನ್ನು ಮತಬ್ಯಾಂಕ್ ಮಾಡಿಕೊಂಡಿದೆ. ಇದುವರೆಗೆ SC-ST ಸಮುದಾಯಕ್ಕೆ ಏನೂ ಮಾಡಿಲ್ಲ. SC-ST ಅಹಿಂದ ಸಮುದಾಯ ನಮ್ಮ ಪರವಾಗಿದೆ ಅಂತಾ ಹೇಳುವ ಸಿದ್ದರಾಮಯ್ಯ. ಸಿದ್ದರಾಮಯ್ಯಯಣ್ಣಾ ಬಾರಪ್ಪಾ ಇಲ್ಲಿಗೆ ಬಂದು ನೋಡು. ಇದು ನಿಜವಾದ ಅಹಿಂದ ಕಾರ್ಯಕ್ರಮ. ಅಹಿಂದ ಹೆಸರು ಹೇಳಿಕೊಂಡು ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ಅಹಿಂದ ಸಮಾಜಕ್ಕೆ ಸಿದ್ದರಾಮಯ್ಯ ದ್ರೋಹ ಬಗೆದಿದ್ದಾರೆ. ಎಸ್ ಟಿ ಮಹಿಳೆಯನ್ನ ಬಿಜೆಪಿ ರಾಷ್ಟ್ರಪತಿ ಮಾಡಿದೆ. ಇದುವರೆಗೂ ಎಸ್ ಟಿ ಸಮುದಾಯದ ರಾಷ್ಟ್ರಪತಿಯನ್ನ ಒಪ್ಪಿಕೊಳ್ಳುತ್ತಿಲ್ಲ. SC-ST ಸಮುದಾಯದ ಶಾಪ ಕಾಂಗ್ರೆಸ್ ಗೆ ತಟ್ಟುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಸಿದ್ದರಾಮಯ್ಯ ಸುನಾಮಿ ಎದ್ದಿದೆ ಅಂತಾ ಹೇಳಿದ್ರು. ಇದನ್ನೂ ಓದಿ :– ನಮ್ಮ ಸಿಎಂಗೆ ಜೋಡಿ ಗುಂಡಿಗೆ ಇದೆ – ಶ್ರೀಕೃಷ್ಣನಂತೆ ಸಿಎಂ ಕೂಡ ಸುದರ್ಶನ ಚಕ್ರ ಬಿಟ್ಟಿದ್ದಾರೆ – ಶ್ರೀರಾಮುಲು

ಇಲ್ಲಿಗೆ ಬಂದು ನೋಡಿ ಸುನಾಪಿ ಅಪ್ಪ ಎದ್ದಿದೆ. ಬಳ್ಳಾರಿ ( BALLARI ) ಯಲ್ಲಿ ಗೆದ್ದು ಸೋನಿಯಾ ಗಾಂಧಿ ಮೋಸ ಮಾಡಿದ್ದಾರೆ. ಮೂರು ಸಾವಿರ ಕೋಟಿ ಕೊಡುವುದು ದಾಗಿ ಹೇಳಿ ಮೂರು ರೂಪಾಯಿ ಕೊಡಲಿಲ್ಲ. ಇಂತಹ ಪಕ್ಷಕ್ಕೆ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗಿದೆ. ಮೀಸಲಾತಿ ಮಾತ್ರವಲ್ಲ ಈ ಸಮುದಾಯಕ್ಕೆ ಎಸ್ ಸಿಪಿ ಟಿಎಸ್ ಪಿ ಮೂಲಕ 28 ಸಾವಿರ ಕೋಟಿ ನೀಡಿದ್ದೇವೆ. ಮೀಸಲಾತಿ ಹೆಚ್ಚಳದ ಬಗ್ಗೆ ರಾಮುಲು ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ರು. ರಾಮುಲು ಕೊಟ್ಟ ಮಾತಿನಂತೆ ಶ್ರೀರಾಮುಲು ನಡೆದುಕೊಂಡಿದ್ದಾರೆ. ಶ್ರೀರಾಮುಲು ರಕ್ತ ಪವಿತ್ರವಾದದ್ದು. ಭಾವನೆಗಳ ಮೂಲಕ ಶ್ರೀರಾಮುಲು ಜನರ ಹೃದಯ ಗೆದ್ದಿದ್ದಾರೆ. ವಾಲ್ಮೀಕಿ ಸಮಾಜದ ಹೃದಯ ಸಾರ್ಮಾಟ ಶ್ರೀರಾಮುಲು. ಶ್ರೀರಾಮುಲು ಅವರನ್ನು ಸಿದ್ದರಾಮಯ್ಯ ಪೆದ್ದ ಅಂತಾ ಹೇಳಿದ್ರು. ಸಿದ್ದರಾಮಯ್ಯ ನವರೇ ನೀವು ಮುಖ್ಯಮಂತ್ರಿಯಾದವರು. ಶ್ರೀರಾಮುಲು ( SRIRAMULU ) ಅವರು ಇನ್ನೂ ಮುಖ್ಯಮಂತ್ರಿಯಾಗಿಲ್ಲ. ಮುಂದೊಂದು ದಿನ ಆ ಕಾಲ ಕೂಡಿ ಬರುತ್ತೆ. ಹಾಲುಮತ ಸಮುದಾಯಕ್ಕೂ ಸಿದ್ದರಾಮಯ್ಯ ಏನೂ ಮಾಡಲಿಲ್ಲ. SC-ST ಸಮುದಾಯ ಮನಸ್ಸು ಮಾಡಿದ್ರೆ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಬಹುದು ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ರು.

ಇದನ್ನೂ ಓದಿ :–  ಮಂಗಳೂರು ಆಟೋ ಸ್ಫೋಟ ಪ್ರಕರಣ- ಮೈಸೂರಿಗೂ ಇದೆ ನಂಟು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!