ಓಲಾ, ಊಬರ್ ಸಂಸ್ಥೆಗಳಿಗೆ ಟಕ್ಕರ್ ನೀಡಲು ಆಟೋ ಚಾಲಕರ ಸಿದ್ಧತೆ – ಬರ್ತಿದೆ ಹೊಸ ಆ್ಯಪ್

ಓಲಾ ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಆಟೋ ( AUTO ) ಚಾಲಕರು ಮುಂದಾಗಿದ್ದು, ಆಟೋ ಯೂನಿಯನ್ ನಿಂದ ನೂತನ ಆ್ಯಪ್ ರಚಿಸಿದ್ದಾರೆ.

ಓಲಾ ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಆಟೋ ( AUTO ) ಚಾಲಕರು ಮುಂದಾಗಿದ್ದು, ಆಟೋ ಯೂನಿಯನ್ ನಿಂದ ನೂತನ ಆ್ಯಪ್ ರಚಿಸಿದ್ದಾರೆ. ಒಂದು ಕಡೆ ಆಟೋ ಚಾಲಕರಿಗೆ ವಂಚನೆಯಾಗುತ್ತಿದ್ದು, ಮತ್ತೊಂದು ಕಡೆ ಗ್ರಾಹಕರಿಗೂ ಓಲಾ ಊಬರ್ ವಂಚನೆ ಮಾಡುತ್ತಿವೆ ಎನ್ನಲಾಗುತ್ತಿದೆ.

ಇದರಿಂದ ಬೇಸತ್ತು ಯಾವುದೇ ಮಧ್ಯವರ್ತಿ ಇಲ್ಲದೆ ನಮ್ಮ ಯಾತ್ರಿ ( NAMMA YATRI ) ಅನ್ನೋ ಆಟೋ ಬುಕ್ಕಿಂಗ್ ಆ್ಯಪ್ ನ್ನು ಸಿದ್ಧಪಡಿಸಿದ್ದು, ನವೆಂಬರ್ ತಿಂಗಳಲ್ಲಿ ಆಟೋ ಯುನಿಯನ್ ಆ್ಯಪ್ ಬಿಡುಗಡೆ ಮಾಡುತ್ತಿದೆ. ಸರ್ಕಾರ ನಿಗದಿ ಮಾಡಿರುವ ಹಣವಷ್ಟೇ ಚಾರ್ಜ್ ಮಾಡಲು ನಿರ್ಧಾರ ಮಾಡಲಾಗಿದೆ. 2 ಕಿಲೋ ಮೀಟರ್ ಗೆ ಕೇವಲ 30 ರೂಪಾಯಿ. ಬುಕ್ಕಿಂಗ್ ಚಾಚ್೯ 10 ರೂಪಾಯಿ ಸೇರಿ ಒಟ್ಟು 40 ರೂಪಾಯಿಯಲ್ಲಿ ನೀವು ಕರೆದ ಕಡೆ, ನಿಗದಿತ ಕಿಲೋ ಮೀಟರ್ ಗಿಂತ ದೂರ ಸಂಚಾರ ಮಾಡಬಹು. ಇದನ್ನೂ ಓದಿ :- ಮುಸ್ಲಿಮರು ಕಾಂಡೋಮ್ ಗಳನ್ನು ಹೆಚ್ಚು ಬಳಸುತ್ತಾರೆ – ಮೋಹನ್ ಭಾಗವತ್ ಗೆ ತಿರುಗೇಟು ನೀಡಿದ ಓವೈಸಿ

1ಕಿಲೋ ಮೀಟರ್ ಗೆ 15 ರೂಪಾಯಿ ನಿಗದಿಯಾಗಿದ್ದು, ಆಟೋ ಯುನಿಯನ್ ಬಿಡುಗಡೆಯಾಗುತ್ತಿರುವ ಬಗ್ಗೆ ಆಟೋ ಚಾಲರಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಓಲಾ – ಊಬರ್ ಕಂಪನಿಗಳು ಮಾಡುತ್ತಿರುವ ತಪ್ಪಿಗೆ ಆಟೋ ಚಾಲಕರಿಗೆ ಕೆಟ್ಟ ಹೆಸರಿದೆ. ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ ಅಂತ ಗ್ರಾಹಕರು ದೂರುತ್ತಾರೆ. ಇದೀಗಾ ನಮ್ಮದೇ ಯುನಿಯನ್ ಇಂದ ಆ್ಯಪ್ ಬಿಡುಗಡೆ ಮಾಡುತ್ತಿರುವುದು ಖಷಿ ಇದೆ. ಆಟೋ ಚಾಲಕರ ಸಮಸ್ಯೆ ಏನು ಅಂತ ಯುನಿಯನ್ಗೆ ಗೊತ್ತಿದೆ. ನಮ್ಮ ಯಾತ್ರಿ ಆ್ಯಪ್ಗೆ ಸಪೋರ್ಟ್ ಮಾಡುತ್ತೇವೆ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ.

ಇದನ್ನೂ ಓದಿ :- ತಮ್ಮನ್ನು ಹೊಗಳಿದ ಶಾಸಕ ರಾಜೂಗೌಡಗೆ ವೇದಿಕೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕ್ಲಾಸ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!