ಬೆಳಗಾವಿ ಸುಕ್ಷೇತ್ರ ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ದೇವಸ್ಥಾನ ಹುಂಡಿಯಲ್ಲಿ ಹಣದ ಜೊತೆಗೆ ಭಕ್ತರು ಹಾಕಿದ ಚಿತ್ರ ವಿಚಿತ್ರ ಪತ್ರಗಳು ಪತ್ತೆಯಾಗಿದೆ.
ಪತ್ರವನ್ನು ಹುಂಡಿಗೆ ಹಾಕಿದ್ರೆ ದೇವಿ ಕೋರಿಕೆ ಈಡೇರಿಸುತ್ತಾಳೆಂಬ ನಂಬಿಕೆಯಿಂದ ಭಕ್ತರ ವಿಚಿತ್ರ ಕೋರಿಕೆ ಪತ್ರಗಳನ್ನ ಕಂಡು ಹುಂಡಿ ಎಣಿಕೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಏಳು ಕೊಳ್ಳದ ಯಲ್ಲಮ್ಮದೇವಿಗೆ ಭಕ್ತನೊಬ್ಬ ಹಣದ ಆಮೀಷವೂಡ್ಡಿದ್ದಾನೆ. ಇದನ್ನೂ ಓದಿ : – ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿದ್ಯಾ ಭ್ರೂಣ ಹತ್ಯೆ ?
ನನಗೆ ಮಾಟ ಮಂತ್ರ ಮಾಡಿಸಿದವರಿಗೆ ತಕ್ಕ ಶಿಕ್ಷೆ ನೀಡಿದರೆ 50,001 ಕಾಣಿಕೆ ನೀಡುವುದಾಗಿ ಪತ್ರ ಬರೆದು ಹುಂಡಿಗೆ ಹಾಕಿದ್ದಾನೆ. 2 ದಿನಗಳ ಕಾಲ ದೇವಸ್ಥಾನದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 40 ದಿನದಲ್ಲಿ 1.13ಕೋಟಿ ರೂ. ನಗದು ಸಂಗ್ರಹ ಹಾಗೂ 22ಲಕ್ಷ ರೂ.ಮೌಲ್ಯದ ಬಂಗಾರ, 3.86ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣ ಪತ್ತೆಯಾಗಿದೆ.
ಇದನ್ನೂ ಓದಿ : – ಸುಭದ್ರ ಸರ್ಕಾರ ಉರುಳಿಸೋದು ಬಿಜೆಪಿಯವರಿಗೆ ಹವ್ಯಾಸವಾಗಿದೆ – ಟ್ವೀಟ್ ಮೂಲಕ ಖರ್ಗೆ ಆಕ್ರೋಶ