ಓಲಾ, ಉಬರ್ ಅಷ್ಟೇ ಅಲ್ಲದೆ ಸಾಮಾನ್ಯ ಆಟೋ ಚಾಲಕರಿಂದ ಜನರ ಜೇಬಿಗೆ ಕತ್ತರಿ

ಬೆಂಗಳೂರಿ (Bengaluru) ನಲ್ಲಿ ಮೀಟರ್ ಹಾಕದೆ ಆಟೋ ಚಾಲಕರು (Auto driver) ಸುಲಿಗೆ ಮಾಡ್ತಿದ್ರು. ಕನಿಷ್ಠ ದರ ನಿಗದಿಯಾಗಿದ್ದರೂ ಆಟೋ ಚಾಲಕರು ಕ್ಯಾರೇ ಎನ್ನುತ್ತಿಲ್ಲ. ಓಲಾ, ಉಬರ್ (OLA ,Uber) ಚೆಕ್ ಮಾಡಿ ಅಷ್ಟೇ ದರ ಕೊಡಿ ಎಂದು ಚಾಲಕರು ಹೇಳುತ್ತಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಆ್ಯಪ್ ನಲ್ಲಿ ಎಷ್ಟು ತೋರಿಸುತ್ತೋ ಅಷ್ಟೇ ಕೊಡಿ ಎಂದು ಚಾಲಕರು ಕೇಳುತ್ತಾರೆ.

ಮೀಟರ್ ಗಿಂತ ಹೆಚ್ಚಿನ ದರ ಕೇಳಲು ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆಯೂ ಕಾರಣವಾಗಿದೆ. ಆಟೋ ನಿಲ್ದಾಣಗಳಲ್ಲಿ, ರಸ್ತೆಗಳಲ್ಲಿ ಮೀಟರ್ ಗಿಂತ ಹೆಚ್ಚಿನ ದರವನ್ನು ಆಟೋ ಚಾಲಕರು ಕೇಳುತ್ತಾರೆ. ಖುದ್ದು ಚಾಲಕರೇ ‘ಓಲಾ, ಉಬರ್ ಆ್ಯಪ್ ಗಳಲ್ಲಿ ಚೆಕ್ ಮಾಡಿ. ಅದರಲ್ಲಿ ಕೇಳುವಷ್ಟೇ ದರ ಕೊಡಿ’ ಎಂದು ಹೇಳುತ್ತಾರೆ. ಸದ್ಯ ನಗರದಲ್ಲಿ ಹೆಚ್ಚಿನ ಆಟೋ ಚಾಲಕರು ಮೀಟರ್ ಹಾಕುತ್ತಿಲ್ಲ. ಸರ್ಕಾರ ನಿಗದಿ ಪಡಿಸಿರುವ ಕನಿಷ್ಟ ದರ (0-2 ಕಿ.ಮೀ) 30 ರೂಪಾಯಿ. ಆ ಬಳಿಕ ಪ್ರತಿ ಕಿ.ಮೀ 21.5 ಇದೆ. ಆದರೆ, ಚಾಲಕರು ಕನಿಷ್ಠ 2 ಕಿ.ಮೀ ದೂರಕ್ಕೆ 260ರಿಂದ 270, 2ರಿಂದ 3 ಕಿ.ಮೀ ದೂರಕ್ಕೆ 2100, ಐದು ಕಿ.ಮೀಗಿಂತ ಹೆಚ್ಚಿನ ದೂರಕ್ಕೆ 2120ರಿಂದ 2150 ಕೇಳುತ್ತಾರೆ. ಇನ್ನು ಬಡಾವಣೆಗಳಿಂದ ನಗರದ ಮಾರುಕಟ್ಟೆ, ಬಸ್, ರೈಲ್ವೆ ನಿಲ್ದಾಣ ಹಾಗೂ ಕೇಂದ್ರಗಳಿಗೆ ತೆರಳಬೇಕು ಎಂದರಂತೂ ಮೀಟರ್ ಗಿಂತ ಮೂರು ಪಟ್ಟು ದರ ನೀಡಬೇಕು. ಓಲಾ, ಉಬರ್ ನಂತಹ ಆ್ಯಪ್ ಗಳು ಮಾತ್ರವಲ್ಲದೇ ಬಹುತೇಕ ಆಟೋರಿಕ್ಷಾಗಳು ಪ್ರಯಾಣಿಕರ ಸುಲಿಗೆಗೆ ನಿಂತಿದ್ದು, ಸಾರ್ವಜನಿಕರು ಬೇಸತ್ತಿದ್ದಾರೆ.

 ಇದನ್ನೂ ಓದಿ :-  ಇಂದಿನಿಂದ ಮತ್ತೆ ಆರಂಭವಾದ ಒತ್ತುವರಿ ತೆರವು ಕಾರ್ಯಾಚರಣೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!