ಸುಪ್ರೀಂ ಕೋರ್ಟ್ ( suprem court ) ನಲ್ಲಿ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆ ದುರ್ಗಮ್ಮ ತಾಯಿಗೆ ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸೋದಾಗಿ ಬೇಡಿಕೊಂಡಿದ್ದೆ. ಆದ್ದರಿಂದ ದೇವಸ್ದಾನಕ್ಕೆ ಭೇಟಿ ನೀಡಿದ್ದೇನೆ ಎಂದು ಜನಾರ್ದನ ರೆಡ್ಡಿ ( janaradhana redddy ) ಹೇಳಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಇಡೀ ದೇಶಕ್ಕೆ ಒಳ್ಳೆದಾಗಲಿ ಅಂತಾ ದೇವಿಗೆ ಪೂಜೆ ಸಲ್ಲಿಸಿದ್ದೇನೆ. ನನ್ನ ಮೇಲೆ ಕೇಸ್ ಹಾಕಿ 12 ವರ್ಷವಾಯ್ತು. ಕಳೆದ 12 ವರ್ಷಗಳಿಂದ ಕೇಸ್ ನಡೆಯುತ್ತಿಲ್ಲ. ಹೀಗಾಗಿ ನಾನು ಪ್ರತಿ ದಿನ ಟ್ರಯಲ್ ನಡೆಸುವಂತೆ ಕೋರ್ಟ್ ಗೆ ಕೇಳಿದ್ದೇನೆ. 3-4 ತಿಂಗಳಲ್ಲೇ ಕೇಸ್ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ನಾನು ಬಳ್ಳಾರಿ ಗಾಳಿಯನ್ನು ಸೇವಿಸಬೇಕು. ಕಳೆದ 14 ತಿಂಗಳಿಂದ ನಾನು ಕೇವಲ ಮನೆ ಹಾಗೂ ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ. ಆದರೂ ಪದೇ ಪದೇ ಸಿಬಿಐ ಅಧಿಕಾರಿಗಳು ಕಿರುಕುಳ ಕೊಡ್ತಾ ಇದ್ದಾರೆ. ನನಗೆ ಸುಪ್ರಿಂ ಕೋರ್ಟ್ ಸಂಪೂರ್ಣವಾಗಿ ಬಳ್ಳಾರಿಯಲ್ಲಿರಲು ಅನುಮತಿಕೊಟ್ಟಿದೆ. ಇದನ್ನೂ ಇದಿ : – ನಾನು ಮತ್ತೆ ಕಾಂಗ್ರೆಸ್ ಗೆ ಹೋಗೋ ಮಾತೇ ಇಲ್ಲ – ಭೈರತಿ ಬಸವರಾಜ್
ಕಳೆದ 14 ತಿಂಗಳಿಂದ ನಾನು ಬಳ್ಳಾರಿ ( bellari ) ಯಲ್ಲೇ ಇದ್ದೇನೆ. ಆದ್ರೆ ಕೋರ್ಟ್ ನಲ್ಲಿ ವಾದ ಮಾಡುವ ಸಂದರ್ಭದಲ್ಲಿ ನಾನು ಇಲ್ಲಿರೋದಕ್ಕೆ ಆಕ್ಷೇಪವ್ಯಕ್ತಪಡಿಸಿದ್ದಾರೆ. ಆದ್ರೆ ನಮ್ಮ ಲಾಯರ್ ಗಳು ವಾದ ಮಾಡಿ ರೆಡ್ಡಿ ಮಗಳಿಗೆ ಹೆರಿಗೆ ಆಗಿದೆ, ಈ ಸಂದರ್ಭದಲ್ಲಿ ಆಕ್ಷೇಪ ಮಾಡೋದು ತಪ್ಪು ಅಂತಾ ತಿಳಿಸಿದ್ದಾರೆ. ಆದರೂ ಪದೇ ಪದೇ ಅಧಿಕಾರಿಗಳು ಕಿರುಕುಳ ಕೊಡ್ತಾ ಇದ್ದಾರೆ. ಕೇಸ್ ಪ್ರತಿ ದಿನ ನಡೆಯಬೇಕಾದ್ರೆ ರೆಡ್ಡಿ ಬಳ್ಳಾರಿಯಲ್ಲಿ ಇರಬಾರದು ಅಂತಾ ಆಕ್ಷೇಪ ಮಾಡ್ತಾ ಇದ್ದಾರೆ. ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣವಾದ ನಂಬಿಕೆ ಇದೆ. ಇದೇ ಕಾರಣದಿಂದ ನಾನು ನಿಮ್ಮ ಮುಂದೆ ನಿಂತು ಮಾತಾಡುತ್ತಿದ್ದೇನೆ. ನಾನು ಕೋರ್ಟ್ ನಲ್ಲಿರುವ ಪ್ರಕರಣಗಳ ಬಗ್ಗೆ ಹೆಚ್ಚು ಮಾತಾಡಲ್ಲ. ನಾನು ಬಳ್ಳಾರಿಯಲ್ಲೇ ಇದ್ದೇನೆ. ಸಮಯ ಬಂದಾಗ ನಾನು ಹೊರಗಡೆ ಬರುವೆ ಎಂದು ಹೇಳಿದ್ರು.
ರಾಜಕೀಯಕ್ಕೆ ರೆಡ್ಡಿ ಕಂಬ್ಯಾಕ್ ವಿಚಾರ
ಮಗಳ ಮದುವೆ ಆಯ್ತು, ಇಬ್ಬರು ಮೊಮ್ಮಕಳಾದ್ರು, ಮಗ ಡಿಗ್ರಿ ಮುಗಿಸಿಕೊಂಡಿದ್ದಾನೆ. ಅವನಿಗೆ ಚಿತ್ರರಂಗದಲ್ಲಿ ಇಂಟ್ರೆಸ್ಟ್ ಇದೆ, ಅದರಲ್ಲಿ ಬದುಕು ಕಂಡುಕೊಂಡಿದ್ದಾನೆ. ನನ್ನ ವಿಚಾರದಲ್ಲಿ ತಾಯಿ ದುರ್ಗಾಮಾತೆ ಒಳ್ಳೆ ದಾರಿ ತೋರಿಸ್ತಾಳೆ. ದೇವಸ್ಥಾನದಲ್ಲಿ ನನಗೆ ರಾಜಕೀಯ ಮಾತಾಡಲು ಇಷ್ಟ ಇಲ್ಲ. ಆ ತಾಯಿ ಏನು ದಾರಿ ತೋರಿಸ್ತಾಳೋ ಹಾಗೆ ಮಾಡುವೆ. ಸಾರ್ವಜನಿಕವಾಗಿ ನಾವು ಬದುಕಬೇಕು ಅಂದ್ರೆ ನಾವು ಎರಡು ಮಾರ್ಗದಲ್ಲಿ ಬದುಕಬಹುದು ಎಂದು ಹೇಳಿದ್ರು.
ಇದನ್ನೂ ಇದಿ : – ಎದೆ ಮೇಲೆ ರಾಹುಲ್ ಗಾಂಧಿ ಟ್ಯಾಟೂ ಹಾಕಿಸಿಕೊಂಡ ಯುವಕ