ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವೃದ್ಧೆಯನ್ನು ಆಸ್ಪತ್ರೆ ಐಸಿಯುನಿಂದ ಸಹಿ ಮಾಡಲು ಸಬ್ ರಿಜಿಸ್ಟ್ರಾರ್ ಕಚೇರಿಗೆ ಸಿಬ್ಬಂದಿ ಕರೆಸಿಕೊಂಡಂತಹ ಘಟನೆ ಬೆಳಗಾವಿ ( belgavi ) ಜಿಲ್ಲೆಯಲ್ಲಿ ನಡೆದಿದೆ. ಐಸಿಯುನಿಂದ ಸ್ಟ್ರೆಚರ್ ನಲ್ಲೇ ವೃದ್ಧೆ ಮಹಾದೇವಿ (80) ಕುಟುಂಬಸ್ಥರು ಕರೆತಂದಿದ್ದಾರೆ.
ಆಸ್ತಿಹಂಚಿಕೆ, ಆಸ್ತಿಹಕ್ಕು ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ನೋಂದಣಿ ಮಾಡಲು ಕರೆತರಲಾಗಿದೆ. ವೃದ್ಧೆ ಐಸಿಯುನಲ್ಲಿದ್ದ ಕಾರಣ ಆಸ್ಪತ್ರೆಗೆ ಬರಲು ಉಪನೋಂದಣಾಧಿಕಾರಿ ಪದ್ಮನಾಭ್ ಗುಡಿ ಅವರಿಗೆ ಮನವಿ ಮಾಡಲಾಗಿದೆ. ಆದರೆ ಮನವಿ ನಿರಾಕರಿಸಿದ್ದಾರೆ. ಆಸ್ಪತ್ರೆಗೆ ಬಂದು ವೃದ್ಧೆ ಸಹಿ ಪಡೆಯಲು ಹಣಕ್ಕೆ ಬೇಡಿಕೆ ಆರೋಪ ಮಾಡಿದ್ದು, ಹಣ ನೀಡಲು ಒಪ್ಪದೇ ವೃದ್ಧೆಯನ್ನು ಕುಟುಂಬಸ್ಥರು ಕಚೇರಿಗೆ ಕರೆತಂದಿದ್ದಾರೆ. ಇದನ್ನೂ ಇದಿ : – ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ ಮಾಜಿ ಸಿಎಂ S.M ಕೃಷ್ಣ
ಆಸ್ಪತ್ರೆಯ ಬೆಡ್ ಮೇಲೆ ಕಚೇರಿಗೆ ಬಂದು ಅಜ್ಜಿ ಸಹಿ ಮಾಡುವ ವಿಡಿಯೋ ವೈರಲ್ ಆಗಿದೆ. ಸದ್ಯ ಸಾರ್ವಜನಿಕ ವಲಯದಲ್ಲಿ ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯೆಗೆ ಅಜ್ಜಿಯ ಕುಟುಂಬಸ್ಥರು ನಕಾರ ಎಂದರು.
ಇದನ್ನೂ ಇದಿ : – ಮಧ್ಯಾಹ್ನ 2 ಗಂಟೆಗೆ ಸಿಇಟಿ ಪರಿಷ್ಕೃತ ರಾಂಕಿಂಗ್ ಪಟ್ಟಿ ಪ್ರಕಟ