ಕೆಎಸ್‌ಆರ್‌ಟಿಸಿ ( KSRTC ) ಬಸ್ಗೆ ಬೈಕ್ ಸವಾರ ಬಲಿಯಾದ ಘಟನೆ ನಡೆದಿದೆ. ತಡರಾತ್ರಿ 12.30ರಲ್ಲಿ ರಾಜ್ಕುಮಾರ್ ರಸ್ತೆ ( RAJKUMAR ROAD ) ಯಲ್ಲಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ರಮೇಶ್(39) ಮೃತಪಟ್ಟಿದ್ದಾರೆ. ಮೃತ ರಮೇಶ್ ಸ್ನೇಹಿತರು ಚಾಲಕ ಹಾಗೂ ಕಂಡಕ್ಟರ್ಗೆ ಹಿಗ್ಗಾ ಮುಗ್ಗ ಥಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಬರುತ್ತಿದ್ದ KSRTC ಬಸ್ ಪಕ್ಕದಲ್ಲಿ ಬಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಮೇಶ್ ತಲೆಗೆ ಗಾಯಗಳಾಗಿ ರಕ್ತ ಸ್ರಾವವಾಗಿದೆ. ಸ್ಥಳೀಯರು ಕೂಡಲೇ ರಮೇಶ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಮೇಶ್ ಮೃತಪಟ್ಟಿದ್ದಾರೆ. ಅಲ್ಲದೆ ಬೈಕ್ ಚಾಲಕನ ವಿರುದ್ಧ ಕೆಎಸ್‌ಆರ್‌ಟಿಸಿ ಬಸ್ ಚಾಲಕ, ಕಂಡಕ್ಟರ್ ಡ್ರಂಕ್ ಌಂಡ್ ಡ್ರೈವ್ ಆರೋಪ ಮಾಡಿದ್ದಾರೆ. ರಾಜಾಜಿನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಇದನ್ನೂ ಓದಿ : – ಸಿದ್ದರಾಮಯ್ಯ ಪರದೇಶಿ ಗಿರಾಕಿ ತರ ಕ್ಷೇತ್ರ ಹುಡುಕಿಕೊಂಡು ಹೋಗ್ತಿದ್ದಾರೆ – ಶ್ರೀರಾಮುಲು
ಮತ್ತೊಂದೆಡೆ ಸ್ಥಳ ಪರಿಶೀಲನೆ ವೇಳೆ ಮದ್ಯದ ಬಾಟಲ್ಗಳು ಪತ್ತೆಯಾಗಿವೆ. ಈ ಹಿನ್ನೆಲೆ ಕುಡಿದ ಅಮಲಿನಲ್ಲಿ ಬೈಕ್ ಸವಾರ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಮೂರು ಬೈಕ್ ಹಾಗೂ ಒಂದು ಕಾರ್ ನಲ್ಲಿ ರಮೇಶ್ ಹಾಗೂ ಸ್ನೇಹಿತರು ಬರುತ್ತಿದ್ದರು. ಅಪಘಾತದ ನಂತರ ಬಸ್ ಡ್ರೈವರ್ ಹಾಗೂ ಕಂಡಕ್ಟರ್ಗೆ ರಮೇಶ್ ಸ್ನೇಹಿತರು ಸುತ್ತುವರಿದು ಥಳಿಸಿದ್ದಾರೆ. ರಾಜಾಜಿನಗರ ( RAJAJINAGARA ) ಸಂಚಾರಿ ಠಾಣೆಯಲ್ಲಿ ಅಪಘಾತ ಸಂಬಂಧ ಮೃತನ ಕಡೆಯವರಿಂದ ದೂರು ದಾಖಲಾಗಿದ್ದು ಹಲ್ಲೆ ಸಂಬಂಧ ಕೆಎಸ್‌ಆರ್‌ಟಿಸಿ ಚಾಲಕ, ಕಂಟೆಕ್ಟರ್ ನಿಂದಲೂ ಪ್ರತಿದೂರು ದಾಖಲಾಗಿದೆ. ರಾಜಾಜಿನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : – ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಕೋರ್ಟ್ ಮೊರೆ – ED ಪ್ರಕರಣದಲ್ಲಿ ಬಂಧನದ ಭೀತಿ