ಆಟೋ, ಟೆಂಪೋ ಚಾಲಕರಿಂದ ಆರ್.ಟಿ.ಓ ( RTO) ಅಧಿಕಾರಿಗಳು ದಂಡ ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಾನಂದ ಮಗದುಮ್ಮ ಅವರನ್ನ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ( LAKSHMI HEBALKAR ) ತರಾಟೆಗೆ ತೆಗೆದುಕೊಂಡಿದ್ದಾರೆ.
ಹೊಟ್ಟೆಪಾಡಿಗಾಗಿ ಮಳೆಯಲ್ಲಿ, ಚಳಿಯಲ್ಲಿ, ಬಿಸಿಲಲ್ಲಿ ದುಡಿಯುತ್ತಿದ್ದಾರೆ. ಕಳ್ಳತನ, ಮೋಸ, ಸುಳ್ಳು ಹೇಳದೆ ಬೆವರು ಸುರಿಸಿ ದುಡಿಯವವರ ಮೇಲೇ ಕೇಸ್ ಹಾಕ್ತಿದ್ದಿರಿ. ಮೇಲಿನವರು ಟಾರ್ಗೆಟ್ ಕೊಟ್ಟಿದ್ದಾರೆ ಅಂತ ಕೇಸ್ ಹಾಕಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸಾಲ ಕಟ್ಟಿ, ಉಳಿದ ದುಡ್ಡಲ್ಲಿ ಹೊಟ್ಟೆ ತುಂಬಿಸಿಕೊಳ್ತಾರೆ. ನಿಮಗೆ ಟಾರ್ಗೆಟ್ ಕೊಟ್ಟಿರುವುದಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡ್ತಿರಾ..? ನೀವು ಸರ್ಕಾರಿ ನೌಕರರು, ನಾನು ಸರ್ಕಾರದಲ್ಲಿ ಕೆಲಸ ಮಾಡ್ತಿನಿ. ಕಾನೂನು ಚೌಕಟ್ಟು ಬಿಟ್ಟು ಏನು ಆಗಲ್ಲ. ಇದನ್ನೂ ಓದಿ : – ಮಂಗಳೂರಿನ ಪಬ್ ನಲ್ಲಿ ವಿದ್ಯಾರ್ಥಿಗಳ ಮೋಜುಪಾರ್ಟಿಗೆ ಭಜರಂಗದಳದಿಂದ ತಡೆ
ಬಡವರಿಗೆ ತೊಂದರೆ ಆಗಬಾರದು ಎಂದು ನಿಮ್ಮ ಬಳಿ ಬಂದಿದ್ದೇನೆ. ಇವತ್ತು ನಿಮ್ಮ ಮುಂದೆ ಕುಂತಿದ್ದೀನಿ ನಾಳೆ ನಿಮ್ಮ ಕಚೇರಿ ಮುಂದೆ ಬಂದು ಧರಣಿ ಮಾಡ್ತೀನಿ. ಎಲ್ಲವನ್ನೂ ನೀವು ಕಾನೂನು ಪ್ರಕಾರ ಮಾಡ್ತಿರಾ? ನಿಮ್ಮಗೆ ಒತ್ತಡ ಇದ್ರೆ ಅದನ್ನು ಬೇರೆ ರೀತಿ ಮನವೊಲಿಸಿ. ದುಡಿದು ತಿನ್ನುವ ವರ್ಗಕ್ಕೆ ಕಿರುಕುಳ ನೀಡುವುದನ್ನು ನಿಲ್ಲಿಸಿ. ಮೊದಲೇ ದೇಶದಲ್ಲಿ ಉದ್ಯೋಗ ಇಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : – ಕಾರ್ಗಿಲ್ ವಿಜಯ್ ದಿವಸ್ – ರಾಷ್ಟ್ರಪತಿ, ಪ್ರಧಾನಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ