ಶಾಸಕ ರಮೇಶ್ ಜಾರಕಿಹೊಳಿ ( RAMESH JARAKI HOLI ) ಜೆಡಿಎಸ್ ಸೇರ್ತಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಇದೀಗ ಅದಕ್ಕೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿರುವ ಬೆಳಗುಂದಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ. ನನ್ನ ಮನಸಿಗೆ ಬೇಜಾರಾಗಿ 1 ವರ್ಷದಿಂದ ಮಾಧ್ಯಮದಿಂದ ದೂರವಿದ್ದೆ. ಅನಿವಾರ್ಯವಾಗಿ ಇಂದು ಒಂದೇ ಒಂದು ವಿಷಯ ಸ್ಪಷ್ಟಪಡಿಸುವೆ. ಹೆಚ್.ಡಿ.ಕುಮಾರಸ್ವಾಮಿ ( H.D KUMARASWAMY ) ಜೊತೆ ನಾನು ಮಾತನಾಡಿದ್ದು ನಿಜ. ನನಗೆ ಸುಳ್ಳು ಹೇಳುವ ಚಟವಿಲ್ಲ. ದಿನನಿತ್ಯ ಕುಮಾರಸ್ವಾಮಿ ನನ್ನ ಜೊತೆ ಫೋನ್ ನಲ್ಲಿ ಟಚ್ನಲ್ಲಿದ್ದಾರೆ. ಆದ್ರೆ ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ :– ಓಟರ್ ಲಿಸ್ಟ್ ಡಿಲೀಟ್ ವಿಚಾರವಾಗಿ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ – ಹೆಚ್.ಡಿ ಕುಮಾರಸ್ವಾಮಿ
2023ಕ್ಕೆ ಬಿಜೆಪಿಯ ಹತ್ತು ಜನ ಪ್ರಮುಖರಲ್ಲಿ ನಾನು ಒಬ್ಬ ಆಗುತ್ತೇನೆ. ಏಕೆಂದರೆ ಬಹಳಷ್ಟು ಜನ ರಿಟೈಡ್ ಆಗುತ್ತಾರೆ, ಹತ್ತು ಮಂದಿ ಬಿಜೆಪಿಯ ಪ್ರಮುಖರಲ್ಲಿ ನಾನೇ ಇರುವಾಗ ನಾನು ಬಿಜೆಪಿ ಏಕೆ ಬಿಡಲಿ..? ನಾನು ಬಿಜೆಪಿ ಬಿಡಲ್ಲ.. ಬಿಡಲ್ಲ.. ಎಂದು ರಮೇಶ್ ಜಾರಕಿಹೊಳಿ ಪುನರುಚ್ಚರಿಸಿದರು. ಬಿಜೆಪಿಯಲ್ಲಿ ಉನ್ನತ ಹುದ್ದೆಗೆ ಹೋಗಿ ಸೇವೆ ಮಾಡುತ್ತೇನೆ. 2023ರ ವಿಧಾನಸಭೆ 2024ರ ಲೋಕಸಭೆ ಚುನಾವಣೆಯಲ್ಲಿ ನಾನು ಮೇನ್ ಲೀಡರ್ ಆಗಿರುತ್ತೇನೆ. ನಾನು ಒಬ್ಬ ಪ್ರಮುಖ ನಾಯಕನಾಗಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಬಿಜೆಪಿ ಬೆಳೆಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ :– ಮಂಗಳೂರಿನಲ್ಲಿ ಬಸವರಾಜ್ ಬೊಮ್ಮಾಯಿ – ಕಟೀಲ್ ಭೇಟಿ