ಹೆಬ್ಬಾಳ ( hebbla ) ಸ್ಟೀಲ್ ಬ್ರಿಡ್ಜ್ ಮಾಡುವ ವಿಚಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ( h.d kumarswamy ) ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಪ್ಲೈ ಓವರ್ ಗೆ ರೂಪುರೇಷೆ ಮಾಡಿದ್ದೆವು. ಪೆರಿಪರಲ್ ರಿಂಗ್ ರೋಡ್ ಗೆ ಸಿದ್ಧತೆ ನಡೆಸಿದ್ದೆವು.
ಕೊರಿಯಾ ಕಂಪನಿ ನಾವೇ ಮಾಡ್ತೇವೆಂದು ಬಂದಿತ್ತು. ಆಗ ಬಿಜೆಪಿ ( BJP ) ಯವರು ಅದನ್ನ ಮಾಡಲು ಬಿಡಲಿಲ್ಲ. ಸ್ಟೀಲ್ ಬ್ರಿಡ್ಜ್ ಗೆ ಬಿಜೆಪಿಯವರೇ ವಿರೋಧಿಸಿದ್ರು. ಈಗ ಅವರೇ ಮಾಡೋಕೆ ಹೊರಟಿದ್ದಾರೆ. ಇದು ಎಂತಹ ವಿಪರ್ಯಾಸ ನೋಡಿ ಎಂದು ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ :- ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಳೆ ಪ್ರಮಾಣ ವಚನ ಸ್ವೀಕಾರ