ಸಿಲಿಕಾನ್ ಸಿಟಿ ಬೆಂಗಳೂರಿ ( BANGALORE ) ನಲ್ಲಿ ಚಿರತೆ ಕಾಟದಿಂದ ಮತ್ತಷ್ಟ ಆತಂಕ ಹೆಚ್ಚಾಗಿದೆ. ಕಳೆದ 3 ದಿನದಿಂದ ಅಧಿಕಾರಿಗಳಿಟ್ಟ ಬೋನಿಗೆ ಬೀಳದ ಚಿರತೆ ಅತ್ತ ಅಧಿಕಾರಿಗಳನ್ನು, ಇತ್ತ ಸ್ಥಳೀಯರನ್ನು ಮತ್ತಷ್ಟು ಕಂಗೆಡಿಸಿದೆ. ದಿನ ಬೆಳಗಾದರೆ ಜನರು ಓಡಾಡುವುದೇ ದುಸ್ತರವಾಗಿದೆ.
ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗ್ತಿದೆಯೇ ಹೊರತು ಚಿರತೆ ಮಾತ್ರ ಸಿಕ್ಕಿ ಬೀಳ್ತಿಲ್ಲ. ನಿನ್ನೆ ರಾತ್ರಿ ಕೂಡ ಅರಣ್ಯ ಸಿಬ್ಬಂದಿ ವಿಶೇಷ ಕೂಂಬಿಂಗ್ ಮಾಡಿದ್ದು, ಚಿರತೆಯ ಜಾಡು ಮತ್ತಷ್ಟು ನಿಗೂಢವಾಗಿದೆ. ಅತ್ತ ಚಿರತೆ ಬಂಧನಕ್ಕಾಗಿ ಕೆಲ ಕಡೆ ಬೋನ್ ಇಟ್ಟಿದ್ದರೂ ಪ್ರಯೋಜನವಾಗ್ತಿಲ್ಲ. ಇನ್ನೊಂದೆಡೆ ಕಂಡು ಮರೆಯಾಗಿರುವ ಚಿರತೆಯಿಂದ ಜನವಸತಿ ಪ್ರದೇಶದಲ್ಲಿ ಮತ್ತಷ್ಟು ಆತಂಕ ಮನೆಮಾಡಿದ್ದು, ಎಚ್ಚರವಾಗಿರುವಂತೆ ಅರಣ್ಯ ಇಲಾಖಾಧಿಕಾರಿಗಳು ಎಚ್ಚರಿಕೆ ನೀಡ್ತಿದ್ದಾರೆ.
ಇದನ್ನೂ ಓದಿ : – ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ನಾಳೆಯಿಂದ ಮಳೆಯ ಅಬ್ಬರ ಸಾಧ್ಯತೆ